Asianet Suvarna News Asianet Suvarna News

ಜನತಾದರ್ಶನ ಅರ್ಜಿಗಳ ವಿಲೇವಾರಿಗೆ ಕೇವಲ 15 ದಿನ ಕಾಲಾವಕಾಶ: ಸಿಎಂ ಸಿದ್ದರಾಮಯ್ಯ ತಾಕೀತು

ಜನತಾ ದರ್ಶನದಲ್ಲಿ ಬಂದಿರುವ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. 15 ದಿನಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

CM Siddaramaiah warns officials to dispose of Janata darshana applications within 15 days sat
Author
First Published Nov 27, 2023, 5:00 PM IST

ಬೆಂಗಳೂರು (ನ.27): ರಾಜ್ಯದಲ್ಲಿ ಒಂದು ಸಣ್ಣ ಪಹಣಿ ಪಡೆಯುವುದಕ್ಕೂ ಆಗುತ್ತಿಲ್ಲವೆಂದು ಕೆಲವರು ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಅರ್ಜಿಗಳು ಬರುತ್ತಿರಲಿಲ್ಲ. ಈಗ ಬಂದಿರುವ ಅರ್ಜಿಗಳನ್ನು ಆಯಾ ಸಂಬಂಧಪಟ್ಟ ಜಿಲ್ಲೆಗಳ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಎಲ್ಲ ಅಧಿಕಾರಿಗಳು 15 ದಿನಗಳಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ ವರದಿ ನೀಡಬೇಕು. ಇಲ್ಲವೆಂದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್‌ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಜನತಾ ದರ್ಶನ ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಹಳ ಹಿಂದೆಯೇ ಜನತಾದರ್ಶನ ನಡೆಯಬೇಕಿತ್ತು. ಆದ್ರೆ ಇವತ್ತು ಇಲ್ಲಿ ಮಾಡಿದ್ದೇನೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗಳಿಗೆ ನಾನು ಹೇಳಿದ್ದೆ ಜಿಲ್ಲೆಗಳಲ್ಲಿ ಮಾಡಿ ವರದಿ ಕೊಡಿ ಎಂದು ಹೇಳಿದ್ದೆನು. ಕೆಲವರು ಮಾಡಿದ್ದಾರೆ ಕೆಲವರು ಮಾಡಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಸ್ವಂದಿಸದಿದ್ದರೆ ಹಾಗೇ ಉಳಿದುಬಿಡುತ್ತವೆ. ಇವತ್ತು ಕಂದಾಯ ಪೊಲೀಸ್ ಗೃಹ ಲಕ್ಷ್ಮಿ ಯೋಜನೆ , ಪೆನ್ಷನ್ ಆಗಿಲ್ಲ ಬಿಬಿಎಂಪಿ ಸಮಸ್ಯೆ, ಕೆಲಸ ಕೊಡ್ಸಿ, ಮನೆ ಇಲ್ಲ ಅಂತ ಬಂದಿದ್ದಾರೆ. ಅಂಗವಿಕಲರು ಸಾಕಷ್ಟು ಜನರು ಬಂದಿದ್ದರು ಅವರು ತ್ರೀ ಚಿಕ್ರವಹನಕ್ಕೆ ಬೇಡಿಕೆ ಇಟ್ಟು ಮನವಿಗಳು ಬಂದಿದ್ದಾವೆ. ಅದರಲ್ಲಿಯೂ ಕೆಲವು ರೈತರು ಜಮೀನಿನ ಪಹಣಿ ಖಾತೆಗಳ ಕೆಲಸಕ್ಕೆ ನನ್ನ ಬಳಿ ಬಂದಿದ್ದಾರೆ. ಪಾಣಿಗಾಗಿ ನಮ್ಮ ಬಳಿ ಬರಬೇಕಾ ಎಂದು ಕಿಡಿಕಾರಿದ್ದಾರೆ.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಹಶಿಲ್ದಾರ್ ಕಚೇರಿ ಸರ್ಪೈಸ್ ವಿಸಿಟ್ ಮಾಡಿ ಎಂದು ಹೇಳಿದ್ದೇನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮೀಣ ಮತ್ತು ತಾಲೂಕು ಮಟ್ಟದ ಪೊಲೀಸ್‌ ಠಾಣೆಗಳಿಗೆ ಸರ್ಪೈಸ್ ವಿಸಿಟ್ ಮಾಡಬೇಕು ಎಂದು ಹೇಳಿದ್ದೇನೆ. ಸಣ್ಣ ಕೆಲಸಕ್ಕೆ ಜನರು ಬೆಂಗಳೂರಿನತನಕ ಬರುವ ಅಗತ್ಯವಿಲ್ಲ. ಸಾರ್ವಜನಿಕರ ಕೆಲಸದ ವಿಳಂಬವೇ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಜನರನ್ನು ಅಲೆದಾಡಿಸಿ ನಂತರ ಹಣ ಕೇಳುತ್ತಾಎ. ಇವತ್ತು ಬಂದಿರುವ ಎಲ್ಲಾ ಅರ್ಜಿಗಳನ್ನ ಅಧಿಕಾರಿಗಳಿಗೆ ಕಳಿಸುತ್ತೇವೆ. ಒಂದು ವಾರ ಅಥಾವ 15 ದಿನಗಳಲ್ಲಿ ವರದಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜನತಾ ದರ್ಶನದಲ್ಲಿ ಬಂದಿರುವ ಎಲ್ಲ ಅರ್ಜಿಗಳ ವಿಲೇವಾರಿಗೆ 15 ದಿನಗಳ ಗಡುವು ಇರಲಿದೆ. ಮುಂದಿನ ಜನತಾದರ್ಶನ ಮಾಡಿದಾಗ ಇಷ್ಟು ಅರ್ಜಿ ಬರಬಾರದು. ಇಷ್ಟು ಅರ್ಜಿ ಬಂದ್ರೆ ನೀವು ಮತ್ತು ನಿಮ್ಮ ಕೆಳ ಹಂತದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಎಲ್ಲರೂ ಕೆಲಸ ಮಾಡ್ತೀರಾ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ. ಜನರು ತೆರಿಗೆ ಹಣ ದಿಂದ ನಾವು ಸಂಬಳ ತಗೆದುಕೊಳ್ಳುತ್ತಿದ್ದೇವೆ. ಅವರವರ ಕೆಲಸನೇ ಮಾಡದೇ ಇದ್ದರೆ  ಹೀಗೆ ಸಾರ್ವಜನಿಕರಿಂದ ಹೆಚ್ಚಿನ ಸಮಸ್ಯೆಗಳ ಅರ್ಜಗಳು ಬರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Latest Videos
Follow Us:
Download App:
  • android
  • ios