ಬೆಂಗಳೂರು, [ಡಿ.25]: ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಮಿಷನರ್ ಕಾರು ಜಪ್ತಿಗೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಕಸದ ಗುತ್ತಿಗೆ ಪಡೆದಿದ್ದ ಕಾಂಟ್ರ್ಯಾಕ್ಟರ್ ಹರೀಶ್ ಎನ್ನುವರಿಗೆ ಬಿಬಿಎಂಪಿಯಿಂದ 66 ಲಕ್ಷ ರೂಪಾಯಿ ಬಿಲ್ ಬರಬೇಕಿತ್ತು. ಆದ್ರೆ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರು ಹರೀಶ್ ಅವರ ಹಣ ನೀಡಿರಲಿಲ್ಲ.

ಇದ್ರಿಂದ ಹರೀಶ್ ಕೋರ್ಟ್ ಮೆಟ್ಟಿಲೇರಿದ್ದರಿಂದ ಬಿಬಿಎಂಪಿ ಕಮಿಷನರ್, ಬಿಬಿಎಂಪಿ ವಿಶೇಷ ಆಯುಕ್ತ, ಬಿಬಿಎಂಪಿ ಜಂಟಿ ಆಯುಕ್ತ ಕಾರು ಜ್ತಪಿಗೆ ಆದೇಶ ನೀಡಿದೆ.

 ಗಾಡಿ ನಂಬರ್ KA01 ME 3809, KA 01MN 9930, KA 01MN 8424 ಕಮಿಷನರ್ ಹೆಸರಲ್ಲಿ ನೋಂದಣಿಯಾಗಿದ್ದು,  ಬಿಲ್ ಪಾವತಿ ಮಾಡುವವರೆಗೂ ಜಪ್ತಿಗೆ ಆದೇಶ ಮಾಡಿದೆ.