ಕಾಪಿ-ಪೇಸ್ಟ್‌ ಅವಾಂತರ; ಬೆಂಗಳೂರು ಬಿಟ್ಟು ಮಹಾರಾಷ್ಟ್ರದಲ್ಲಿ ಸುರಂಗ ಮಾರ್ಗ ಕೊರೆಯಲು ಹೊರಟ ಬಿಬಿಎಂಪಿ!

ಬೆಂಗಳೂರಿನ ಸುರಂಗ ಮಾರ್ಗ ಯೋಜನೆಯ ಡಿಪಿಆರ್‌ನಲ್ಲಿ ಬಿಬಿಎಂಪಿ ತಪ್ಪು ಮಾಹಿತಿ ನೀಡಿದೆ. ಮಹಾರಾಷ್ಟ್ರದ ಮಾರ್ಗಗಳಲ್ಲಿ ಸುರಂಗ ಮಾರ್ಗ ಕೊರೆಯಲು ಬಿಬಿಎಂಪಿ ಸಜ್ಜಾಗಿದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖವಾಗಿದೆ. ಬಿಬಿಎಂಪಿ 'ಟೆಕ್ನಿಕಲ್‌ ಎರರ್‌' ಎಂದು ಸಮಜಾಯಿಷಿ ನೀಡಿದೆ.

Bengaluru civic body BBMP under lens for alleged copy paste job for tunnel road DPR san

ಬೆಂಗಳೂರು (ಜ.8): ಬೆಂಗಳೂರಿನ ರಸ್ತೆಗಳು ದೇವರಿಗೆ ಪ್ರೀತಿ ಎನ್ನುವಷ್ಟರ ಮಟ್ಟಿಗೆ ಕರಾಬ್‌ ಎದ್ದು ಹೋಗಿದೆ. ಜನರು ದಿನಬೆಳಗಾದರೆ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಲೇ ಕೆಲಸ ಆರಂಭಿಸುತ್ತಾರೆ. ಆದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಅತ್ಯಂತ ಮುತುವರ್ಜಿಯ ಕೆಲಸವಾದ ಬೆಂಗಳೂರಿನ ಸುರಂಗ ಮಾರ್ಗದ ರಸ್ತೆಯ ಡಿಪಿಆರ್‌ನಲ್ಲೇ ಬಿಬಿಎಂಪಿ ಎಡವಟ್ಟು ಮಾಡಿದೆ. ಡಿಪಿಆರ್‌ ಅಂದರೆ, ವಿವರವಾದ ಯೋಜನಾ ವರದಿ. ಬೆಂಗಳೂರಿನಲ್ಲಿ ನಗರದ ನಾಲ್ಕು ದಿಕ್ಕನ್ನು ಸಂಪರ್ಕ ಮಾಡುವ ರೀತಿಯಲ್ಲಿ ಸುರಂಗ ಮಾರ್ಗದ ಡಿಪಿಆರ್‌ಅನ್ನು ಬಿಬಿಎಂಪಿ ಸಿದ್ದಮಾಡಿತ್ತು. ಬರೋಬ್ಬರಿ 9.5 ಕೋಟಿ ರೂಪಾಯಿ ವೆಚ್ಚದ ಡಿಪಿಆರ್‌ನಲ್ಲಿ ಮಾಡಿರುವ ಕೆಲಸ ಕಂಡು ಬಿಬಿಎಂಪಿ ನಗೆಪಾಟಲಿಗೆ ಈಡಾಗಿದೆ. ಬೆಂಗಳೂರು ಬಿಟ್ಟು ಮಹಾರಾಷ್ಟ್ರದ ಮಾರ್ಗಗಳಲ್ಲಿ ಸುರಂಗ ಮಾರ್ಗ ಕೊರೆಯಲು ಬಿಬಿಎಂಪಿ ಸಜ್ಜಾಗಿದೆ. ಹಾಗಂತ ಇದು ನಾವು ಹೇಳ್ತಾ ಇರೋದಲ್ಲ. ಬಿಬಿಎಂಪಿಯ ಸುರಂಗ ಮಾರ್ಗದ ಡಿಪಿಆರ್‌ನಲ್ಲಿಯೇ ಈ ವಿವರವಿದೆ.

ಬೆಂಗಳೂರು ಉತ್ತರ - ದಕ್ಷಿಣ ಕಾರಿಡಾರ್‌ನ ಡಿಪಿಆರ್ ನಲ್ಲಿ‌ ಬಿಬಿಎಂಪಿ ಎಡವಟ್ಟು ಮಾಡಿದೆ. ನಗರದ ವಿವಿಧ ಕಡೆಗಳಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ನಗರದ ನಾಲ್ಕು‌ ದಿಕ್ಕನ್ನು ಸಂಪರ್ಕ ಮಾಡುವ ರೀತಿಯಲ್ಲಿ ಸುರಂಗ ಮಾರ್ಗದ ಡಿಪಿಆರ್‌ಅನ್ನು ಸಿದ್ದ ಮಾಡಲಾಗಿದೆ. ಆದರೆ, ಇದರಲ್ಲಿ ಮಾಲೆಗಾಂವ್ ನಿಂದ ನಾಸಿಕ್ ವರೆಗೂ ಕಾಮಗಾರಿ ನಡೆಸಲು ಬಿಬಿಎಂಪಿ ಸಿದ್ದವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಬಿಬಿಎಂಪಿ ಡಿಪಿಆರ್ ನಲ್ಲಿ ಮಹಾರಾಷ್ಟ್ರದಲ್ಲೂ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ವಿವರ ಇರುವುದು ಅಚ್ಚರಿಗೆ ಕಾರಣವಾಗಿದೆ. ಸರ್ಕಾರಕ್ಕೆ ನೀಡಲು ತಯಾರಿಸಿರುವ ಡಿಪಿಆರ್ ನಲ್ಲಿ ಮಾಲೆಗಾಂವ್ ನಿಂದ ನಾಸಿಕ್ ವರೆಗೆ ಸುರಂಗ ಮಾರ್ಗ ಕೊರೆಯಲು ಪಾಲಿಕೆ ಸಜ್ಜಾಗಿದೆ.

ಇದು ಗಮನಕ್ಕೆ ಬರುತ್ತಿದ್ದಂತೆ 'ಟೆಕ್ನಿಕಲ್‌ ಎರರ್‌' ಎಂದು ಹೇಳುವ ಮೂಲಕ ಬಬಿಎಂಪಿ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದೆ. ಆದರೆ, ಮೂಲತಃ ಇದು ಕಾಪಿ ಪೇಸ್ಟ್‌ ನಿಂದ ಆಗಿರುವ ಎರರ್‌ ಆಗಿದೆ.

ಉತ್ತರ- ದಕ್ಷಿಣಕ್ಕಾಗಿ ಟನಲ್ ಯೋಜನೆ ಡಿಪಿಆರ್ ರೆಡಿ ಮಾಡಿದ್ದೆವು. ಟೆಂಡರ್ ಮಾಡಿ ರಾಡಿಕ್ಸ್‌ ಸಂಸ್ಥೆಗೆ ಕೊಟ್ಟಿದ್ದೆವು. ಅವರು ಟ್ರಾಫಿಕ್ ಸ್ಟಡಿ ಮಾಡಿ ವಿಸ್ತಾರವಾದ ಕರಡು ಡಿಪಿಆರ್ ಕೊಟ್ಟಿದ್ದರು. ಕರಡು ರಿಪೋರ್ಟ್ ಇನ್ನೂ ಫೈನಲ್ ಆಗಿಲ್ಲ. ಬ್ಯಾಂಕ್‌ಗೆ ಈ ಕರಡು ರಿಪೋರ್ಟ್‌ ಕೊಡಬೇಕಾಗುತ್ತೆ. ಮೊದಲು ಸುರಂಗ ಮಾರ್ಗ ನಾರ್ತ್, ಸೌತ್, ಈಸ್ಟ್, ವೇಸ್ಟ್‌ ಮಾಡಬೇಕು ಅಂತಾ ಇತ್ತು. ಆದರೆ ಡಿಪಿಆರ್‌ನಲ್ಲಿ ಚೇಂಜ್ ಆಯ್ತು. ನಂತರ ನಾರ್ತ್, ಸೌತ್ ಗೆ DPR ರೆಡಿಯಾಯ್ತು. ಆ DPR ಪುಸ್ತಕ ಸಹ ಬದಲಾವಣೆ  ಆಯ್ತು . ಹೀಗಾಗಿ ಆತುರದಲ್ಲಿ ಟೇಬಲ್ 15 ಪೇಜ್ ನಲ್ಲಿ ತಪ್ಪಾಗಿದೆ. ಎಲ್ಲಾ ಪೇಜ್ ಸರಿಯಿದೆ, ಆ ಒಂದು ಪೇಜ್ ತಪ್ಪಾಗಿದೆ. ರಾಡಿಕ್ಸ್‌ ಸಂಸ್ಥೆ ಕ್ಷಮೆ ಕೇಳಿದೆ. ಆದರೆ, ಇಷ್ಟರ ಮಟ್ಟಿಗೆ ಕ್ಷಮಿಸ್ಬೇಕು, ದಂಡ ಹಾಕ್ಬೇಕಾ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ಅವರು ಮಾಡಿರುವ ಸಣ್ಣ ತಪ್ಪುಗೆ ಇಡೀ DPR ಸರಿಯಿಲ್ಲ ಅಂತ ಹೇಳೋದು ಸರಿಯಿಲ್ಲ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು: ಕೋಟ್ಯಂತರ ರು. ಹಗರಣದ ಆರೋಪ, ಬಿಬಿಎಂಪಿ ಕಚೇರಿಗಳ ಮೇಲೆ ಇ.ಡಿ ದಾಳಿ

ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಭೂಗತ ವಾಹನ ಸುರಂಗ ನಿರ್ಮಾಣದ ಕುರಿತು ಡಿಪಿಆರ್ ವಿವರಿಸಿದೆ. ದಾಖಲೆಯ ಮೂರು ತಿಂಗಳಲ್ಲಿ ವರದಿ ಪೂರ್ಣಗೊಂಡಿದೆ. ಕರಡು DPR ನ ಕಾರ್ಯಕಾರಿ ಸಾರಾಂಶದಲ್ಲಿ, ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ವಾಲ್ಯೂಮ್ ಎಣಿಕೆ ಮಾಡುವ ಪುಟ 29 ರಲ್ಲಿ, ಮಹಾರಾಷ್ಟ್ರದ ನಗರಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ, ಇದು ಕಾಪಿ-ಪೇಸ್ಟ್ ಕೆಲಸದಿಂದಾಗಿ ಎಂದು ಹೇಳಲಾಗಿದೆ.

ಬೆಂಗಳೂರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಕಟ್ಟಡಗಳಿಗೆ ಬೀಗ ಜಡಿದು ಹೋದ ಬಿಬಿಎಂಪಿ!

Bengaluru civic body BBMP under lens for alleged copy paste job for tunnel road DPR san

Latest Videos
Follow Us:
Download App:
  • android
  • ios