ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳಿಗೆ ಬೀಗ ಮುದ್ರೆ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಬಾಕಿ ತೆರಿಗೆ ಸಂಗ್ರಹಿಸಲು 8 ವಲಯಗಳಲ್ಲಿ ಬೀಗಮುದ್ರೆ ಹಾಕಿ, ಜಪ್ತಿ ಮಾರಾಟದ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆಂಗಳೂರು (ಜ.06): ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳಿಗೆ ಬೀಗ ಮುದ್ರೆ ಹಾಕಲು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಲಿಕೆಯ 8 ವಲಯಗಳಲ್ಲಿ ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮವಹಿಸಲಾಗುತ್ತಿದೆ. ಎಲ್ಲಾ ಪರಿಷ್ಕರಣೆ ಪ್ರಕರಣಗಳಲ್ಲಿ, ಆಸ್ತಿಗಳಿಗೆ ಬೀಗಮುದ್ರೆ, ಮುಟ್ಟುಗೋಲು ಮತ್ತು ಜಪ್ತಿ ಮಾರಾಟವನ್ನು ಬಳಸಿಕೊಂಡು ವಸೂಲಾತಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪರಿಷ್ಕರಣೆಯಲ್ಲಿ ಸುಮಾರು 9000 ಆಸ್ತಿಗಳಿದ್ದು, ಅದರಿಂದ 191 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಪ್ರತಿಯೊಬ್ಬರೂ ಪ್ರತಿ ಪ್ರಕರಣವನ್ನು ಪರಿಶೀಲಿಸಿ, ವಸೂಲಾತಿ ಮಾಡಬೇಕು. 

ಇದನ್ನೂ ಓದಿ: ಬೆಂಗ್ಳೂರಲ್ಲಿ 400ಕ್ಕೂ ಹೆಚ್ಚು ಅಕ್ರಮ ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಆದೇಶ

ವಲಯವಾರು ಬೀಗ ಮುದ್ರೆ ಹಾಕಿರುವ ಮಾಹಿತಿ:
1. ಬೊಮ್ಮನಹಳ್ಳಿ ವಲಯ: ಅತಿ ಹೆಚ್ಚು ಬಾಕಿ ಇರುವ ಆಸ್ತಿಗಳನ್ನು ಪಾವತಿ ಮಾಡದಿರುವ ಟಾಪ್ 15 ಆಸ್ತಿಗಳನ್ನು ಜಪ್ತಿ ಮಾರಾಟಕ್ಕಾಗಿ ಸೀಲ್ ಮಾಡಲಾಗಿದೆ. ಜಪ್ತಿ ಮಾರಾಟದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತದೆ. 
2. ಪೂರ್ವ ವಲಯ: ಅತಿ ಹೆಚ್ಚು ಬಾಕಿ ಇರುವ ಬಾಕಿಯನ್ನು ಪಾವತಿಸದಿದ್ದಕ್ಕಾಗಿ 77 ಕಟ್ಟಡಗಳನ್ನು ಸೀಲ್ ಮಾಡಲಾಗಿದೆ. ಜಪ್ತಿ ಮಾರಾಟಕ್ಕಾಗಿ ಅತ್ಯಧಿಕ ಬಾಕಿ ಇರುವ ಆಸ್ತಿಗಳ ಗುರುತಿಸುವಿಕೆ ಮಾಡಲಾಗುತ್ತಿದೆ. 
3. ಪಶ್ಚಿಮ ವಲಯ: ಕಳೆದ ಒಂದು ವಾರದಲ್ಲಿ ಆಸ್ತಿ ತೆರಿಗೆಯ ಬಾಕಿ ಪಾವತಿ ಮಾಡದಿದ್ದಕ್ಕಾಗಿ 68 ಕಟ್ಟಡಗಳನ್ನು ಸೀಲ್ ಮಾಡಲಾಗಿದೆ. ಈ ಪೈಕಿ ಆಸ್ತಿಗಳ ಜಪ್ತಿ ಮಾರಾಟಕ್ಕಾಗಿ 3 ಅತ್ಯಧಿಕ ಡಿಫಾಲ್ಟರ್ ಬಾಕಿ ಆಸ್ತಿಗಳ ಗುರುತಿಸುವಿಕೆ ಮಾಡಲಾಗುತ್ತಿದೆ.
4. ಆರ್‌ಆರ್‌ನಗರ ವಲಯ: ಅತಿ ಹೆಚ್ಚು ಬಾಕಿ ಇರುವ ಬಾಕಿಯನ್ನು ಪಾವತಿಸದಿದ್ದಕ್ಕಾಗಿ 10 ವಸತಿಯೇತರ ಆಸ್ತಿಗಳನ್ನು ಸೀಲ್ ಮಾಡಲಾಗಿದೆ. 
5. ಯಲಹಂಕ ವಲಯ: ಅತಿ ಹೆಚ್ಚು ಬಾಕಿ ಇರುವ ವಸತಿ ರಹಿತ ಆಸ್ತಿಗಳ 5 ಸೀಲ್ ಮಾಡಲಾಗಿದೆ. ಅತಿ ಹೆಚ್ಚು ಬಾಕಿ ಇರುವ ಆಸ್ತಿಗಳನ್ನು ಜಪ್ತಿ ಮಾರಾಟಕ್ಕಾಗಿ ಗುರುತಿಸಲಾಗುತ್ತಿದೆ.
6. ದಾಸರಹಳ್ಳಿ ವಲಯ: ಅತಿ ಹೆಚ್ಚು ಬಾಕಿ ಇರುವ ವಸತಿ ರಹಿತ ಆಸ್ತಿಗಳ 12 ಸೀಲ್ ಮಾಡಲಾಗಿದೆ. ಜಪ್ತಿ ಮಾರಾಟಕ್ಕಾಗಿ ಯೋಗ್ಯವಾದ ಅತಿ ಹೆಚ್ಚು ಬಾಕಿ ಇರುವ ಆಸ್ತಿಗಳನ್ನು ಗುರುತಿಸಲಾಗುತ್ತಿದೆ.
7. ಮಹದೇವಪುರ ವಲಯ: ಅತಿ ಹೆಚ್ಚು ಬಾಕಿ ಇರುವ 20 ವಸತಿಯೇತರ ಆಸ್ತಿಗಳನ್ನು ಸೀಲ್‌ ಮಾಡಲಾಗಿದೆ. ಅತಿ ಹೆಚ್ಚು 3 ಬಾಕಿ ಇರುವ ಆಸ್ತಿಗಳನ್ನು ಜಪ್ತಿ ಮಾರಾಟಕ್ಕಾಗಿ ಗುರುತಿಸಲಾಗುತ್ತಿದೆ 
8. ದಕ್ಷಿಣ ವಲಯ: ಅತಿ ಹೆಚ್ಚು ಬಾಕಿ ಇರುವ ಬಾಕಿಯನ್ನು ಪಾವತಿಸದಿದ್ದಕ್ಕಾಗಿ 15 ವಸತಿಯೇತರ ಆಸ್ತಿಗಳನ್ನು ಸೀಲ್‌ ಮಾಡಲಾಗಿದೆ. 

ಇದನ್ನೂ ಓದಿ: 200 ಕೋಟಿ ವೆಚ್ಚದಲ್ಲಿ ಬೆಂಗಳೂರಿಗರಿಗೆ 7.22 KM ಉದ್ದದ ಹೊಸ ರಸ್ತೆ; ನೋ ಟ್ರಾಫಿಕ್, ಫುಲ್ ಜಾಲಿ ರೈಡ್