ಬೆಂಗಳೂರು, (ಜುಲೈ.21): ಕಳೆದ 5 ದಿನಗಳಿಂದ ಹೋಂ ಕ್ವಾರಂಟೈನ್​ನಲ್ಲಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ.

ಜು.17ರಂದು ಭಾಸ್ಕರ್​ರಾವ್ ಅವರ ಕಾರು ಚಾಲಕನಿಗೆ ಕೋವಿಡ್​ ಸೋಂಕು ದೃಢಪಟ್ಟಿತ್ತು. ಆದ್ದರಿಂದ ಕಮಿಷನರ್ ಅಂದಿನಿಂದ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದರು. 

ಕಾರು ಚಾಲಕನಿಗೆ ಸೋಂಕು: ಭಾಸ್ಕರ್‌ರಾವ್‌ ಕ್ವಾರಂಟೈನ್‌

ನಿನ್ನೆ(ಸೋಮವಾರ) ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು (ಮಂಗಳವಾರ) ಬೆಳಗ್ಗೆ ಬಂದ ವರದಿಯಲ್ಲಿ ನೆಗೆಟಿವ್ ಎಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮೂಲಕ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕಾರು ಚಾಲಕನಿಗೆ ಬಂದಿದೆ ಅಂದ್ರೆ ಆ ಸೊಂಕು ಕಮಿಷನರ್‌ಗೆ ತಗುಲಿರುವುದು ಗ್ಯಾರಂಟಿ ಎನ್ನಲಾಗಿತ್ತು. ಯಾಕಂದ್ರೆ ಕಾರಿನಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿರುತ್ತಾರೆ. ಅಲ್ಲದೇ AC ಹಾಕಿಕೊಂಡು ಕಾರಿನಲ್ಲೇ ಇಬ್ಬರು ಉಸಿರಾಡಿದ್ದಾರೆ. 

ಅದೃಷ್ಟವಶಾತ್ ಭಾಸ್ಕರ್‌ ರಾವ್ ಅವರ ವರದಿ ನೆಗೆಟಿವ್ ಬಂದಿದೆ. ಇದರಿಂದ ಆಯುಕ್ತು ನಿಟ್ಟುಸಿರುಬಿಟ್ಟಿದ್ದಾರೆ.