ಬೆಂಗಳೂರು(ಜು.18): ತಮ್ಮ ಕಾರು ಚಾಲಕನಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್‌ಗೊಳಗಾಗಿದ್ದಾರೆ.

‘ನನ್ನ ಕಾರು ಚಾಲಕನಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಹಾಗಾಗಿ ನಾಲ್ಕು ದಿನಗಳು ಹೋಂ ಕ್ವಾರಂಟೈನ್‌ಗೊಳಗಾಗಿದ್ದೇನೆ. ಮೂರು ತಿಂಗಳ ಅವಧಿಯಲ್ಲಿ ಐದನೇ ಬಾರಿಗೆ ಸೋಮವಾರ ಕೋವಿಡ್‌ ಪರೀಕ್ಷೆಗೊಳಗಾಗುತ್ತಿದ್ದೇನೆ.

ಕಾಂಗ್ರೆಸ್‌ ಮುಖಂಡನ ಹತ್ಯೆ ಕೇಸ್: ನಾಲ್ವರು ಆರೋಪಿಗಳ ಬಂಧನ

ಹಲವು ಸೋಂಕಿತರ ಜತೆ ಸಂವಾದ ನಡೆಸಿದ್ದೆ. ನಿಮ್ಮ ಹಾರೈಕೆ. ಈವರೆಗೆ ಸೋಂಕು ತಾಕಿಲ್ಲ’ ಎಂದು ಆಯುಕ್ತ ಭಾಸ್ಕರ್‌ರಾವ್‌ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಮಾಡಿದ ಒಂದೇ ತಾಸಿನಲ್ಲಿ ಪ್ರತಿಕ್ರಿಯಿಸಿದ ಸುಮಾರು ಐದು ಸಾವಿರಕ್ಕೂ ಅಧಿಕ ಜನರು, ಆಯುಕ್ತರಿಗೆ ಆರೋಗ್ಯಕ್ಕಾಗಿ ಹಾರೈಸಿದರು.

ಬಿಬಿಎಂಪಿ ಪಿಆರ್‌ಒಗೆ ಕೊರೋನಾ ಪಾಸಿಟಿವ್‌

ಬಿಬಿಎಂಪಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ ಬಿಬಿಎಂಪಿ ಸಾರ್ವಜನಿಕ ಸಂಪರ್ಕ ವಿಭಾಗದ ಕಾರ್ಯಕ್ರಮ ಸಹಾಯಕ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿತ್ತು.

ಸಾವಿನಲ್ಲಿ ಮತ್ತೊಂದು ದಾಖಲೆ ಬರೆದ ರಾಜಧಾನಿ: ಕೊರೋನಾ ಅಟ್ಟಹಾಸಕ್ಕೆ 75 ಸಾವು!

ಹೀಗಾಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಹೋಂ ಕ್ವಾರಂಟೈನ್‌ ಆಗಿದ್ದರು. ಕಳೆದ ಬುಧವಾರ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಉಸಿರಾಟದ ಸಮಸ್ಯೆ, ಜ್ವರ ಸೇರಿದಂತೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದರು. ಶುಕ್ರವಾರ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.