Asianet Suvarna News Asianet Suvarna News

ಬೆಂಗಳೂರು ನೈಟ್‌ ರೌಂಡ್ಸ್‌ ಪೊಲೀಸ್‌ಗೆ ಬೈಕ್‌ ಗುದ್ದಿ ಪರಾರಿಯಾದ ಕಿರಾತಕ: ಕಾಲು ಮುರಿದುಕೊಂಡು ಬಿದ್ದ ಪಿಎಸ್‌ಐ!

ಬೆಂಗಳೂರಿನಲ್ಲಿ ನೈಟ್ ರೌಂಡ್ಸ್‌ ಡ್ಯೂಟಿ ಮಾಡುತ್ತಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಬೈಕ್‌ ಗುದ್ದಿಸಿ ಕಾಲು ಮುರಿದು ಪರಾರಿಯಾಗಿರುವ ದುರ್ಘಟನೆ ಮಲ್ಲತಹಳ್ಳಿ ಕೆರೆಯ ಬಳಿ ನಡೆದಿದೆ. 

Bengaluru city night rounds police leg broken on Biker hit and run case sat
Author
First Published Dec 24, 2023, 9:59 PM IST

ಬೆಂಗಳೂರು (ಡಿ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ಪಾಳಿಯಲ್ಲಿ ವಿವಿಧ ರಸ್ತೆಗಳಲ್ಲಿ ಬೈಕ್‌ ಮೇಲೆ ರೌಂಡ್ಸ್‌ ಹೋಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್ ಮೇಲೆ ಕಿರಾತಕನೊಬ್ಬ ಬೈಕ್‌ ಹತ್ತಿಸಿ ಅಪಘಾತ ಮಾಡಿ ತಿರುಗಿ ನೋಡದೇ ಪರಾರಿ ಆಗಿದ್ದಾನೆ. ಈ ಅಪಘಾತದಲ್ಲಿ ಪಿಎಸ್‌ಐ ಕಾಲು ಮುರಿದಿದ್ದು, ಮೇಲೇಳಲಾಗದ ಸ್ಥಿತಿಯಲ್ಲಿ ಒದ್ದಾಡುವಾಗ ಅವರನ್ನು ಸ್ಥಳೀಯರು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಘಾತ ಪ್ರಕರಣಗಳಿಗೇನೂ ಕಡಿಮೆಯಿಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ಸಾವಿನ ಪ್ರಕರಣ ಅಪಘಾತದಿಂದ ಸಂಭವಿಸುತ್ತದೆ. ಇನ್ನು ಪೊಲೀಸರು ಕೂಡ ಇದಕ್ಕೆ ಹೊರತಾಗಿರುವುದಿಲ್ಲ. ಕೆಲವೊಮ್ಮೆ ನಾವು ಎಷ್ಟೇ ಎಚ್ಚರಿಕೆಯಿಂದಿದ್ದರೂ ಎದುರಿನಿಂದ ಬರುವವರ ತಪ್ಪಿನಿಂದಾಗಿ ನಾವು ಅಪಘಾತಕ್ಕೆ ಒಳಗಾಗಿ ಸಾವು ಅಥವಾ ಶಾಶ್ವತ ಅಂಗವೈಕಲ್ಯವನ್ನು ಅನುಭವಿಸಬೇಕಾಗುತ್ತದೆ. ಇಲ್ಲಿಯೂ ಕೂಡ ಅದೇ ರೀತಿ ರಾತ್ರಿ ಪಾಳಿಯಲ್ಲಿ ಸಿಟಿ ರೌಂಡ್ಸ್‌ ಮಾಡುತ್ತಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್ ಮೇಲೆ ಬೈಕ್‌ ಹರಿಸಿ ಅಪಘಾತ ಮಾಡಿ ಅವರನ್ನು ಆಸ್ಪತ್ರೆಗೆ ಸೇರಿಸದೇ ಪರಾರಿ ಆಗಿರುವ ಘಟನೆ ಕಳೆದ ಮೂರು ದಿನಗಳ ಹಿಂದೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ಬೆಂಗಳೂರು ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಹೌದು, ನೈಟ್ ರೌಂಡ್ಸ್ ನಲ್ಲಿದ್ದಾಗ ಅನ್ನಪೂರ್ಣೇಶ್ವರಿ ನಗರ ಪಿಎಸ್ಐ ಗೆ ಅಪಘಾತವಾಗಿದೆ. ಪಿಎಸ್‌ಐ ನಡೆದುಕೊಂಡು ಹೋಗ್ತಿದ್ದಾಗ  ಬೈಕ್ ಸವಾರ ಹಿಟ್ ಅಂಡ್ ಮಾಡಿ ಎಸ್ಕೇಪ್ ಆಗಿದ್ದಾನೆ. ಅಪಘಾತಕ್ಕೆ ಒಳಗಾದ ಪಿಎಸ್‌ಐ ಅನ್ನು ಕುಬೇರ ಎಂದು ಗುರುತಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೈಕ್‌ ಸವಾರ ಗುದ್ದಿದ ರಬಸಕ್ಕೆ ಪಿಎಸ್ಐ ಕುಬೇರರವರ ಕಾಲು ಮೂಳೆ ಮುರಿತವಾಗಿದೆ. ಈ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲತಹಳ್ಳಿ ಕೆರೆ ಸಮೀಪ ನಡೆದಿದೆ. ಪೊಲೀಸರು ಮೂರು ದಿನದಿಂದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಮೂರು ದಿನದಿಂದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರಿಗೆ ಆರೋಪಿ ಸಿಕ್ಕಿಲ್ಲ. ಪಿಎಸ್‌ಐ ಕುಬೇರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾಮಾಕ್ಷಿ ಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು:
ಬೆಂಗಳೂರು (ಡಿ.24):
ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ಸ್ವಲ್ಪ ದೂರದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಹನುಮ ಜಯಂತಿ ಅಂಗವಾಗಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಎಲ್ಲರೆದುರೇ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ. ರಾಜ್ಯದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆ ಹತ್ತಿರ ವ್ಯಕ್ತಿಯ ಹತ್ಯೆ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜೈ ಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. 

ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!

ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಇಂದು ಹನುಮಜಯಂತಿ ಹಿನ್ನೆಲೆಯಲ್ಲಿ ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜಿನೇಯ ದೇವಸ್ಥಾನದ ಬಳಿ ಜೈಪ್ರಕಾಶ್ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು. ಈ ವೇಳೆ ನಾಲ್ಕೈದು ಜನರು ಏಕಾಏಕು ಮಾರಕಾಸ್ತ್ರಗಳನ್ನು ಹಿಡಿದು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಓಡಿ ಹೋಗಿ ಪಕ್ಕದ ಹೋಟೆಲ್‌ನೊಳಗೆ ಅವಿತು ಕುಳಿತೂ ಬಿಡದೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಹೋಗಿದ್ದಾರೆ. 
 

Follow Us:
Download App:
  • android
  • ios