Asianet Suvarna News Asianet Suvarna News

ಬೆಂಗಳೂರು ಹನುಮ ಜಯಂತಿಯಲ್ಲಿ ಅನ್ನದಾನ ಮಾಡುತ್ತಿದ್ದವನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರಿನ ಲಕ್ಕಸಂದ್ರದಲ್ಲಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಅನ್ನದಾಮ ಮಾಡುತ್ತಿದ್ದ ವ್ಯಕ್ತಿಯನ್ನು ನಾಲ್ಕೈದು ಮಂದಿ ಅಟ್ಟಾಡಿಸಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ.

Bengaluru Hanuman jayanti participated Jai prakash was murdered in Lakkasandra sat
Author
First Published Dec 24, 2023, 8:35 PM IST

ಬೆಂಗಳೂರು (ಡಿ.24): ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆಗೆ ಸ್ವಲ್ಪ ದೂರದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಹನುಮ ಜಯಂತಿ ಅಂಗವಾಗಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯನ್ನು ಎಲ್ಲರೆದುರೇ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ.

ರಾಜ್ಯದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮನೆ ಹತ್ತಿರ ವ್ಯಕ್ತಿಯ ಹತ್ಯೆ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜೈ ಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಎಂದು ಗುರುತಿಸಲಾಗಿದೆ. ಆಡುಗೋಡಿ ಠಾಣಾ ವ್ಯಾಪ್ತಿಯ ಲಕ್ಕಸಂದ್ರ ಬಳಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಇಂದು ಹನುಮಜಯಂತಿ ಹಿನ್ನೆಲೆಯಲ್ಲಿ ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜಿನೇಯ ದೇವಸ್ಥಾನದ ಬಳಿ ಜೈಪ್ರಕಾಶ್ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು.

ಮಲ್ಲಿಕಾರ್ಜುನ ಖರ್ಗೆ ಮನುವಾದಿ ರಾಜಕಾರಣಿ, ಅವರು ಪ್ರಧಾನಿಯಾಗುವುದನ್ನು ತಿರಸ್ಕರಿಸಿ: ನಟ ಅಹಿಂಸಾ ಚೇತನ್!

ಹನುಮ ಜಯಂತಿಯಲ್ಲಿ ಕೆಲ ಹೊತ್ತು ಜೈ ಪ್ರಕಾಶ್ ಅವರ ಎಲ್ಲ ನಡೆಗಳ ಮೇಲೆ ನಿಗಾವಜಿಸಿದ್ದ ನಾಲ್ಕೈದು ಜನ ಆರೋಪಿಗಳು, ಜೈ ಪ್ರಕಾಶ್‌ ಸುತ್ತಲೂ ತನ್ನ ಸ್ನೇಹಿತರಿರದೇ ಜನರ ಮಧ್ಯ ನಿಂತಿರುವಾಗ ಎಲ್ಲರೂ ಏಕಾಏಕಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಮಚ್ಚಿನೇಟು ತಿಂದ ಜೈ ಪ್ರಕಾಶ್ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲೆತ್ನಿಸಿದ್ದಾನೆ. ಅಲ್ಲಿ ಪಕ್ಕದಲ್ಲಿರುವ ವಿಜಯ ಸಾಗರ ಹೋಟೆಲ್ ಒಳಗಡೆ ನುಗ್ಗಿದ್ದಾನೆ. ಆದರೂ, ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ರಕ್ಷಣೆಗೆ ಬಂದವರ ಮೇಲೆಯೂ ಮಾರಕಾಸ್ತ್ರಗಳನ್ನು ಬೀಸಲು ಮುಂದಾಗಿದ್ದಾರೆ. ಇದರಿಂದ ಸಾರ್ವಜನಿಕರು ಹೆದರಿ ಜೈ ಪ್ರಕಾಶ ಪ್ರಾಣ ರಕ್ಷಣೆಗೆ ಬೇಡಿಕೊಂಡರೂ ಸಹಾಯ ಮಾಡಲು ಹಿಂದೇಟು ಹಾಕಿದ್ದಾರೆ. ಪುನಃ ಅಲ್ಲಿಂದ ಜೈಪ್ರಕಾಶ್ ಓಡಿ ಹೋದರೂ ಬಿಡದೇ ಹಿಂಬಾಲಿಸಿ ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!

ಇನ್ನು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳು ಈಗ ಅಲ್ಲಿಂದ ಪರಾರಿ ಆಗಿದ್ದಾರೆ. ಇನ್ನು ಜೈ ಪ್ರಕಾಶ್‌ ಕೂಡ ಕ್ರಮಿನಲ್‌ ಹಿನ್ನೆಲೆಯುಳ್ಳವನು ಎಂದು ಹೇಳಲಾಗುತ್ತಿದೆ. 2009ರಲ್ಲಿ ಕೊಲೆ ಕೇಸ್ ಒಂದರಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಹಳೆ ದ್ವೇಷ ಹಿನ್ನೆಲೆ ಕೊಲೆ ನಡೆದಿರೋ ಶಂಕೆಯಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಇದೇ ವೇಳೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Follow Us:
Download App:
  • android
  • ios