ಬೆಂಗಳೂರು, (ಫೆ.02): ಬೆಂಗಳುರು ಸೆಂಟ್ರಲ್ ಡಯೋಸಿಸ್ ನ ಆರ್ಚ್ ಬಿಷಪ್ ಹಾಗೂ ಅವರ ಸಹಚರನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಸೆಂಟ್ರಲ್ ಬಿಷಪ್ ಸಾಮ್ಯೂಯೆಲ್ ಆಪ್ತ ವಿನೋದ್ ದಾಸ್ ಎಂಬಾತನ ವಿರುದ್ಧ ಹಲ್ಲೆ ನಡೆಸಿದ್ದಾನೆಂದು ಮಹಿಳೆ ಶಿವಾಜಿ‌ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ಸಂಬಂಧ ಸಂಧಾನ ಮಾಡುವ ನೆಪದಲ್ಲಿ  ಬಿಷಪ್ ಒಂದು ಕೋಟಿ ಆಫರ್ ನೀಡಿ ಮಹಿಳೆ ಮೇಲೆ ಕೈ ಹಾಕಿದ್ದಾನೆ. ಇದಕ್ಕೆ ಮಹಿಳೆ  ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆಂಬ ಆರೋಪ ಕೇಳಿಬಂದಿದೆ. 

ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ CSI ಆಸ್ಪತ್ರೆಯಲ್ಲಿ‌ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಬಿಷಪ್ ಮೇಲೆ ಫೋಕ್ಸೋ, ಲೈಂಗಿಕ ದೌರ್ಜನ್ಯ. ಧಮ್ಕಿ. ಭೂ ಕಬಳಿಕೆ ಮನಿ ಲ್ಯಾಂಡ್ರಿಂಗ್ ಸೇರಿದಂತೆ ಹಲವು ಕೇಸ್ ದಾಖಲಾಗಿವೆ.