Asianet Suvarna News Asianet Suvarna News

ಕನ್ನಡದಲ್ಲಿ 500 ರೂ., ಇಂಗ್ಲಿಷ್‌ನಲ್ಲಿ 100  ರೂ. ದಂಡ, ಎಲ್ಲಪ್ಪಾ ಇದು?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬೋರ್ಡ್ ಒಂದು ಫುಲ್ ವೈರಲ್ ಆಗ್ತಿದೆ. ಹಾಗಾದರೆ ಆ ಬೋರ್ಡ್ ನಲ್ಲಿ ಅಂಥಾದ್ದೇನಿದೆ? ಕನ್ನಡದಲ್ಲಿ ಒಂದು ಸಂದೇಶ ಸಾರುತ್ತಿದ್ದರೆ ಇಂಗ್ಲಿಷ್ ನಲ್ಲಿ ಮತ್ತೊಂದು ಸಂದೇಶವಿದೆ. ಏನಪ್ಪಾ ಕತೆ ಮುಂದೆ ಓದಿ..

Bengaluru Banashankari Bus Station Board Goes Viral in Social Media
Author
Bengaluru, First Published Oct 23, 2018, 3:47 PM IST

ಬೆಂಗಳೂರು(ಅ.23) ಇಲ್ಲಿ ಧೂಮಪಾನ ನಿಷೇಧಿಸಲಾಗಿದೆ, ಇಲ್ಲಿ ಕಸ  ಎಸೆದರೆ ದಂಡ ವಿಧಿಸಲಾಗುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ,, ಈ ರೀತಿಯ ಜಾಗೃತಿ ಮೂಡಿಸುವ ಫಲಕಗಳಿಗೆ ಮಹಾನಗರದಲ್ಲಿ ಕೊರತೆ ಇಲ್ಲ.

ಮೊದಲು ಇಂಗ್ಲಿಷ್ ನಲ್ಲಿ ಇರುತ್ತಿದ್ದ ಫಲಕಗಳು ಕನ್ನಡ ಪರ ಹೋರಾಟದ ನಂತರ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಬರಲಾರಂಭಿಸಿದವು. ಆದರೆ ಈ ಬೋರ್ಡ್ ಮಾತ್ರ ಎಲ್ಲಕ್ಕಿಂತ ಭಿನ್ನ .. ಬೆಂಗಳೂರು ಬನಶಂಕರಿ ಬಸ್ ನಿಲ್ದಾಣದಲ್ಲಿ ಅಳವಡಿಕೆ ಮಾಡಿರುವ ಬೋರ್ಡ್ ನ ಕತೆ ಇದು.

ಇಲ್ಲಿ ಉಗುಳುವುದನ್ನು ನಿಷೇಧೀಸಲಾಗಿದೆ ಎಂದು ಬೋರ್ಡ್ ಹೇಳುತ್ತಿದೆ. ಆದರೆ ಮುಂದುವರಿದ ಭಾಗವಾಗಿ ಈ ನಿಯಮ ಉಲ್ಲಂಘಿಸಿದರೆ 500 ರೂ.  ದಂಡ ವಿಧಿಸಲಾಗುವುದು ಎಂದು ಕನ್ನಡದಲ್ಲಿದ್ದರೆ ಇಂಗ್ಲಿಷ್ ನಲ್ಲಿ 100  ರೂ. ದಂಡ ಎಂದಿದೆ. ಹಾಗಾದರೆ ಕನ್ನಡದಲ್ಲಿ ಉಗುಳಿದರೆ  500 ರೂ. ದಂಡ ಇಂಗ್ಲಿಷ್ ನಲ್ಲಿ ಉಗುಳಿದರೆ 100 ರೂ. ದಂಡವೇ? ಎಂದು ಜಾಲತಾಣಗಳಲ್ಲಿ ಅಣಕವಾಡಲಾಗುತ್ತಿದೆ. 

 

 

 

 

 

Follow Us:
Download App:
  • android
  • ios