ಬೆಂಗಳೂರಿಗೆ ಬಂದ ವೃದ್ಧನ ಬ್ಯಾಗ್ ಕಸಿದು ಓಡಿದ ಕಳ್ಳ; ಜನ ವಿಡಿಯೋ ಮಾಡಿದ್ರೇ ಹೊರತು ಸಹಾಯ ಮಾಡ್ಲಿಲ್ಲ
ಬೆಂಗಳೂರಿಗೆ ಗ್ರಾಮೀಣ ಪ್ರದೇಶದಿಂದ ಬಂದು ನೆಂಟರ ಮನೆಗೆ ಹೋಗಲು ಬಿಎಂಟಿಸಿ ಬಸ್‌ಗೆ ಬಂದು ಸಿಲ್ಕ್ ಬೋರ್ಡ್ ಬಳಿ ಇಳಿದ ವೃದ್ಧರ ಬ್ಯಾಗ್ ಅನ್ನು ಕಳ್ಳ ಕಿತ್ತುಕೊಂಡು ಓಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಆದರೆ, ಅದನ್ನು ವಿಡಿಯೋ ಮಾಡಿ ಪೋಸ್ಟ ಮಾಡಿದ್ದಾರೆ.
ಬೆಂಗಳೂರು (ಜು.04): ಬೆಂಗಳೂರಿಗೆ ಬಂದು ತಮ್ಮ ನೆಂಟರ ಮನೆಗೆ ಹೋಗಲು ಹತ್ತಿದ್ದ ಬಿಎಂಟಿಸಿ ಬಸ್ ಇಳಿಯುತ್ತಿದ್ದಂತೆಯೇ ಆತನ ಗ್ರಾಮೀಣ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗ್ ಅನ್ನು ಹಿಂಬಾಲಿಸಿಕೊಂಡು ಬಂದ ಕಳ್ಳನೊಬ್ಬ ಕಿತ್ತುಕೊಂಡು ಓಡಿದ್ದಾನೆ. ಆದರೆ, ಅಲ್ಲಿದ್ದವರು ಎಲ್ಲರೂ ವಿಡಿಯೋ ಮಾಡಿದರೇ ಹೊರತು, ಕಳ್ಳನನ್ನು ಹಿಡಿಯಲು ಯಾರೂ ಸಹಾಯ ಮಾಡದಿರುವ ಘಟನೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ನಡೆದಿದೆ.
ಬೆಂಗಳೂರಿಗೆ ಪ್ರತಿನಿತ್ಯ ರಾಜ್ಯ, ಹೊರ ರಾಜ್ಯಗಳಿಂದ ಪ್ರತಿನಿತ್ಯ ಲಕ್ಷಾಂತರ ಜನರು ಬಂದು ಹೋಗುತ್ತಾರೆ. ಆದರೆ, ಬೆಂಗಳೂರಿಗೆ ಬಂದು ಗಗನಚುಂಬಿ ಕಟ್ಟಡಗಳು, ಟ್ರಾಫಿಕ್ ಜಾಮ್ ಸೇರಿದಂತೆ ವಿವಿಧ ದೃಶ್ಯಗಳನ್ನು ಮೈಮರೆತು ನೋಡುವ ಹಳ್ಳಿ ಜನರ ಬ್ಯಾಗ್, ಪರ್ಸ್, ಮೊಬೈಲ್ ಹಾಗೂ ಚಿನ್ನಾಭರಣವನ್ನು ಕಿತ್ತುಕೊಂಡು ಓಡುವವರ ಸಂಖ್ಯೆ ಹೆಚ್ಚಾಗಿದೆ. ಇವರು ಕಂಪ್ಲೇಂಟ್ ಕೊಟ್ಟು ಪೊಲೀಸ್ ಠಾಣೆಗೆ ಅಲೆದಾಡುವುದು ಸಾಧ್ಯವಿಲ್ಲವೆಂದು ಕಳೆದುಕೊಂಡು ವಸ್ತು ತಮ್ಮದಲ್ಲವೆಂದು ಮರೆತು ಪೇಚಿಗೆ ಸಿಲುಕಿ ಊರಿನತ್ತ ಹೊರಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಚಾಲಾಕಿ ಕಳ್ಳರು, ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ಪಾದಾಚಾರಿ ಮೇಲ್ಸೇತುವೆ, ಅಂಡರ್ ಪಾಸ್‌ಗಳು, ರಸ್ತೆ ವಿಭಜಕ ಸೇರಿದಂತೆ ವಿವಿಧೆಡೆ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಬೆಂಗಳೂರು ಡ್ರೈವರ್ ಇಲ್ಲದೇ ತಂತಾನೇ ಚಲಿಸಿದ ಕಾರು; ಬೆಚ್ಚಿಬಿದ್ದು ಓಡಿದ ಜನರು
ಬೆಂಗಳೂರಿಗೆ ಬುಧವಾರ ಬೆಳ್ಳಂಬೆಳಗ್ಗೆ ಗ್ರಾಮೀಣ ಪ್ರದೇಶದಿಂದ ಬ್ಯಾಗ್ ಹಿಡಿದು ಬಂದಿದ್ದ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್ ಹತ್ತಿಕೊಂಡು ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಇಳಿದುಕೊಂಡಿದ್ದಾರೆ. ಇನ್ನು ಬಸ್ ಇಳಿದು ನಾಲ್ಕು ಹೆಜ್ಜೆ ಮುಂದೆ ಹೋಗುತ್ತಿದ್ದಂತೆಯೇ ಅಲ್ಲೊಬ್ಬ ಚಲಾಕಿ ಕಳ್ಳ ವೃದ್ಧ ವಯಸ್ಸಿನ ವ್ಯಕ್ತಿಯ ಬಳಿಯಿದ್ದ ಕಿತ್ತುಕೊಂಡಿದ್ದಾನೆ. ಇದನ್ನು ವಿರೋಧಿಸಿ ಬಲವಾಗಿ ಬ್ಯಾಗ್ ಹಿಡಿಯಲು ಮುಂದಾದರೂ ಅವರು ನಿಯಂತ್ರಣ ತಪ್ಪಿ ಇನ್ನೇನು ಬಿದ್ದುಬಿಡ್ತಾರೆ ಎನ್ನುವ ಪರಿಸ್ಥಿತಿಯಿಂದಾಗಿ ಬ್ಯಾಗ್ ಬಿಟ್ಟುಬಿಡುತ್ತಾರೆ. ಆಗ ಕಳ್ಳ ಬ್ಯಾಗ್ ಅನ್ನು ಹಿಡಿದುಕೊಂಡು ಕಳ್ಳ ಓಡಲು ಆರಂಭಿಸುತ್ತಾನೆ.
ಮೊಬೈಲ್‌ನಲ್ಲಿ ವಿಡಿಯೋ ಮಾಡಿದರು ಹೊರತು ಸಹಾಯಕ್ಕೆ ಬರಲಿಲ್ಲ: ವೃದ್ಧ ವ್ಯಕ್ತಿಯಿಂದ ಕಳ್ಳನೊಬ್ಬ ಬ್ಯಾಗ್ ಕಿತ್ತುಕೊಂಡು ಓಡುತ್ತಿದ್ದರೂ, ವೃದ್ಧನ ಸಹಾಯಕ್ಕೆ ಯಾರೂ ಬರಲಿಲ್ಲ. ಕಳ್ಳ ಕಳ್ಳ ಎಂದು ಕೂಗುತ್ತಿದ್ದರೂ ಯಾರೊಬ್ಬರೂ ಕಳ್ಳನನ್ನು ಹಿಡಿದು ಬ್ಯಾಗ್ ಅನ್ನು ಕಿತ್ತುಕೊಡಲಿಲ್ಲ. ಆದರೆ, ಅಲ್ಲಿ ಮಾಡಿದ್ದೊಂದೇ.. ಇದಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ನೋಡುತ್ತಾ ನಿಂತಿದ್ದ ಜನರು ಇದು ತಮಾಷೆಯಾಗಿದೆಯಲ್ಲಾ ಎಂದು ಮೊಬೈಲ್ ತೆಗೆದು ವಿಡಿಯೋ ಮಾಡಿದ್ದಾರೆ. ನಂತರ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಚಾಲಕನ ಹೆಸರು ನೋಡಿ ರೈಡ್ ಕ್ಯಾನ್ಸಲ್, ಧೈರ್ಯವಿದ್ದರೆ ಪ್ರಯಾಣಿಸಿ ಎಂದ ನೆಟ್ಟಿಗರು!
ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವಾಗ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಎಲೆಕ್ಟ್ರಾನಿಕ್ ಸಿಟಿ ಪ್ಲೈಓವರ್ ಬಳಿ ಕಳ್ಳನೊಬ್ ಬ್ಯಾಗ್ ಕಿತ್ತುಕೊಂಡು ಓಡುವ ವಿಡಿಯೋ ಎಂದು ಬರೆದುಕೊಂಡು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವು ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ.