Asianet Suvarna News Asianet Suvarna News

ಚಾಲಕನ ಹೆಸರು ನೋಡಿ ರೈಡ್ ಕ್ಯಾನ್ಸಲ್, ಧೈರ್ಯವಿದ್ದರೆ ಪ್ರಯಾಣಿಸಿ ಎಂದ ನೆಟ್ಟಿಗರು!

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕ್ ಮಾಡಿದ ಗ್ರಾಹಕ ಕೆಲವೇ ಹೊತ್ತಲ್ಲಿ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. ಚಾಲಕನ ಹೆಸರು ನೋಡಿ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಧೈರ್ಯ ಇದ್ದರೆ ಯಾರಾದರು ಪ್ರಯಾಣಿಸಿ ಎಂದು ಹಲವರು ಸವಾಲು ಹಾಕಿದ್ದಾರೆ.

Passenger cancel ola cab ride after seeing driver name post goes viral ckm
Author
First Published Jul 3, 2024, 9:02 PM IST | Last Updated Jul 3, 2024, 9:32 PM IST

ಬೆಂಗಳೂರು(ಜು.03) ಒಲಾ ಉಬರ್ ಸೇರಿದಂತೆ ಕೆಲ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಎಲ್ಲೆಡೆ ಲಭ್ಯವಿದೆ. ಇದರಿಂದ ಟ್ಯಾಕ್ಸಿ ಸೇವೆ ಸುಲಭವಾಗಿದೆ. ಕುಳಿತಲ್ಲಿಂದಲೇ ಬುಕಿಂಗ್ ಮಾಡಿ ಸುಲಭವಾಗಿ ಪ್ರಯಾಣ ಮಾಡಬಹುದು. ಗ್ರಾಹಕರ ಸುರಕ್ಷತೆಗೆ ಆ್ಯಪ್ ಟ್ಯಾಕ್ಸಿ ಸೇವೆಗಳು ಹಲವು ಫೀಚರ್ಸ್ ನೀಡಿದೆ. ಈ ಪೈಕಿ ರೈಡ್ ಕ್ಯಾನ್ಸಲ್ ಮಾಡುವ ಅವಕಾಶವನ್ನೂ ನೀಡಿದೆ. ಇಲ್ಲೊಬ್ಬ ಓಲಾ ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಬಳಿಕ ಚಾಲಕನ ಹೆಸರು ನೋಡಿದ ಪ್ರಯಾಣಿಕ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. 

ಯಮರಾಜ ಆಗಮಿಸಿದ್ದಾನೆ. ನಿಮ್ಮ ಲೋಕೇಶನ್‌ನಲ್ಲಿ ಕಾಯುತ್ತಿದ್ದಾರೆ(ಯಮರಾಜ ಹ್ಯಾಸ್ ಅರೈವ್ಡ್, ಈಸ್ ವೈಟಿಂಗ್ ಅಟ್ ಯುವರ್ ಲೋಕೇಶನ್) ಎಂದು ಓಲಾದಿಂದ ಸಂದೇಶ ಬಂದಿದೆ. ಈ ಸಂದೇಶ ನೋಡಿದ ಪ್ರಯಾಣಿಕ ರೈಡ್ ಕ್ಯಾನ್ಸಲ್ ಮಾಡಿದ್ದಾನೆ. ಬಳಿಕ ನಾನು ಮಲಗುತ್ತಿದ್ದೇನೆ ಎಂದು ಕಾರಣವನ್ನೂ ನೀಡಿದ್ದಾನೆ. 

ಬೆಂಗಳೂರು: ಪದೆ ಪದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡೋ ಈ ಕ್ಯಾಬ್ ಡ್ರೈವರ್ಸ್ ಗಳಿಕೆ ನೋಡಿ ನೆಟ್ಟಿಗರು ದಂಗು!

@timepassstruggler ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ. ಬಳಿಕ ಇದರ ಕೆಳಗಿ ಕರ್ನಾಟಕದಲ್ಲಿ ಗ್ರಾಹಕರೊಬ್ಬರು ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಆದರೆ ಚಾಲಕನ ಹೆಸರು ನೋಡಿ ರೈಡ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ವಿವರಣೆ ನೀಡಲಾಗಿದೆ. ಈ ಸ್ಕ್ರೀನ್ ಶಾಟ್ ವಿಡಿಯೋ ಭಾರಿ ವೈರಲ್ ಆಗಿದೆ. ಇದಕ್ಕೆ ಹಲವರು ಕಮೆಂಟ್ ಮಾಡಿದ್ದಾರೆ.

ಧೈರ್ಯ ಇದ್ದರೆ ಪ್ರಯಾಣಿಸಿ ಎಂದು ಸವಾಲು ಹಾಕಿದ್ದಾರೆ. ಯಮರಾಜ ನಮ್ಮ ಸ್ಥಳಕ್ಕೆ ಬಂದರೆ ಪ್ರಯಾಣಿಸುವ ಧೈರ್ಯ ಯಾರು ತೋರುತ್ತಾರೆ ಎಂದು ಹಲವರು ಪ್ರಶ್ನಿಸಿದ್ದಾರೆ. ಯಮರಾಜ ಬಂದಾಗಿದೆ. ನಿಮ್ಮ ಯಮಲೋಕ ಪ್ರಯಾಣ ಸುಖಕರವಾಗಿರಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ರೈಡ್ ಕ್ಯಾನ್ಸಲ್ ನಿರ್ಧಾರ ಸರಿಯಾಗಿದೆ ಎಂದು ಮತ್ತೆ ಕೆಲವರುು ಪ್ರಯಾಣಿಕರ ಪರ ನಿಂತಿದ್ದಾರೆ.

 

 

ಇಷ್ಟಕ್ಕೆ ಕಮೆಂಟ್ ಮುಗಿದಿಲ್ಲ. ಮತ್ತೆ ಕೆಲವರು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಓಲಾ ಸಂದೇಶ ಕಳುಹಿಸುವಾಗ ಸಣ್ಣ ತಪ್ಪಾಗಿದೆ. ಚಾಲಕನ ಹೆಸರು ವೈ ಅಮರ್ ರಾಜಾ( Y Amar Raja) ಜೊತೆಯಾಗಿ ಬರೆದ ಕಾರಣ ಯಮರಾಜ(Yamaraja) ಎಂದಾಗಿದೆ ಎಂದು ಸ್ಪಷ್ಟನೆ, ಸಮರ್ಥನೆ ನೀಡಿದ್ದಾರೆ.

ಇನ್ನೂ ಜಾರಿಯಾಗದ ಏಕರೂಪದ ಟ್ಯಾಕ್ಸಿ ದರ: ಆದೇಶ ಜಾರಿಗೆ ಮುಂದಾಗದ ಸಾರಿಗೆ ಇಲಾಖೆ

ಮತ್ತೆ ಕೆಲವರು ಇದು ವೈರಲ್ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಇದು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಈ ರೀತಿ ಎಡಿಟೆಡ್ ಫೋಟೋ, ವಿಡಿಯೋ ಮಾಡಿ ಹರಿಬಿಟ್ಟು ವೈರಲ್ ಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ಚರವಾಗಿರಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios