37 ವರ್ಷದ ವಿಧವೆ ಕವಿತಾ, 22 ವರ್ಷದ ಯುವಕ ಭಾಸ್ಕರ್‌ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದಕ್ಕಾಗಿ ತನ್ನ 14 ವರ್ಷದ ಮಗನನ್ನು ತೊರೆದು ಬಂದಿದ್ದು, ಕುಟುಂಬದಿಂದ ವಿರೋಧ ಮತ್ತು ಜೀವ ಬೆದರಿಕೆ ಎದುರಾದ ಕಾರಣ, ಈ ಜೋಡಿ ಮೈಸೂರಿನಲ್ಲಿ ಪೊಲೀಸ್ ರಕ್ಷಣೆ ಕೋರಿದೆ.

ಮೈಸೂರು: 37 ವರ್ಷದ ಮಹಿಳೆಯ ಮೇಲೆ 22 ವರ್ಷದ ಯುವಕನಿಗೆ ಪ್ರೇಮಾಂಕುರವಾಗಿದೆ. 1 ವರ್ಷದ ಪ್ರೀತಿಗಾಗಿ 14 ವರ್ಷದ ಮಗನ ಬಿಟ್ಟು ಬಂದ ಮಹಿಳೆಯು 22 ವರ್ಷದ ಯುವಕನನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತ ಆಗುತ್ತಿದ್ದಂತೆ ರಕ್ಷಣೆ ಕೋರಿ ಮೈಸೂರು ಎಸ್ಪಿ ಕಚೇರಿಗೆ ಈ ಜೋಡಿ ಮಂಗಳವಾರ ಭೇಟಿ ನೀಡಿದೆ.

ಬೆಂಗಳೂರಿನ ಚಳ್ಳಘಟ್ಟ ನಿವಾಸಿ 37 ವರ್ಷದ ಕವಿತಾ ಮತ್ತು ಮೈಸೂರಿನ ರಮ್ಮನಹಳ್ಳಿ ನಿವಾಸಿ ಭಾಸ್ಕರ್ ಮದುವೆಯಾದವರು. ಬೆಂಗಳೂರಿನಲ್ಲಿ ಟಿಟಿ, ಆಟೋ ಓಡಿಸುತ್ತಾ ದೊಡ್ಡಮ್ಮನ ಮನೆಯಲ್ಲಿದ್ದ ಭಾಸ್ಕರ್, ಬಂಡೆ ಮಕಾಳಮ್ಮ ದೇವಸ್ಥಾನಕ್ಕೆ ಕವಿತಾ ಬಂದಾಗ ಪರಿಚಯವಾಗಿ ಪ್ರೀತಿಸಿದ್ದಾರೆ. 8 ವರ್ಷಗಳ ಹಿಂದೆ ಕವಿತಾ ಪತಿ ನಿಧನ‌ರಾಗಿದ್ದು, ಇವರಿಗೆ 14 ವರ್ಷದ ಮಗ ಇದ್ದಾನೆ. ಈ ನಡುವೆ ಬೆಂಗಳೂರಿನ ಕುಂಬಳಗೋಡು ಪೊಲೀಸರಿಗೆ ಕವಿತಾ ತಂದೆ, ಮಗಳನ್ನು ಕಿಡ್ನಾಪ್ ಮಾಡಿರುವುದಾಗಿ ದೂರು ನೀಡಿದ್ದಾರೆ.

ಪ್ರೀತಿಯಲ್ಲಿ ಬಿದ್ದಿದ್ದ ಕವಿತಾ, ಭಾಸ್ಕರ್ ಜೊತೆಗೆ ಮನೆ ಬಿಟ್ಟು ಬಂದು, ಮೈಸೂರಿನ ಒಂಟಿಕೊಪ್ಪಲು ವೆಂಕಟೇಶ್ವರ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಅಲ್ಲದೆ, ಕವಿತಾ ಮಾವನ ಮಗ ಜೀವ ಬೆದರಿಕೆ ಹಾಕಿರುವ ಆರೋಪ ಸಹ ಕೇಳಿ ಬಂದಿದೆ. ಹೀಗಾಗಿ, ಈ ಜೋಡಿ ಜೀವ ಭಯದಿಂದಾಗಿ ಬೆಂಗಳೂರು ಬಿಟ್ಟು ಮೈಸೂರಿನ ರಮ್ಮನಹಳ್ಳಿಗೆ ಬಂದಿದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ತಂದೆ ಮನೆಯಲ್ಲಿದ್ದ ಕವಿತಾ ಅವರಿಗೆ, ಬೇರೊಬ್ಬನ ಜೊತೆ ಮದುವೆ ಮಾಡಲು ಕುಟುಂಬಸ್ಥರು ಯೋಜಿಸಿದ್ದರು. ಆದರೆ,