ಚಿತ್ರದುರ್ಗದ ಕಿರು ಮೃಗಾಲಯಕ್ಕೆ ಬೆಂಗಾಲ್ ಟೈಗರ್ಸ್ ಎಂಟ್ರಿ, ಪುಳಕಿತರಾದ ಪ್ರವಾಸಿಗರು

 ಕೋಟೆನಾಡಿನ ಮೃಗಾಲಯವೀಗ ಸಾಕಷ್ಟು ಅಭಿವೃದ್ಧಿ ಆಗಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ   ಆಗಮಿಸಿರುವ  ಎರಡು ಹುಲಿಗಳು ಮೃಗಾಲಯದ ಕೇಂದ್ರ ಬಿಂದುಗಳಾಗಿವೆ.

Bengal tigers arrived Chitradurga Adumalleshwara mini zoo gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.28): ಝೂ ಅಂದ್ರೆನೇ ಪ್ರಾಣಿಗಳ ಪಾಲಿಗೆ ಫ್ರೀಡಂ, ಹಾಗೂ ಪ್ರವಾಸಿಗರಿಗೆ ರೋಮಾಂಚನ ಎಂಬ ಮಾತೊಂದಿದೆ. ಅಂತೆಯೇ ಕೋಟೆನಾಡಿನ ಮೃಗಾಲಯವೀಗ ಸಾಕಷ್ಟು ಅಭಿವೃದ್ಧಿ ಆಗಿದ್ದು, ಆ ಕಿರು ಮೃಗಾಲಯಕ್ಕೆ ಅಪರೂಪದ ಆಕರ್ಷಕ ಅಥಿತಿಯೊಬ್ರು ಸಹ ಕಾಲಿಟ್ಟಿದ್ದಾರೆ.  ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ.   ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ, ಮೃಗಾಲಯ ಅಭಿವೃದ್ಧಿಗಾಗಿ ಜಿಲ್ಲೆಯ DMF ನಿಧಿಯಿಂದ ಸುಮಾರು 3 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆ‌ ಹಣದಲ್ಲಿ ಮೃಗಾಲಯಕ್ಕೆ ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯದಿಂದ ಹುಲಿ, ಸಿಂಹ,ಜೀಬ್ರಾ ಹಾಗೂ ಜಿರಾಫೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ತರುವ ಯೋಜನೆ ರೂಪಿಸಲಾಗಿತ್ತು. ಆದ್ರೆ ತಾಂತ್ರಿಕ ದೋಷಗಳಿಂದಾಗಿ ನೆನೆಗುದಿಗೆ ಬಿದ್ದಿದ್ದ ಝೂ ಅಭಿವೃದ್ಧಿ    ಪ್ಲಾನ್ ಅಂತೂ ಯಶಸ್ವಿಯಾಗಿದೆ. ಆಕರ್ಷಕ ಎರಡು ಹುಲಿಗಳು ಸೇರಿದಂತೆ ವಿವಿಧ ಪ್ರಾಣಿಗಳು  ಝೂ ಗೆ ಆಗಮಿಸಿವೆ. ಅವುಗಳಲ್ಲಿ  ನಿಶಾ ಎನ್ನುವ ಏಳು ವರ್ಷದ ಹೆಣ್ಣು ಹುಲಿ ಹಾಗು 11 ತಿಂಗಳ ನಾಮಕಾರಣವಾಗದ ಗಂಡು ಹುಲಿ ಪ್ರವಾಸಿಗರನ್ನು ಆಕರ್ಷಸುತ್ತಿದೆ. ಈ ಹುಲಿಗಳ, ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಭದ್ರತಾ ದೃಷ್ಟಿಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದೇವೆಂದು ವಲಯ ಅರಣ್ಯಾಧಿಕಾರಿ  ತಿಳಿಸಿದ್ದಾರೆ.

ಎಕ್ಸ್‌ ಮೇಲೆ ಸಿಕ್ಕಾಪಟ್ಟೆ ಸಿಟ್ಟಿದ್ಯಾ ? ಈ ಝೂನಲ್ಲಿ ಮಾಜಿ ಪ್ರೇಯಸಿ ಹೆಸ​ರನ್ನು ಜಿರ​ಳೆ​ಗಿ​ಡ್ಬೋದು!

ಇನ್ನೂ  ಈ ಭಾಗದಲ್ಲಿ ಅಪರೂಪ‌ ಎನಿಸಿರುವ ಹುಲಿಯನ್ನು, ಪುಸ್ತಕ ಹಾಗೂ ದೂರದ ಊರುಗಳಿಗೆ ತೆರಳಿ ಅಲ್ಲಿನ ಮೃಗಾಲಯಗಳಲ್ಲಿ ವೀಕ್ಷಿಸಬೇಕಿತ್ತು. ಹೀಗಾಗಿ ಕೋಟೆನಾಡಿನ ಕಿರು‌ ಮೃಗಾಲಯಕ್ಕೆ  ಆಗಮಿಸಿರುವ  ಎರಡು ಹುಲಿಗಳು ಮೃಗಾಲಯದ ಕೇಂದ್ರ ಬಿಂದುಗಳಾಗಿವೆ. ಅಲ್ಲದೇ  ಈ ಬಿರು ಬಿಸಿಲಿನಲ್ಲು ಹಚ್ಚ ಹಸಿರಾಗಿ ಕಂಗೊಳಿಸ್ತಿರೋ ಸೊಬಗಿನ ಮದ್ಯೆ ಓಡಾಡ್ತಿರೊ ಹುಲಿ, ಚಿರತೆ, ಕರಡಿಯಂತಹ ಅಪರೂಪದ ವನ್ಯಜೀವಗಳನ್ನು ನೋಡಿದ ಪ್ರವಾಸಿಗರು ಪುಳಕಿತರಾಗಿದ್ದು, ಮೃಗಾಲಯಕ್ಕೆ ನಿತ್ಯ ಪ್ರವಾಸಿಗರ ದಂಡೇ ಮೃಗಾಯಕ್ಕೆ ಹರಿದು ಬರ್ತಿದೆ.

Mysuru : ಮೃಗಾಲಯ ನಿರ್ವಹಣೆಗೆ ಅನುದಾನ ಕೋರಿ ಪ್ರಸ್ತಾವನೆ

ಒಟ್ಟಾರೆ ಪ್ರವಾಸಿಗರ ಆಕರ್ಷಣೆಗಾಗಿ ಕೋಟೆನಾಡಿನ ಕಿರು ಮೃಗಾಲಯ ಕ್ಕೆ ಹುಲಿಗಳನ್ನು ತರಲಾಗಿದೆ. ಈ ಭಾಗದಲ್ಲಿ ಅಪರೂಪ ಹಾಗು ಆಕರ್ಷಕ ಎನಿಸಿರುವ ವ್ಯಾಘ್ರಗಳನ್ನು ವೀಕ್ಷಿಸಲು ಪ್ರವಾಸಿಗರು ಸಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಸೊಬಗಿನ ಸವಿಯನ್ನು ಸವಿಯುತಿದ್ದಾರೆ.

Latest Videos
Follow Us:
Download App:
  • android
  • ios