ಕರ್ನಾಟಕ ಮೃಗಾಲಯ ಪ್ರಾಧಿಕಾರದಡಿ ಬೆಳಗಾವಿ, ಹಂಪಿ, ಕಲ್ಬುರ್ಗಿ ಮತ್ತು ಗದಗ ಮೃಗಾಲಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದ್ದು, 9 ಮೃಗಾಲಯಗಳ ನಿರ್ವಹಣೆಗೆ ಅಗತ್ಯವಿರುವ . 30 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ತಿಳಿಸಿದರು.

- ಮೈಸೂರು (ಹ.16 ) : ಕರ್ನಾಟಕ ಮೃಗಾಲಯ ಪ್ರಾಧಿಕಾರದಡಿ ಬೆಳಗಾವಿ, ಹಂಪಿ, ಕಲ್ಬುರ್ಗಿ ಮತ್ತು ಗದಗ ಮೃಗಾಲಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದ್ದು, 9 ಮೃಗಾಲಯಗಳ ನಿರ್ವಹಣೆಗೆ ಅಗತ್ಯವಿರುವ . 30 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ತಿಳಿಸಿದರು.

ಮೈಸೂರು ಮತ್ತು ಬನ್ನೇರುಘಟ್ಟಮೃಗಾಲಯವನ್ನು ಬೃಹತ್‌ ಮೃಗಾಲಯ ಎಂದು ಗುರುತಿಸಿದ್ದರೆ, ಉಳಿದ 7 ಮೃಗಾಲಯಗಳನ್ನು ಕಿರು ಮೃಗಾಲಯ ಗುರುತಿಸಲಾಗಿದೆ. ಕೋವಿಡ್‌ ನಂತರ ವೀಕ್ಷಕರ ಸಂಖ್ಯೆಯು ಕುಸಿದಿದ್ದರಿಂದ ಆದಾಯಕ್ಕೆ ತೀವ್ರ ಸಂಕಷ್ಟದ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಉಳಿಕೆ ಮೃಗಾಲಯಗಳನ್ನು ಮಾತೃ ಮೃಗಾಲಯವಾದ ಮೈಸೂರು ಮೃಗಾಲಯವು ನಿರ್ವಹಿಸಲೇಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2022ರ ಏ. 1 ರಿಂದ ಡಿ. 31 ರವರೆಗೆ ಭೇಟಿ ನೀಡಿ ಆದಾಯ ಹಾಗೂ ಪ್ರವೇಶ ದ್ವಾರದಿಂದ ಸುಮಾರು ಒಟ್ಟಾರೆ ಎಲ್ಲಾ ಮೃಗಾಲಯಗಳಿಂದ 75.72 ಕೋಟಿ ಸಂಗ್ರಹವಾಗಿದೆ. ಬನ್ನೇರುಘಟ್ಟಮೃಗಾಲಯದಿಂದ 42.68 ಕೋಟಿ, ಮೈಸೂರು ಮೃಗಾಲಯದಿಂದ 24.76 ಕೋಟಿ ಸಂಗ್ರಹವಾಗಿದೆ ಎಂದು ಅವರು ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ- ಪ್ರಾಣಿ ಸಂಘರ್ಷ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ರಕ್ಷಿಸಲಾಗುತ್ತಿದೆ. ಇದರಿಂದ ಪ್ರಾಧಿಕಾರದ ಮೇಲೆ ಹೆಚ್ಚಿನ ಆರ್ಥಿಕವಾಗಿ ಹೆಚ್ಚುವರಿ ಹೊರೆ ಉಂಟಾಗುತ್ತಿದೆ. ಮೈಸೂರು ಮೃಗಾಲಯ, ಬನ್ನೇರುಘಟ್ಟಜೈವಿಕ ಉದ್ಯಾನವನ, ಹುಲಿ ಸಿಂಹ ಸಫಾರಿ, ಶಿವಮೊಗ್ಗ ಮತ್ತು ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಝೂವಾಲಜಿಕಲ್‌ ಪಾರ್ಕ್ ಮತ್ತು ಗದಗ ಮೃಗಾಲಯದಲ್ಲಿ ರಕ್ಷಿಸಲಾದ ಪ್ರಾಣಿಗಳ ನಿರ್ವಹಣೆ, ಪಾಲನೆ, ಪೋಷಣೆ, ಆಹಾರ ಮತ್ತು ಮೇವು, ಪಶುವೈದ್ಯಕೀಯ ವೆಚ್ಚ, ಪ್ರಾಣಿಪಾಲಕರ ವೇತನ ಇತ್ಯಾದಿಗೆ ಪ್ರತಿ ವರ್ಷ ಸುಮಾರು . 7 ರಿಂದ 8 ಕೋಟಿಗ ಹೆಚ್ಚು ಪ್ರಾಧಿಕಾರದ ಆಂತರಿಕ ಸಂಪನ್ಮೂಲದಿಂದ ಖರ್ಚು ಭರಿಸುತ್ತಿದ್ದೇವೆ. ಆದ್ದರಿಂದ ರಕ್ಷಿಸಲ್ಪಟ್ಟಪ್ರಾಣಿಗಳ ಪಾಲನೆ ಪೋಷಣೆ, ನಿರ್ವಹಣೆ, ಆಹಾರ, ಪಶುವೈದ್ಯಕೀಯ ವೆಚ್ಚ ಹಾಗೂ ಆಡಳಿತಾತ್ಮಕ ವೆಚ್ಚ ಭರಿಸಲು ಪ್ರತ್ಯೇಕ ಅನುದಾನ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

2022-23ನೇ ಸಾಲಿನಲ್ಲಿ 115.31 ಕೋಟಿಗೆ ಬಜೆಟ್‌ ಅನುಮೋದನೆ ನೀಡಲಾಗಿದೆ. 2023ರ ಮಾಚ್‌ರ್‍ವರೆಗೆ ಮೃಗಾಲಯಗಳ ನಿರ್ವಹಣೆ, ಅಭಿವೃದ್ಧಿ, ಆಡಳಿತಾತ್ಮಕ ವೆಚ್ಚ, ಪ್ರಾಣಿಗಳ ಆಹಾರ ಇತ್ಯಾದಿ ವೆಚ್ಚ ಭರಿಸಲು ಸುಮಾರು . 30 ಕೋಟಿ ಬೇಕಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಿಂದ . 1.62 ಕೋಟಿ ದೇಣಿಗೆ ಸಂಗ್ರಹವಾಗಿದೆ. ಬೆಳಗಾವಿ ಕಿರು ಮೃಗಾಲಯದಲ್ಲಿ ಪ್ರಾಧಿಕಾರದ ಆಂತರಿಕ ಹಾಗೂ ಸರ್ಕಾರದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯಾದ ಹುಲಿ ಸಾಫಾರಿ, ಚೈನ್‌ಲಿಂಕ್‌ ಮೆಶ್‌ ನಿರ್ಮಾಣ, ಚುಕ್ಕೆ ಜಿಂಗೆ ಆವರಣ, ಕತ್ತೆಕಿರುಬ ಹೋಲ್ಡಿಂಗ್‌ ರೂಂ, ಹುಲಿ ಹೋಲ್ಡಿಂಗ್‌ ರೂಮ್‌, ಹೈನಾ ಆವರಣ, ಸಾಂಬಾರ್‌ ಜಿಂಕೆ, ಹುಲಿ ಸಫಾರಿಯ ಚೈನ್‌ಲಿಂಕ್‌ ಮೆಶ್‌ ನಿರ್ಮಾಣ, ನರಿ ಆವರಣ, ಸ್ಲಾಥ್‌ ಕರಡಿ ಆವರಣ, ಎಮು ಆವರಣ, ಚಿರತೆ ಆವರಣ ಕಾಮಗಾರಿಯನ್ನು . 5.36 ಕೋಟಿ ವೆಚ್ಚದಲ್ಲಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಉಳಿದಂತೆ ಪಶು ಆಸ್ಪತ್ರೆ ಕಟ್ಟಡ, ಬಾವಿ ನಿರ್ಮಾಣ, ಪೈಪ್‌ಲೈನ್‌, ವರ್ಮಿ ಕಾಂಪೋಸ್ಟ್‌ ಶೆಡ್‌ ನಿರ್ಮಾಣ ಕಾಮಗಾರಿ ಮುಂತಾದವು . 1.63 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಹೊಸ ಕೆರೆ ನಿರ್ಮಾಣ, ಸಿಂಹದ ಆವರಣದ ಬಳಿ ಇರುವ ಕೆರೆ ಅಭಿವೃದ್ದಿ, ಹುಲಿ ಸಫಾರಿ ಬಳಿಯ ಕೆರೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಪ್ರವೇಶ ದ್ವಾರ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ , 15 ಕೋಟಿ ಅನುದಾನದ ಅಗತ್ಯವಿದೆ ಎಂದು ಅವರು ವಿವರಿಸಿದರು.

ಹಂಪಿಯ ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ 100್ಡ60 ವಿಸ್ತೀರ್ಣದಲ್ಲಿ ಹೊಸ ಎಂಟ್ರೆನ್ಸ್‌ ಪ್ಲಾಜಾ ನಿರ್ಮಿಸಲಾಗುತ್ತಿದೆ. ಇದಕ್ಕೆ ಒಟ್ಟು ಅಂದಾಜು ವೆಚ್ಚ . 9.34 ಕೋಟಿ ಆಗಲಿದೆ. ಫೇಸ್‌- 1ರಡಿ ಟಿಕೆಟಿಂಗ್‌ ಕೌಂಟರ್‌, ಗ್ರಾಂಡ್‌ ಎಂಟ್ರೆನ್ಸ್‌ ಪ್ಲಾಜಾ ಕಾಂಪೌಂಡ್‌, ಕ್ಲೋಕ್‌ ರೂಮ್‌, 4 ಸ್ಟೋನ್‌ ಮಂಟಪ ಇದೆ. ಇದು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ. ಇದಕ್ಕೆ ಸುಮಾರು . 5 ಕೋಟಿ ವೆಚ್ಚವಾಗುತ್ತದೆ ಎಂದರು.

ಕಲಬುರ್ಗಿ ಮೃಗಾಲಯ ವಿಸ್ತರಣೆಗೆ ಕ್ರಮವಹಿಸಿದ್ದು, ಚಿತ್ತಾಪುರ ತಾಲೂಕು ಮಾಡಬೂಳ ಗ್ರಾಮದ ಸರ್ವೇ ನಂ. 48ರಲ್ಲಿ 42.38 ಎಕರೆ ಪ್ರದೇಶವನ್ನು ಪ್ರಾಧಿಕಾರಕ್ಕೆ ಮಂಜೂರು ಮಾಡಿದ್ದು, ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ದಾವಣಗೆರೆ ಕಿರು ಮೃಗಾಲಯ ಅಭಿವೃದ್ಧಿಗೆ ಸುಮಾರು 72.83 ಹೆಕ್ಟೇರ್‌ ಪ್ರದೇಶವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಪತ್ರ ವ್ಯವಹಾರ ನಡೆಸಲಾಗಿದೆ ಎಂದರು.

ಸದ್ಯದಲ್ಲಿಯೇ ಮೈಸೂರು ಮೃಗಾಲಯದಲ್ಲಿ ಸಿಂಹದ ಮನೆಯನ್ನು ಉದ್ಘಾಟಿಸಲಿದ್ದು, ಹಲವು ಮಂದಿ ದಾನಿಗಳಿಂದ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆಯು ನಡೆಯಲಿದೆ. ವಾಹನ ನಿಲುಗಡೆ ಸಮಸ್ಯೆ ನಿವಾಹರಣೆಗೆ ರೇಸ್‌ ಕೋರ್ಸ್‌ ಜಾಗವನ್ನು ಹಸ್ತಾಂತರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈಗ ಇರುವ ಪಾರ್ಕಿಂಗ್‌ ಸ್ಥಳಕ್ಕೆ ಡಾಂಬರು ಹಾಕಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಸದಸ್ಯರಾದ ಗೋಕುಲ್‌ ಗೋವರ್ಧನ್‌, ಜ್ಯೋತಿ ರೇಚಣ್ಣ, ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಇದ್ದರು.