ಬೆಳ್ತಂಗಡಿಯ ನಿಡ್ಲೆಯ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಸಂಸ್ಥೆಯು ದೀಪಾವಳಿ ಹಬ್ಬದ ಅಂಗವಾಗಿ ತನ್ನ ಉದ್ಯೋಗಿಗಳಿಗೆ ₹ 1 ಕೋಟಿ ಮೌಲ್ಯದ ಕೊಡುಗೆಗಳನ್ನು ನೀಡಿದೆ. ಸಾಧನೆ ಮಾಡಿದ ಉದ್ಯೋಗಿಗಳಿಗೆ 5 ಟಾಟಾ ನೆಕ್ಸಾನ್ ಇವಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಈ ಸಂಸ್ಥೆಯು ಅಡಿಕೆ ಹಾಳೆ ತಟ್ಟೆಗಳನ್ನು ತಯಾರಿಸಿ 20ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ.
ಬೆಳ್ತಂಗಡಿ(ನ.7): ಬೆಳ್ತಂಗಡಿ(Belthangady) ನಿಡ್ಲೆಯ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್(Agrilief Exports Private Limited) ಸಂಸ್ಥೆಯು ದೀಪಾವಳಿ ಹಬ್ಬ(Deepavali festival)ದ ಆಚರಣೆ, ಅಗ್ರಿಲೀಫ್ ಉತ್ಸವ(Agrilief Utsav) ಅಂಗವಾಗಿ ತನ್ನ ಉದ್ಯೋಗಿಗಳಿಗೆ ₹ 1 ಕೋಟಿ ರು. ಮೌಲ್ಯದ ವಿವಿಧ ಕೊಡುಗೆಗಳನ್ನು ನೀಡಿದೆ.
ನಿಡ್ಲೆಯ ಕಾರ್ಖಾನೆಯಲ್ಲಿ ಅಗ್ರಿಲೀಫ್ ಉತ್ಸವ
ನಿಡ್ಲೆಯ ಕಾರ್ಖಾನೆಯಲ್ಲಿ ಗುರುವಾರ ದೀಪಾವಳಿ ಸಂಭ್ರಮ, ಅಗ್ರಿಲೀಫ್ ಉತ್ಸವ ನಡೆಯಿತು. ಈ ವೇಳೆ ಸಾಧನೆ ಮಾಡಿದ ಐವರು ಉದ್ಯೋಗಿಗಳಿಗೆ 5 ಟಾಟಾ ನೆಕ್ಸಾನ್ ಇವಿ ಕಾರುಗಳನ್ನು ನೀಡಲಾಯಿತು. ಇಬ್ಬರಿಗೆ 2 ಲಕ್ಷ ಮೌಲ್ಯದ ಎರಡು ದ್ವಿಚಕ್ರವಾಹನಗಳನ್ನು ನೀಡಲಾಯಿತು. ಹಲವಾರು ಅತ್ಯುತ್ತಮ ಉದ್ಯೋಗಿಗಳನ್ನು ಗುರುತಿಸಿ ಅಮೂಲ್ಯ ಉಡುಗೊರೆಗಳೊಂದಿಗೆ ಸನ್ಮಾನಿಸಲಾಯಿತು.
ಅಗ್ರಿಲೀಫ್: ಅಡಿಕೆ ಹಾಳೆ ತಟ್ಟೆ ತಯಾರಕ ಕಂಪನಿ
ಅಗ್ರಿಲೀಫ್ ಭಾರತದ ಪ್ರಮುಖ ಅಡಿಕೆ ಹಾಳೆ ತಟ್ಟೆಗಳ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ತನ್ನ ರೈತ ಜಾಲದ ಮೂಲಕ, ಸುಮಾರು 10,000 ರೈತ ಕುಟುಂಬಗಳಿಗೆ ಪರ್ಯಾಯ ಆದಾಯದ ಅವಕಾಶಗಳನ್ನು ಒದಗಿಸಿದೆ. ಅಲ್ಲದೆ 20 ಕ್ಕೂ ಹೆಚ್ಚು ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
ಅಗ್ರಿಲೀಫ್ ಉತ್ಸವದಲ್ಲಿ ನಿರೂಪಕಿ ತನುಶ್ರೀ ಭಾಗಿ
ಕಾರ್ಯಕ್ರಮದಲ್ಲಿ ಖ್ಯಾತ ಕನ್ನಡ ಕಿರುತೆರೆ ನಿರೂಪಕಿ ಅನುಶ್ರೀ, ನಿರ್ದೇಶಕ ಮತ್ತು ನಟ ಜೆ.ಪಿ. ತುಮಿನಾಡ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮತ್ತು ಭಟ್ ’ಎನ್’ ಭಟ್ ಸಂಸ್ಥೆಯ ಸುದರ್ಶನ್ ಭಟ್ ಬೆದ್ರಾಡಿ ಉಪಸ್ಥಿತರಿದ್ದು ಸಂವಾದ ನಡೆಸಿಕೊಟ್ಟರು.













