ಭಾರತೀಯ ರೈಲ್ವೇಯಿಂದ ಭರ್ಜರಿ ದೀಪಾವಳಿ ಬೋನಸ್, 1,886 ಕೋಟಿ ರೂ ಗಿಫ್ಟ್, ಘೋಷಿಸಿದೆ. ಈ ಮೂಲಕ ಹಬ್ಬ ಆಚರಿಸಲು ಸಜ್ಜಾಗಿರುವ ಉದ್ಯೋಗಿಗಳ ಸಂಭ್ರಮ ಡಬಲ್ ಆಗಿದೆ. ಪ್ರತಿಯೊಬ್ಬರಿಗೆ ಎಷ್ಟು ರೂಪಾಯಿ ಬೋನಸ್ ಸಿಗಲಿದೆ?
ನವದೆಹಲಿ (ಸೆ.24) ಭಾರತೀಯ ರೈಲ್ವೇ ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ದೀಪಾವಳಿ ಹಬ್ಬದ ಬೋನಸ್ ಘೋಷಿಸಿದೆ. ಇದಕ್ಕಾಗಿ ಒಟ್ಟು 1,886 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಭಾರತೀಯ ರೈಲ್ವೇಯ 10.91 ಲಕ್ಷ ಉದ್ಯೋಗಿಗಳಿಗೆ ಈ ಬಾರಿ ದೀಪಾವಳಿ ಹಬ್ಬದ ಬೋನಸ್ ನೀಡಲಾಗುತ್ತಿದೆ. ಈ ಮೂಲಕ ಉದ್ಯೋಗಿಗಳ ಹಬ್ಬದ ಸಂಭ್ರಮ ಡಬಲ್ ಮಾಡಲಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಹತವ್ದ ಘೋಷಣೆ ಮಾಡಿದ್ದಾರೆ.
ಒಬ್ಬ ಉದ್ಯೋಗಿಗೆ ಗರಿಷ್ಠ ಎಷ್ಟು ರೂಪಾಯಿ ಬೋನಸ್ ಸಿಗಲಿದೆ
ಭಾರತೀಯ ರೈಲ್ವೇ ಇಲಾಖೆಯಲ್ಲಿ 10.91 ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಬೋನಸ್ ನೀಡಲಾಗುತ್ತಿದೆ. ಎಷ್ಟು ಬೋನಸ್ ನೀಡಲಾಗುತ್ತದೆ ಅನ್ನೋ ಕುತೂಹಲಕ್ಕೂ ಅಶ್ವಿನಿ ವೈಷ್ಣನ್ ಉತ್ತರ ನೀಡಿದ್ದಾರೆ. ಪ್ರತಿ ಉದ್ಯೋಗಿಯ ವೇತನ ತಿಂಗಳ ಎಷ್ಟಿದೆಯೋ? ಈ ಪೈಕಿ 78 ದಿನ ಅಂದರೆ ಎರಡು ತಿಂಗಳು 18 ದಿನದ ಬೇಸಿಕ್ ವೇಜಸ್ ಅಷ್ಟು ಬೋನಸ್ ಸಿಗಲಿದೆ ಎಂದಿದ್ದಾರೆ. ಅಂದರೆ ಒಬ್ಬ ರೈಲ್ವೇ ಉದ್ಯೋಗಿಗೆ ದೀಪಾವಳಿ ಬೋನಸ್ ರೂಪದಲ್ಲಿ ಗರಿಷ್ಠ 17,951 ರೂಪಾಯಿ ಸಿಗಲಿದೆ. ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (PLB) ದುರ್ಗಾ ಪೂಜೆ/ದಸರಾ ಹಬ್ಬಕ್ಕೂ ಮೊದಲೇ ಖಾತೆಗೆ ಜಮೆ ಆಗಲಿದೆ ಎಂದಿದ್ದಾರೆ.
ಕಳೆದ ವರ್ಷ ಕೇಂದ್ರ ರೈಲ್ವೇ ಇಲಾಖೆ 11.72 ಲಕ್ಷ ರೈಲ್ವೇ ಉದ್ಯೋಗಿಗಳಿಗೆ 2,029 ಕೋಟಿ ರೂಪಾಯಿ ಬೋನಸ್ ವಿತರಣೆ ಮಾಡಿತ್ತು. ಈ ಬಾರಿ ಹಲವು ಉದ್ಯೋಗಿಗಳು ನಿವೃತ್ತರಾಗಿದ್ದಾರೆ. ಇನ್ನು ನೇಮಕಾತಿಯ ಪ್ರಗತಿಯಲ್ಲಿದೆ. ಹೀಗಾಗಿ ಉದ್ಯೋಗಿಗಳ ಸಂಖ್ಯೆ ಇಳಿಕೆಯಾದಿದೆ.
ರೈಲ್ವೇ ಇಲಾಖೆ ಸಿಬ್ಬಂದಿಗಳಿಗೆ ಬೋನಸ್
ರೈಲ್ವೇ ಇಲಾಖೆಯ ಸಿಬ್ಬಂದಿ ಸೇರಿದಂತೆ ಸಂಪೂರ್ಣ ಉದ್ಯೋಗಿಗಳಿಗೆ ಬೋನಸ್ ಸಿಗಲಿದೆ. ಎಲ್ಲಾ ಸಿಬ್ಬಂದಿ, ಟ್ರಾಕ್ ಮೈಂಟೇನರ್ಸ್, ಲೋಕೋಮೋಟಿವ್ ಪೈಲೆಟ್ಸ್, ಟ್ರೈನ್ ಮ್ಯಾನೇಜರ್, ಸ್ಟೇಶನ್ ಮಾಸ್ಟರ್, ಸೂಪರ್‌ವೈಸರ್, ಟೆಕ್ನೀಶಿಯನ್, ಟೆಕ್ನಕಲ್ ಹೆಲ್ಪರ್, ಪಾಯಿಂಟ್ಸ್‌ಮೆನ್, ಮಿನಿಸ್ಟ್ರಿಯಲ್ ಸಿಬ್ಬಂದಿ ಹಾಗೂ ಇತರ ಗ್ರೂಪ್ ಸಿ ಸಿಬ್ಬಂದಿಗೂ ಬೋನಸ್ ಸಿಗಲಿದೆ.
ರೈಲ್ವೇ ಇಲಾಖೆಯ ಪ್ರಗತಿ
2024-25ರ ಸಾಲಿನಲ್ಲಿ ಭಾರತೀಯ ರೈಲ್ವೇ ಇಲಾಖೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಚಿವಾಲಯ ಹೇಳಿದೆ. 1,614.90 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದೆ. 7.3 ಬಿಲಿಯನ್ ಪ್ರಯಾಣಿಕರು ರೈಲ್ವೇ ಮೂಲಕ ಪ್ರಯಾಣ ಮಾಡಿದ್ದಾರೆ. ಇನ್ನು ಹಬ್ಬದ ಸಂದರ್ಭದಲ್ಲಿ ರೈಲ್ವೇ ಇಲಾಖೆ ಪ್ರತಿ ರೈಲುಗಳು ಲಾಭದಾಯಕವಾಗಿದೆ. ಜಿಎಸ್‌ಟಿ ಕಡಿತದ ಬಳಿಕ ಇದರ ಸದುಪಯೋಗವೂ ಪ್ರಯಾಣಿಕರಿಗೆ ಆಗಲಿದೆ ಎಂದಿದೆ.
