ರಾಜ್ಯೋತ್ಸವದ ಭರವಸೆಗಷ್ಟೇ ಸಿಮಿತವಾಯ್ತು ಬಳ್ಳಾರಿ ಬೆಟ್ಟದ ರೋಪ್‌ವೇ ನಿರ್ಮಾಣ ಯೋಜನೆ: ಇನ್ನೆಷ್ಟು ವರ್ಷ ಬೇಕು?
ಬಳ್ಳಾರಿ ನಗರದ ಮಧ್ಯಭಾಗದಲ್ಲಿರುವ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯು ಕನ್ನಡ ರಾಜ್ಯೋತ್ಸವದ ಘೋಷಣೆಗಷ್ಟೇ ಸೀಮಿತವಾಗಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ನ.01): ಏಷ್ಯಾದಲ್ಲಿಯೇ ಅತಿದೊಡ್ಡ ಮತ್ತು ಏಕೈಕ ಏಕಶಿಲಾ ಬೆಟ್ಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ರೇ ಅದಕ್ಕೊಂದು ರೋಪ್ ವೇ ಮಾಡೋ ಮೂಲಕ ಅಲ್ಲಿರೋ ಸೌಂದರ್ಯ ಮತ್ತು ಅದ್ಭತವಾದ ಕಲೆ ಮತ್ತು ಕೋಟೆ ಭಾಗವನ್ನು ಜನರಿಗೆ ತೋರಿಸಬೇಕೆಂದು ದಶಕಗಳ ಕನಸಿದೆ. ಆದರೆ, ಈ ಗುಡ್ಡ ನೆನಪಾಗೋದು ಮಾತ್ರ ನವೆಂಬರ್ ಒಂದರಂದು ಧ್ವಜಾರೋಹಣ ಮಾಡೋವಾಗ ಮಾತ್ರ. ಬಳ್ಳಾರಿ ಗುಡ್ಡದಲ್ಲಿ ಧ್ವಜಾರೋಹಣ ಮಾಡಬೇಕಾದ್ರೇ, ಗುಡ್ಡ ಹತ್ತೋ ಕಷ್ಟ ಅಷ್ಟಿಷ್ಟಲ್ಲ. ಹೀಗಾಗಿ ರೋಪ್ ವೇ ಯಾವಾಗ ಎನ್ನುತ್ತಿದ್ದಾರೆ ಬಳ್ಳಾರಿ ಜನರು..
ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ದಶಕಗಳಿಂದಲೂ ನೆನೆಗೂದಿಗೆ ಬಿದ್ದಿರೋ ಬಳ್ಳಾರಿ ಗುಡ್ಡದ ರೋಪ್ ವೇ ಕಾಮಗಾರಿ. ಸರಿಯಾದ ರೂಪುರೇಷ ಇಲ್ಲದೇ ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಹೌದು, ಏಷ್ಯಾದಲ್ಲಿಯೇ ಅತಿದೊಡ್ಡ ಏಕಶಿಲಾ ಬೆಟ್ಟ ಎನ್ನುವ ಖ್ಯಾತಿ ಪಡೆದಿರೋ ಬಳ್ಳಾರಿ ಬೆಟ್ಟವನ್ನು ಅಭಿವೃದ್ಧಿ ಮಾಡಬೇಕೆಂದು ಬಿಜೆಪಿ ಸರ್ಕಾರದಲ್ಲಿ ಯೋಜನೆಯೊಂದನ್ನು ರೂಪಿಸಲಾಗಿತ್ತು. ಇಲ್ಲಿ 400ಕ್ಕೂ ಅಧಿಕ ಮೆಟ್ಟಿಲು ಇರುವ ಹಿನ್ನೆಲೆಯಲ್ಲಿ ಅತಿ ಎತ್ತರವಾದ ಈ ಪ್ರದೇಶಕ್ಕೆ ನಡೆದು ಹೋಗಲು ತೊಂದರೆಯಾಗುತ್ತದೆಂದು ರೋಪ್ ವೇ ನಿರ್ಮಾಣ ಮಾಡೋ ಯೋಜನೆ ರೂಪಿಸಿದ್ದರು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿತ್ತು. ಆದರೆ ಈವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ.
ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ದೃಶ್ಯ ಸೆರೆಹಿಡಿದ ಯೂಟೂಬರ್: ಆತನ ಪಾಡು ನೀವೇ ನೋಡಿ..!
ಪ್ರತಿ ವರ್ಷ ನವೆಂಬರ್ ಒಂದರಂದು ರಾಜ್ಯದಲ್ಲಿಯೇ ಅತಿ ಉದ್ದದ ನಾಡ ಧ್ವಜಾರೋಹಣ ಹಾರಿಸೋದು ವಾಡಿಕೆ. ನವೆಂಬರ್ ತಿಂಗಳು ಬಂದಾಗ ಮಾತ್ರ ಬೆಟ್ಟದ ಮೇಲಿನ ಸ್ಥಳದ ಅಭಿವೃದ್ಧಿ ಮತ್ತು ರೋಪ್ ವೇ ಕಾಮಗಾರಿ ಬಗ್ಗೆ ಎಲ್ಲರೂ ಯೋಚನೆ ಮಾಡುತ್ತಾರೆ. ಆದ್ರೇ, ಇಲ್ಲಿ ಕನಿಷ್ಟ ಧ್ವಜಾರೋಹಣ ಮಾಡಲು ಧ್ವಜಸ್ಥಂಭ ಕೂಡ ನಿರ್ಮಾಣ ಮಾಡಿಲ್ಲ. ಕಳೆದ ಇಪ್ಪತ್ತು ವರ್ಷದಿಂದ ಇಲ್ಲಿ ಕನ್ನಡ ಪರ ಸಂಘಟನೆಯವರು ಧ್ವಜಾರೋಹಣ ಮಾಡುತ್ತಿದ್ದಾರೆ. ಈ ಬಾರಿಯೂ 68 ಅಡಿ ಉದ್ದದ ಧ್ವಜಾರೋಹಣ ಮಾಡಲಾಗಿದೆ. ರೋಪ್ ವೇ ಜೊತೆಗೆ ಧ್ವಜ ಸ್ಥಂಭ ನಿರ್ಮಾಣ ಮಾಡಿ ಎನ್ನುತ್ತಾರೆ ಕನ್ನಡ ಪರ ಹೋರಾಟಗಾರರ ಮಂಜು..
ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ: ಅಖಂಡ ಜಿಲ್ಲೆಯಾಗಿದ್ದಾಗ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಬಹುತೇಕ ಪ್ರವಾಸಿ ತಾಣ ಇರೋದ್ರಿಂದ ಬಳ್ಳಾರಿ ಪ್ರವಾಸಿ ಜಿಲ್ಲೆಯೆಂದು ಪ್ರಖ್ಯಾತಿ ಪಡೆದಿತ್ತು. ಆದ್ರೇ, ವಿಭಜನೆ ಬಳಿಕ ಬಳ್ಳಾರಿಯಲ್ಲಿರೋ ಐತಿಹಾಸಿ ತಾಣಗಳ ಅಭಿವೃದ್ಧಿ ಮಾಡಬೇಕೆಂದು ಅಂದಿನ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಪಣ ತೊಟ್ಟರು. ಹಂಪಿ ಉತ್ಸವ ಇಲ್ಲವಾದ್ರೇನು ಬಳ್ಳಾರಿ ಉತ್ಸವ ಮಾಡೋಣವೆಂದು ಉತ್ಸವವನನ್ನು ಮಾಡಿದ್ರು. ಅದೇ ರೀತಿ ಐತಿಹಾಸಿಕ ಬಳ್ಳಾರಿ ಗುಡ್ಡಕ್ಕೆ ರೋಪ್ ವೇ ಮಾಡಬೇಕೆಂದು ಪ್ಲಾನ್ ಮಾಡಿದ್ರು. ಆದ್ರೇ, ಅದು ಕೈಗೂಡಲಿಲ್ಲ. ಇದೀಗ ಬಳ್ಳಾರಿ ಉಸ್ತುವಾರಿ ಸಚಿವ ಮಾತ್ರ ರೋಪ್ ವೇ ಮಾಡೋ ವಿಷಯ ದಲ್ಲಿ ಸರ್ಕಾರ ಗಂಭೀರವಾಗಿದೆ ಮಾಡಿಯೇ ತಿರುತ್ತೇವೆ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಗಂಗಮ್ಮನಗುಡಿ ಸ್ಪಾಂಜ್ ಫ್ಯಾಕ್ಟರಿಗೆ ಬೆಂಕಿ
ಅಲ್ಲದೇ ಇದೇ ಮೊದಲ ಬಾರಿ ಬೆಟ್ಟದ ಮೇಲೆ ಧ್ವಜಾರೋಹಣ ಮಾಡಿದ ಶಾಸಕ ಭರತ್ ರೆಡ್ಡಿ ಮುಂದಿನ ವರ್ಷದೊಳಗೆ ಧ್ವಜ ಸ್ಥಂಭ ನಿರ್ಮಾಣ ಮಾಡೋದಾಗಿ ಭರವಸೆ ನೀಡಿದ್ದಾರೆ. ರೋಪ್ ವೇ ಮಾಡೋದು ದಶಕಕಗಳ ಕನಸಾಗಿದೆ. ಬಿಜೆಪಿ ಸರ್ಕಾರದಲ್ಲಿ ತೀವ್ರತೆ ಪಡೆದುಕೊಂಡಿತಾದ್ರು. ಅನುಷ್ಠಾನಕ್ಕೆ ಬರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿಯಾದ್ರೂ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ ಕಾದು ನೋಡಬೇಕಿದೆ.