ಮೈಸೂರು[ಫೆ.21] ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಮೈಸೂರಿನ ಸೈಗ ಹೆಲ್ತ್ ಅಂಡ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡಿ ಪಾರ್ಲರ್ ಮಾಲಕಿ ಉಷಾ ಮತ್ತು ವೇಶ್ಯಾವಾಟಿಕೆಗೆ ನೆರವು ನೀಡುತ್ತಿದ್ದ  ಅವಿನಾಶ್ ಮತ್ತು  ಸಂತೋಷ್  ಎಂಬುವರನ್ನು ಬಂಧಿಸಲಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ದುಂಡನಹಳ್ಳಿಯ ಅವಿನಾಶ್. ಮಂಡ್ಯದ ಸ್ವರ್ಣಸಂದ್ರ  ಡಾವಣೆಯ ಸಂತೋಷ್ ಬಂಧನಕ್ಕೆ ಒಳಗಾಗಿದ್ದು ಮೈಸೂರಿನ ವಿಜಯ ನಾಲ್ಕನೇ ಹಂತದಲ್ಲಿ ಈ ಅಡ್ಡೆ ಇತ್ತು.

ಸಿಸಿಬಿ ಪೊಲೀಸರು ಹಾಗೂ ವಿಜಯನಗರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.