Mandya: ಸುಂದರ ಬಾಲಕಿಗೆ ಮುಳುವಾದ ಉದ್ದನೆಯ ಕೂದಲು: ಜಾಯಿಂಟ್ ವ್ಹೀಲ್‌ನಲ್ಲಿ ನಡೆಯಿತು ಘನಘೋರ ದುರಂತ
ಮಂಡ್ಯದಲ್ಲಿನ ಒಬ್ಬ ಬಾಲಕಿಗೆ ತನ್ನ ಉದ್ದನೆಯ ಕೂದಲುಗಳೇ ಜೀವನಕ್ಕೆ ಮುಳ್ಳಾಗಿರುವ ಭಯಾನಕ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಜಾಯಿಂಟ್ ವೀಲ್ ಗೆ ಬಾಲಕಿ ತಲೆಕೂದಲು ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ.
ಮಂಡ್ಯ (ಜ.29): ಮಹಿಳೆಗೆ ಉದ್ದವಾಗಿರುವ ಕೂದಲುಗಳೇ ಅವಳ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ, ಮಂಡ್ಯದಲ್ಲಿನ ಒಬ್ಬ ಬಾಲಕಿಗೆ ತನ್ನ ಉದ್ದನೆಯ ಕೂದಲುಗಳೇ ಜೀವನಕ್ಕೆ ಮುಳ್ಳಾಗಿರುವ ಭಯಾನಕ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.
ಸಕ್ಕರೆ ನಾಡು ಮಂಡ್ಯದಲ್ಲಿ ಭಯಾನಕ ಘಟನೆ ನಡೆದಿದೆ. ಜಾಯಿಂಟ್ ವೀಲ್ ಗೆ ಬಾಲಕಿ ತಲೆಕೂದಲು ಸಿಲುಕಿ ಗಂಭೀರ ಗಾಯಗೊಂಡಿದ್ದಾಳೆ. ಶ್ರೀರಂಗಪಟ್ಟಣದ ರಂಗನಾಥ ಮೈದಾನದಲ್ಲಿ ತಡರಾತ್ರಿ ಅವಘಡ ಸಂಭವಿಸಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ರಥಸಪ್ತಮಿ ಅಂಗವಾಗಿ ರಂಗನಾಥ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಜಾತ್ರೆಯಲ್ಲಿ ಜಾಯಿಂಟ್ ವೀಲ್ಹ್ ಗೇಟ್ ಹಾಕಲಾಗಿತ್ತು. ಜಾಯಿಂಟ್ ವ್ಹೀಲ್ ಆಡಲು ಬಂದಿದ್ದ ಬಾಲಕಿಯ ಉದ್ದನೆಯ ತಲೆ ಕೂದಲುಗಳು ಸಿಲುಕಿಕೊಂಡು ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
Mandya: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿ ಇಬ್ಬರು ಮಹಿಳೆಯರ ಸಾವು: ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ
ಜಾತ್ರೆಗೆ ಆಗಮಿಸಿದ್ದ ಬೆಂಗಳೂರಿನ ಶ್ರೀವಿದ್ಯಾ: ಗಂಭೀರ ಗಾಯಗೊಂಡ ಬಾಲಕಿಯನ್ನು ಬೆಂಗಳೂರಿನ ಶ್ರೀವಿದ್ಯಾ(14) ಎಂದು ಗುರುತಿಸಲಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣಕ್ಕೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ದೇವರ ದರ್ಶನ ಮುಗಿಸಿಕೊಂಡು ಜಾಯಿಂಟ್ ವ್ಹೀಲ್ ಆಡಲು ತೆರಳಿದ್ದಾಳೆ. ಈ ವೇಳೆ ವ್ಹೀಲ್‌ಗೆ ಬಾಲಕಿ ತಲೆಕೂದಲು ಸಿಕ್ಕಿಕೊಂಡಿದೆ. ಆಗ ಬಾಲಕಿ ಹಾಗೂ ಅವಳ ಪಕ್ಕದಲ್ಲಿ ಕುಳಿತುಕೊಂಡಿದ್ದ ಪೋಷಕರು ಕೂದಲನ್ನು ಬಿಡಿಸಿಕೊಳ್ಳಲು ಜೋರಾಗಿ ಎಳೆದಿದ್ದಾರೆ. ಆದರೆ, ಬಲಿಷ್ಠವಾಗಿರುವ ಜಾಯಿಂಟ್ ವ್ಹೀಲ್ ಜೋರಾಗಿ ತಿರುಗುವಾಗ ಬಾಲಕಿಯ ತಲೆಯ ಕೂದಲು ಇಡಿ ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದಿದೆ.
ಬಾಲಕಿಗೆ ಗಂಭೀರ ಗಾಯ: ತಲೆಯ ಕೂದಲು ಚರ್ಮದ ಸಮೇತವಾಗಿ ಕಿತ್ತುಕೊಂಡು ಬಂದ ಹಿನ್ನೆಲೆಯಲ್ಲಿ ಬಾಲಕಿ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗುತ್ತಿತ್ತು. ತಕ್ಷಣವೇ ಬಾಲಕಿಯನ್ನು ಶ್ರೀರಂಗಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಜಾಯಿಂಟ್ ವೀಲ್ ಕಾರ್ಮಿಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಪುರುಷರು, ಓರ್ವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Mandya Crime: ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಜನತೆ
ಉದ್ದ ಕೂದಲುಗಳೇ ಮುಳುವು: ಮನೆಯಲ್ಲಿ ಮಗಳಿಗೆ ಉದ್ದ ಕೂದಲುಗಳು ಇರಬೇಕು ಎಂದು ಬಹಳ ಕಷ್ಟಪಟ್ಟು ಕೂದಲನ್ನು ಪೋಷಣೆ ಮಾಡಲಾಗುತ್ತಿತ್ತು. ಎಲ್ಲರೂ ಕೂದಲುಗಳನ್ನು ನೋಡಿ ಸಂತಸ ವ್ಯಕ್ತಪಡಿಸಿ ಹೊಗಳುತ್ತಿದ್ದರು. ಜಾತ್ರೆಯ ಹಿನ್ನೆಲೆಯಲ್ಲಿ ದೇವರಿಗೆ ಬರುವಾಗ ತಲೆ ಸ್ನಾನ ಮಾಡಿಕೊಂಡು ಉದ್ದನೆಯ ಕೂದಲುಗಳನ್ನು ಬಿಟ್ಟುಕೊಂಡು ಬರಲಾಗಿತ್ತು. ಆದರೆ, ಈಗ ಮಗಳ ಸೌಂದರ್ಯವನ್ನು ಹೆಚ್ಚಿಸುತ್ತಿದ್ದ ಕೂದಲುಗಳೇ ಅವರ ಬಾಳಿಗೆ ಮುಳ್ಳಾಗಿ ಪರಿಣಮಿಸಿವೆ. ತಲೆಯ ಮೇಲಿನ ಚರ್ಮದ ಸಮೇತವಾಗಿ ಕೂದಲುಗಳು ಕಿತ್ತುಕೊಂಡು ಬಂದಿದ್ದು, ಭಾರಿ ರಕ್ತಸ್ರಾವ ಉಂಟಾಗಿ ಬಳಲುತ್ತಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.