Asianet Suvarna News Asianet Suvarna News

Mandya Crime: ತಾಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಜನತೆ

ಸರ್ಕಾರಿ ಕಚೇರಿಯಲ್ಲಿ ಹಾಡ ಹಗಲೇ ಝಳಪಿಸಿದ ಮಚ್ಚು, ಲಾಂಗು
ಜಮೀನು ವಿಚಾರದಲ್ಲಿ ಸೋಲಾಯಿತು ಎಂದು ಕುಡುಗೋಲಿನಿಂದ ಕೊಚ್ಚಿದ ಆರೋಪಿ
ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಕೃತ್ಯವನ್ನು ನಡೆಸಲಾಗಿದೆ

 

Mandya Crime Man murdered in madduru taluk office People shocked sat
Author
First Published Jan 24, 2023, 4:36 PM IST

ಮಂಡ್ಯ (ಜ.24): ಜಮೀನು ವಿಚಾರದ ವ್ಯಾಜ್ಯದಲ್ಲಿ ತನಗೆ ಸೋಲಾಯಿತು ಎಂದು ಕುಪಿತಗೊಂಡ ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಆರೋಪಿಯೊಬ್ಬನು ತನ್ನದೇ ಗ್ರಾಮದ ಚನ್ನರಾಜು ಎಂಬಾತನನ್ನು ಮದ್ದೂರಿನ ತಾಲೂಕು ಕಚೇರಿಯಲ್ಲಿ ಹಾಡ ಹಗಲೇ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಭಯಂಕರ ಘಟನೆ ನಡೆದಿದೆ. 

ಮಾರಣಾಂತಿಕ ಹಲ್ಲೆಗೆ ಒಳಗಾದವನನ್ನು ಚನ್ನರಾಜು ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ನಂದನ್‌ ಎಂದು ಪತ್ತೆ ಮಾಡಲಾಗಿದೆ. ಜಮೀನು ವಿಚಾರದ ವ್ಯಾಜ್ಯದಲ್ಲಿ ತನಗೆ ಸೋಲಾಗಿದ್ದು, ತನ್ನ ಎದುರಾಳಿ ಚನ್ನರಾಜು ಅವರಿಗೆ ಗೆಲವು ಸಿಕ್ಕಿತ್ತು. ಇದರಿಂದ ತೀವ್ರ ಹತಾಶಗೊಂಡ ನಂದನ್‌ ತನಗೆ ವ್ಯಾಜ್ಯದಲ್ಲಿ ಸೋಲು ಉಂಟಾದರೆ ಅಲ್ಲಿ ಕೊಲೆ ಮಾಡುವುದಕ್ಕೆ ನಿರ್ಧಾರ ಮಾಡಿಕೊಂಡೇ ಬಂದಿದ್ದನು. ಅದರಂತೆ, ಜಮೀನು ವ್ಯಾಜ್ಯದಲ್ಲಿ ಸೋಲಾಗಿದ್ದಕ್ಕೆ ಆಕ್ರೋಶಗೊಂಡ ನಂದನ್‌ ತನ್ನ ಎದುರಾಳಿ ಚನ್ನರಾಜು ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ನಂತರ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಬರೋಬ್ಬರಿ  40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಹಾಕಿದ್ದಾನೆ.

ಮಂಡ್ಯ: ಮನೆಯಲ್ಲಿದ್ದ ಒಂದು ಕೆಜಿ ಚಿನ್ನ ಕದ್ದು ಖದೀಮರು ಪರಾರಿ..!

ಆಸ್ಪತ್ರೆಗೆ ಸಾಗಿಸಿದ ಜನರು: : ಮದ್ದೂರಿನ ಸರ್ಕಾರಿ ತಾಲೂಕು ಕಚೇರಿಯಲ್ಲಿ ಹಾಡ ಹಗಲಿನಲ್ಲೇ ಇಂತಹ ಕೊಲೆ ಯತ್ನದ ಘಟನೆ ನಡೆದಿದ್ದು, ಕಚೇರಿಯ ಆವರಣವೆಲ್ಲ ರಕ್ತದ ಮಡುವುನಿಂದ ತುಂಬಿತ್ತು. ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ಎಲ್ಲ ದೃಶ್ಯಗಳು ಕಚೇರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಚ್ಚಿನಿಂದ ಏಟು ತಿಂದು ತೀವ್ರಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚನ್ನರಾಜು ಅವರನ್ನು ಕೂಡಲೇ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಜಮೀನು ವಿಚಾರಕ್ಕೆ ಸರ್ಕಾರಿ ಕಚೇರಿಯಲ್ಲಿ ಡೆಡ್ಲಿ ಅಟ್ಯಾಕ್‌ ಮಾಡಿರುವುದಕ್ಕೆ ಕಚೇರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸಾರ್ವಜನಿಕರಿಂದ ಧರ್ಮದೇಟು:
ಸರ್ಕಾರಿ ಕಚೇರಿಯಲ್ಲಿ ಕುಡುಗೋಲಿನಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ತಕ್ಷಣವೇ ದೃಶ್ಯವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ನಂತರ, ಅಲ್ಲಿಂದ ಆರೋಪಿ ಪರಾರಿ ಆಗುವ ವೇಳೆ ಸ್ಥಳೀಯರು ಆರೋಪಿ ನಂದನ್‌ನನ್ನು ಹಿಡಿದುಕೊಂಡಿದ್ದಾರೆ. ನಂತರ, ಹಲ್ಲೆ ಮಾಡಿದ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ನಂತರ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು? : 
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಯತೀಶ್ ಮಾಧ್ಯಮಗಳೊಂದಿಗೆ ಕೊಲೆ ಪ್ರಕರಣದ ಬಗ್ಗೆ ಮಾತನಾಡಿ, ಕೊಲೆ ಮಾಡಿದ ಆರೋಪಿ ಹಾಗೂ ಮೃತ ವ್ಯಕ್ತಿ ಇಬ್ಬರೂ ಮದ್ದೂರು ತಾಲೂಕಿನ ಮರಳಿಗ ಗ್ರಾಮದವರು. ಚನ್ನರಾಜು ಮನೆ ಎದುರಿನ ವ್ಯಕ್ತಿಯಿಂದ ಹಲ್ಲೆಯಾಗಿದೆ. ಆರೋಪಿ ನಂದನ್ ಮೇಲೆ ಈ ಹಿಂದೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಚನ್ನರಾಜು ಎಂಬುವವರು ನಂದನ್ ವಿರುದ್ಧ ದೂರು ಕೊಟ್ಟಿದ್ದರು. ಇವತ್ತು ಜಮೀನು ವಿವಾದ ಸಂಬಂಧ ತಹಶೀಲ್ದಾರ್ ಕಚೇರಿಗೆ ಬಂದಿದ್ದ ಚನ್ನರಾಜು. ಮೂರುವರೆ ಎಕರೆ ಜಮೀನನ್ನ ಪತ್ನಿ, ಮಗ ಹೆಸರಿಗೆ ಖಾತೆ ಮಾಡಿಸಲು ಆಗಮಿಸಿದ್ದರು. ಈ ವೇಳೆ ನಂದನ್ ತಕರಾರು ಅರ್ಜಿ ಹಾಕಿದ್ದನು.

ನನಗೆ ಚೀಪ್‌ ಪಬ್ಲಿಸಿಟಿ ಬೇಕಾಗಿಲ್ಲ: ಸುಮಲತಾ

ಆರೋಪಿಗೆ ಕಲ್ಲಿನಿಂದ ಹೊಡೆದ ಲಾಯರ್: ಚನ್ನರಾಜು ಮೇಲೆ ಹಲ್ಲೆ ಮಾಡುವುದಕ್ಕೆ ಮೊದಲೇ ಪ್ಲಾನ್ ಮಾಡಿದ್ದ ನಂದನ್ ಕುಡುಗೋಲು, ಖಾರದ ಪುಡಿ ತಂದಿದ್ದನು. ಏಕಾಏಕಿ ಕಚೇರಿ ಆವರಣದಲ್ಲೇ ಹಲ್ಲೆ ಮಾಡಿದ್ದಾನೆ. ನಂತರ ಆರೋಪಿ ಮೇಲೆ ಸಾರ್ವಜನಿಕರು ಕಲ್ಲು ತೂರಾಟ ಮಾಡಿದ್ದಾರೆ. ಈ ವೇಳೆ ಆರೋಪಿ ಕೈಲಿದ್ದ ಕುಡುಗೋಲು ಕೆಳಗೆ ಬೀಳುತ್ತದೆ. ಆ ಸಂಧರ್ಭದಲ್ಲಿ ಸಾರ್ವಜನಿಕರು ಆರೋಪಿಗೆ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚನ್ನರಾಜು ಅವರನ್ನ ಮಂಡ್ಯ ಮಿಮ್ಸ್ ಗೆ ದಾಖಲಿಸಲಾಗಿದೆ. ಆರೋಪಿ ನಂದನ್ ಗೂ ಸಣ್ಣಪುಟ್ಟ ಗಾಯವಾಗಿದೆ. ಆರೋಪಿಗೆ ಮದ್ದೂರು ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಗೆ ಕುಡುಗೋಲು ತಂದಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಕಚೇರಿಯ ಭದ್ರತೆ ಸಂಬಂಧ ಪರಿಶೀಲನೆ ಮಾಡಲಾಗುವುದು ಎಂದು ಮಂಡ್ಯ ಎಸ್ಪಿ ಎನ್.ಯತೀಶ್ ಹೇಳಿದ್ದಾರೆ.

Follow Us:
Download App:
  • android
  • ios