ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದ್ದು,ಈ ಬಗ್ಗೆ ಎಚ್ಚರ ಎಚ್‌ಸಿಜಿ ಭಾರತ್‌ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೊಲಾಜಿಯ ಹಿರಿಯ ವಿಕಿರಣ ಆಂಕೋಲಾಜಿಸ್ಟ್‌ ಡಾ.ವೈ.ಎಸ್‌. ಮಾಧವಿ  ಹೇಳಿಕೆ

 ಮೈಸೂರು (ನ.02):  ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್‌ (Breast Cancer) ಕಾಣಿಸಿಕೊಳ್ಳುತ್ತಿದ್ದು,ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಎಚ್‌ಸಿಜಿ ಭಾರತ್‌ ಆಸ್ಪತ್ರೆ (HCG Bharath Hospital) ಮತ್ತು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕೊಲಾಜಿಯ (Oncology) ಹಿರಿಯ ವಿಕಿರಣ ಆಂಕೋಲಾಜಿಸ್ಟ್‌ (Oncologist) ಡಾ.ವೈ.ಎಸ್‌. ಮಾಧವಿ ಹೇಳಿದರು.

ಸ್ತನ ಕ್ಯಾನ್ಸರ್‌ ಪೀಡಿತ ದೇಶಗಳ ಪೈಕಿ ಭಾರತ (India) ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ (ladies) ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ 20 ರಿಂದ 25 ವರ್ಷ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹೆಚ್ಚು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮುಂದಿನ ದಶಕಗಳಲ್ಲಿ ಸ್ತನ ಕ್ಯಾನ್ಸರ್‌ ರೋಗಿಗಳ (Patients) ಸಂಖ್ಯೆ ಹೆಚ್ಚಾಗುತ್ತದೆ ಎಂದು ಮೈಸೂರಿನಲ್ಲಿ ಮಾತನಾಡಿದ ಆಂಕೋಲಾಜಿಸ್ಟ್‌ (Oncologist) ಡಾ.ವೈ.ಎಸ್‌. ಮಾಧವಿ ತಿಳಿಸಿದರು.

ಸ್ತನ ಕ್ಯಾನ್ಸರ್ ಎಂಬ ಆರೋಗ್ಯದ ಶತ್ರುವಿನ ಬಗ್ಗೆ ಮಿಸ್ ಮಾಡದೇ ಈ ವಿಷ್ಯ ತಿಳ್ಕೊಳಿ...

ಹದಿಹರೆಯ (Teenage) ಮತ್ತು ಪ್ರೌಢಾವಸ್ಥೆಯಲ್ಲೇ ಉತ್ತಮ ಆರೋಗ್ಯಕರ (Good Health) ಆಹಾರ ಪದ್ಧತಿ (Food System) ಅನುಸರಿಸಬೇಕು. ಬಾಣಂತಿಯಾಗಿದ್ದಾಗ (MOther) ಮಕ್ಕಳಿಗೆ ಚೆನ್ನಾಗಿ ಹಾಲುಣಿಸಬೇಕು (Milk Feeding). ನಾವು ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ ಮತ್ತು ಹಣ್ಣಿನ (Vegetable And Friuts) ಪಾಲು ಹೆಚ್ಚಿರಬೇಕು. ಮದ್ಯಪಾನ (Drinking ), ಧೂಮಪಾನದಿಂದ (Smoking) ದೂರ ಇರಬೇಕು. ದೈನಂದಿನ ವ್ಯಾಯಾಮದ (Exercise) ಜೊತೆಗೆ ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸ್ತನದ ಮೇಲಿನ ಡಿಂಪಲ್ಸ್ ಸ್ತನ ಕ್ಯಾನ್ಸರಿನ ಸಂಕೇತವಾಗಿರಬಹುದು !

ಆಸ್ಪತ್ರೆ ವೈದ್ಯಕೀಯ ವಿಭಾಗದ ಅಧೀಕ್ಷ ಡಾ.ಎಂ.ಎಸ್‌. ವಿಶ್ವೇಶ್ವರ (MS Vishwsharaiah) ಮಾತನಾಡಿ, ಸ್ತನ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆ (Hospital) ವತಿಯಿಂದ ನಗರದಾದ್ಯಂತ ಪ್ರಮುಖ ಉದ್ಯಾನಗಳಲ್ಲಿ ಶಿಬಿರ, ಉಚಿತ ಸ್ಕ್ರೀನಿಂಗ್‌ ಪರೀಕ್ಷೆ ಸೇರಿದಂತೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಮ್ಯಾಮೊಗ್ರಫಿ (Mamography) ಪರೀಕ್ಷೆಯಲ್ಲಿಯೂ ರಿಯಾಯಿತಿ ಒದಗಿಸಲಾಗಿದೆ. ಅಲ್ಲದೆ ಒಡಿಪಿ (ODP) ಮತ್ತು ಕುಟುಂಬ ಯೋಜನಾ ಕಚೇರಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್‌ ಕುರಿತು ಉಪನ್ಯಾಸ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತೆ ಸ್ತನ ಕ್ಯಾನ್ಸರ್

ಕನ್ಸಲ್ಟೆಂಟ್‌ ಸರ್ಜಿಕಲ್‌ ಆಂಕೊಲಾಜಿಸ್‌ ಡಾ.ಎಂ. ವಿಜಯ್‌ಕುಮಾರ್‌ ಮಾತನಾಡಿ, ಸ್ತನ ಕ್ಯಾನ್ಸರ್‌ 3-4ನೇ ಹಂತ ತಲುಪಿದ ಮೇಲೆ ಚಿಕಿತ್ಸೆಗೆ ಬರುತ್ತಿರುವುದರಿಂದ ಕ್ಯಾನ್ಸರ್‌ ಬಾಧಿತರ ಸಂಖ್ಯೆ ಹೆಚ್ಚಿದೆ. 1-2ನೇ ಹಂತದಲ್ಲೇ ತಪಾಸಣೆ ಮತ್ತು ಚಿಕಿತ್ಸೆ (treatment) ಪಡೆದುಕೊಳ್ಳಬೇಕು. ಇದರಿಂದ ಬೇಗ ಗುಣಮುಖರಾಗಬಹುದು ಹಾಗೂ ಸ್ತನ ಕ್ಯಾನ್ಸರ್‌ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಆಗ್ಗಾಗೆ ಮಹಿಳೆಯರು (women) ತಪಾಸಣೆ ಒಳಗಾಗುತ್ತಿರಬೇಕು. ಈ ಮೊದಲು ಕ್ಯಾನ್ಸರ್‌ ಉಂಟಾದರೆ ಸ್ತನವನ್ನೆ ಸಂಪೂರ್ಣವಾಗಿ ತೆಗೆಯಬೇಕಿತ್ತು. ಈಗ ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಕ್ಯಾನ್ಸರ್‌ ಟೂಮರ್‌ (tumer) ಅನ್ನು ಮಾತ್ರ ಕತ್ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ಸಿಒಒ ನಿರ್ಮಲಾ ಕೃಷ್ಣ ಮೂರ್ತಿ ಇದ್ದರು.

  • ಈಗ 20 ರಿಂದ 25 ವರ್ಷ ವಯಸ್ಸಿನವರಲ್ಲಿಯೂ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ
  •  ಸ್ತನ ಕ್ಯಾನ್ಸರ್‌ ಪೀಡಿತ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ
  • ಯುವತಿಯರಲ್ಲಿಯೂ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದ್ದು,ಈ ಬಗ್ಗೆ ಎಚ್ಚರದಿಂದ ಇರಬೇಕು
  • ಹದಿಹರೆಯ ಮತ್ತು ಪ್ರೌಢಾವಸ್ಥೆಯಲ್ಲೇ ಉತ್ತಮ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಬೇಕು
  • ಬಾಣಂತಿಯಾಗಿದ್ದಾಗ ಮಕ್ಕಳಿಗೆ ಚೆನ್ನಾಗಿ ಹಾಲುಣಿಸಬೇಕು