ಹಸಿ, ಒಣ, ಸ್ಯಾನಿಟರಿ ತ್ಯಾಜ್ಯ ಸಂಗ್ರಹಕ್ಕೆ ಒಬ್ಬನೇ ಗುತ್ತಿಗೆದಾರ: ಪ್ರತ್ಯೇಕ ಟೆಂಡರ್‌ಗೆ ತಿಲಾಂಜಲಿ!
ಕೊನೆಗೂ ಮನೆ-ಮನೆಯಿಂದ ಪ್ರತ್ಯೇಕವಾಗಿ ಹಸಿ ಕಸ ಸಂಗ್ರಹ ಟೆಂಡರ್‌ಗೆ ತಿಲಾಂಜಲಿ ಹಾಡಲು ಮುಂದಾಗಿರುವ ಬಿಬಿಎಂಪಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಒಬ್ಬನೇ ಗುತ್ತಿಗೆದಾರನ ಮೂಲಕ ಸಂಗ್ರಹಿಸಲು ಟೆಂಡರ್ ಆಹ್ವಾನಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು(ಜು.09): ಕೊನೆಗೂ ಮನೆ-ಮನೆಯಿಂದ ಪ್ರತ್ಯೇಕವಾಗಿ ಹಸಿ ಕಸ ಸಂಗ್ರಹ ಟೆಂಡರ್‌ಗೆ ತಿಲಾಂಜಲಿ ಹಾಡಲು ಮುಂದಾಗಿರುವ ಬಿಬಿಎಂಪಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಒಬ್ಬನೇ ಗುತ್ತಿಗೆದಾರನ ಮೂಲಕ ಸಂಗ್ರಹಿಸಲು ಟೆಂಡರ್ ಆಹ್ವಾನಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಹಿಂದೆ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅವಧಿಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠ ನಿರ್ದೇಶನ ಹಾಗೂ ಕೇಂದ್ರ ಸರ್ಕಾರ ಘನತ್ಯಾಜ್ಯ ವಿಲೇವಾರಿ ನಿಯಮ-2016ರ ಪ್ರಕಾರ ಮನೆ-ಮನೆಯಿಂದ ಹಸಿ ತ್ಯಾಜ್ಯವನ್ನು ಗುತ್ತಿಗೆದಾರರ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡುವುದು. ಉಳಿದ ಒಣ ಕಸವನ್ನು ಸ್ವಯಂ ಸೇವಾ ಸಂಸ್ಥೆಗಳು, ಚಿಂದಿ ಆಯುವವರ ಮೂಲಕ ಯಾವುದೇ ವೆಚ್ಚವಿಲ್ಲದೇ ಸಂಗ್ರಹಿಸಿ ವಿಲೇವಾರಿ ಮಾಡಲು ತೀರ್ಮಾನಿಸಿ ಟೆಂಡರ್ ಸಹ ಆಹ್ವಾನಿಸಿತ್ತು. ಹಸಿ ಸಂಗ್ರಹ, ವಿಲೇವಾರಿಗೆ ಸುಮಾರು 430 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಹುತೇಕ ವಾರ್ಡ್ ಗುತ್ತಿಗೆದಾರರು ಅಂತಿಮಗೊಂಡಿದ್ದರು. 45 ವಾರ್ಡ್ ಕಾರ್ಯಾದೇಶ ನೀಡುವುದಷ್ಟೇ ಬಾಕಿ ಉಳಿದಿತ್ತು, ಆದರೆ, ಪಾಲಿಕೆಯಲ್ಲಿ ಅಧಿಕಾರ ಧ್ರುವೀಕರಣದಿಂದ ಮೈತ್ರಿ ಕೊನೆಗೆಯಾಗಿ ಬಿಜೆಪಿ ಪಕ್ಷ ಬಿಬಿಎಂಪಿಯ ಅಧಿಕಾರದ ಗದ್ದುಗೆ ಏರಿತ್ತು.
ಹಳೇ ಟೆಂಡರ್ ರದ್ದು:
ಬಿಜೆಪಿ ಅಧಿಕಾರಕ್ಕೆ ಬಂದ ಬಳಿ ಇದೀಗ ಮೈತ್ರಿ ಆಡಳಿತಾವಧಿಯಲ್ಲಿ ಆಹ್ವಾನಿಸಲಾದ ಪ್ರತ್ಯೇಕವಾಗಿ ಹಸಿ ತ್ಯಾಜ್ಯ ಸಂಗ್ರಹ ಟೆಂಡರ್‌ನಿಂದ ನಗರದಲ್ಲಿ ಮತ್ತೆ ಬ್ಲಾಕ್ ಸ್ಪಾಟ್ ಸಂಖ್ಯೆ ಹೆಚ್ಚಾಗಲಿವೆ. ನಗರದಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣಗೊಳ್ಳಲಿದೆ. ಹಾಗಾಗಿ, ವಾರ್ಡ್‌ಗೆ ಒಬ್ಬ ಗುತ್ತಿಗೆದಾರರನ್ನು ನೇಮಿಸಿ ಆ ಗುತ್ತಿಗೆದಾರರನ ಮೂಲಕವೇ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಮೈತ್ರಿ ಆಡಳಿತದಲ್ಲಿ ಆಹ್ವಾನಿಸಿದ ಟೆಂಡರ್ ರದ್ದು ಪಡಿಸಿ, ಹೊಸದಾಗಿ ಟೆಂಡರ್ ಆಹ್ವಾನಿಸುವುದಕ್ಕೆ ನಿರ್ಧರಿಸಿದೆ.
6 ಗಂಟೆ ಕಾದರೂ ಬಾರದ ಆಂಬುಲೆನ್ಸ್, ಬೆಂಗಳೂರ ದುಸ್ಥಿತಿಗೆ ಕೊನೆ ಯಾವಾಗ?
ಅದರಂತೆ ಬಿಬಿಎಂಪಿ ಘತ್ಯಾಜ್ಯ ವಿಭಾಗದ ಅಧಿಕಾರಿಗಳು 198 ವಾಡ್‌ಗೂ ಪ್ರತ್ಯೇಕ ಟೆಂಡರ್ ಆಹ್ವಾನಿಸುವುದಕ್ಕೆ ಬಿಬಿಎಂಪಿ ಆಯುಕ್ತರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಾರ್ಡ್‌ಗೆ ಎಷ್ಟುಆಟೋ ಮತ್ತು ಕಾಂಪ್ಯಾಕ್ಟರ್ ಬೇಕಾಗಲಿವೆ. ಎಷ್ಟುಹಸಿ, ಒಣ ಮತ್ತು ಇತರೆ ತ್ಯಾಜ್ಯ ಸಂಗ್ರಹವಾಗಲಿದೆ. ಟೆಂಡರ್ ಷರತ್ತು ರಚನೆ ಸೇರಿದಂತೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.
ವಿಲೇವಾರಿ ವೆಚ್ಚ .700 ಕೋಟಿಗೇರಿಕೆ?
ಹೊಸ ಟೆಂಡರ್‌ನಲ್ಲಿ ಒಬ್ಬನೇ ಗುತ್ತಿಗೆದಾರನ್ನು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆ ಪಡೆದರೂ ಈ ಹಿಂದೆ ಬಿಬಿಎಂಪಿ 198 ವಾರ್ಡ್‌ಗಳಿಗೆ ಆಹ್ವಾನಿಸಿದ ಟೆಂಡರ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಆಗಲಿದೆ. ಕಾರಣ ಈ ಹಿಂದಿನ ಟೆಂಡರ್‌ನಲ್ಲಿ ಹಸಿ ತ್ಯಾಜ್ಯ ಸಂಗ್ರಹಿಸುವುದಕ್ಕೆ ಮಾತ್ರ ಗುತ್ತಿಗೆದಾರನಿಗೆ ಪಾಲಿಕೆ ಹಣ ನೀಡುತ್ತಿತ್ತು. ಒಣ ಕಸವನ್ನು ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ), ಚಿಂದಿ ಆಯುವವರ ಸಂಗ್ರಹಿಸುವುದಾಗಿತ್ತು. ಹಾಗಾಗಿ, ಒಣ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಯಾವುದೇ ವೆಚ್ಚ ಮಾಡುವಂತೆ ಇರಲಿಲ್ಲ.
BBMP ಆಸ್ಪತ್ರೆ ಅಭಿವೃದ್ಧಿ: ಇನ್ಫೋಸಿಸ್ 30 ಕೋಟಿ ಅನುದಾನ
ಇದೀಗ ಹೊಸ ಟೆಂಡರ್‌ನಲ್ಲಿ ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೂ ಗುತ್ತಿಗೆದಾರರಿಗೆ ಹಣ ನೀಡಬೇಕಾಗಲಿದೆ. ಹಾಗಾಗಿ, ತ್ಯಾಜ್ಯ ವಿಲೇವಾರಿ ವೆಚ್ಚ ಸುಮಾರು ಶೇ.40 ರಷ್ಟುಅಂದರೆ 250 ಕೋಟಿ ರು.ನಷ್ಟುಹೆಚ್ಚಾಗಲಿದೆ. ಪಾಲಿಕೆಯ ಒಟ್ಟಾರೆ ತ್ಯಾಜ್ಯ ವಿಲೇವಾರಿ ವೆಚ್ಚ 430 ಕೋಟಿ ರು. ನಿಂದ 700 ಕೋಟಿ ರು. ವರೆಗೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪಾಲಿಕೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವಂತೆ ಹಸಿ, ಒಣ ತ್ಯಾಜ್ಯ ಸಂಗ್ರಹಿಸುವುದಕ್ಕೆ ವಾರ್ಡ್‌ಗೆ ಒಬ್ಬ ಗುತ್ತಿಗೆದಾರರ ನೇಮಿಸಲಾಗುತ್ತಿದೆ. ಟೆಂಡರ್ ಆಹ್ವಾನಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಒಂದು ವಾರದಲ್ಲಿ ಹೊಸ ಟೆಂಡರ್ ಆಹ್ವಾನಿಸಲಾಗುವುದು. ಈ ಹಿಂದೆ ಆಹ್ವಾನಿಸಿದ ಎಲ್ಲ ಟೆಂಡರ್ ರದ್ದುಪಡಿಸಲಾಗಿದೆ ಎಂದು ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.