RajaKaluve Encroachment: ಹೊಸ ವರ್ಷಕ್ಕೆ ಮತ್ತೆ ಜೆಸಿಬಿ ಆರ್ಭಟ, ಒತ್ತುವರಿ ಸರ್ವೆ ಕಾರ್ಯ ಮುಗಿಸಿದ ಕಂದಾಯ ಇಲಾಖೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು‌ ಮನೆ ಕಾಂಪ್ಲೆಕ್ಸ್ ನಿರ್ಮಾಣ ‌ಮಾಡಿಕೊಂಡಿದ್ದಾರೆ. ಇದೀಗ ಸರ್ವೆ ಕಾರ್ಯ ಮುಗಿದಿರೋದ್ರಿಂದ ರಾಜಕಾಲುವೆ ನುಂಗಣ್ಣರಿಗೆ ಟೆನ್ಷನ್ ಶುರುವಾಗಿದೆ. ಜನವರಿ ಮೊದಲೇ ವಾರದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

BBMP start RajaKaluve Encroachment  soon Revenue Department completed the survey work gow

ಬೆಂಗಳೂರು (ಡಿ.29): ಹೊಸ ವರ್ಷಕ್ಕೆ ಮತ್ತೆ ಜೆಸಿಬಿ ಆರ್ಭಟ ಶುರುವಾಗಲಿದ್ದು, ರಾಜಕಾಲುವೆ ಒತ್ತುವರಿದಾರರಿಗೆ ನಡುಕ ಶುರುವಾಗಲಿದೆ.  ಈಗಾಗಲೇ ಸರ್ವೆ ಕಾರ್ಯ ಮುಗಿಸಿರುವ ಕಂದಾಯ ಇಲಾಖೆಯು ಜನವರಿ ಮೊದಲೇ ವಾರದಲ್ಲಿ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿದೆ ಎನ್ನಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು‌ ಮನೆ ಕಾಂಪ್ಲೆಕ್ಸ್ ನಿರ್ಮಾಣ ‌ಮಾಡಿಕೊಂಡಿದ್ದಾರೆ. ಇದೀಗ ಸರ್ವೆ ಕಾರ್ಯ ಮುಗಿದಿರೋದ್ರಿಂದ ರಾಜಕಾಲುವೆ ನುಂಗಣ್ಣರಿಗೆ ಟೆನ್ಷನ್ ಶುರುವಾಗಿದೆ.

ಇಲ್ಲಿವರೆಗೆ ಸರ್ವೆ ನೆಪವೊಡ್ಡಿ ಒತ್ತುವರಿ ತೆರವು ಕಾರ್ಯಚರಣೆಯನ್ನ  ಮುಂದೂಡುತ್ತಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ಮತ್ತೆ ತೆರವು ಕಾರ್ಯಚರಣೆ ಮಾಡಲೇ ಬೇಕಾಗಿದೆ. ಜಂಟಿ ಸರ್ವೆ ಮುಗಿಸಿದ ಕಂದಾಯ ಇಲಾಖೆ. ಬೆಂಗಳೂರಿನ ಎಂಟು ವಲಯಗಳಲ್ಲಿ ಸರ್ವೆ ಕಾರ್ಯ ಪೂರ್ಣ‌ಮಾಡಿದೆ. ಕೋರ್ಟ್ ಸೂಚನೆ ಮೆರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಸರ್ವೆ ಕಾರ್ಯ ಪೂರ್ಣಗೊಳಿಸಿರುವುದಾಗಿ ನಗರ ಜಿಲ್ಲಾಧಿಕಾರಿ ‌ದಯಾನಂದ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ‌ ಮಾಹಿತಿ ಕೊಟ್ಟಿದ್ದಾರೆ.

 

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಮಾಡದ ತಹಸೀಲ್ದಾರ್‌ ಸಸ್ಪೆಂಡ್

ಇನ್ನೂ ಬೆಂಗಳೂರಿನ ಎಂಟು ವಲಯದಲ್ಲಿ ಶೇ.90 ರಷ್ಟು ಸರ್ವೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಕೋರ್ಟ್ ಮೊರೆ ಹೋದ ಕೆಲ ಪ್ರಕರಣಗಳ ಸರ್ವೆ ಕಾರ್ಯ ಬಾಕಿ ಇದ್ದು, ಕೋರ್ಟ್‌ ಮೂಲಕ ಉಳಿದ ಸರ್ವೆ ಕಾರ್ಯವನ್ನ ಪೂರ್ಣಗೊಳಿಸುತ್ತೇವೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಆಲ್ಲದೆ ಕಂದಾಯ ಇಲಾಖೆಯ ಅಯಾ ವಲಯದ ತಹಶಿಲ್ದಾರರು ಜನವರಿ ಮೊದಲೇ ವಾರದಲ್ಲಿ ಒತ್ತುವರಿದಾರರಿಗೆ ನೋಟಿಸ್ ಕೊಡಲಿದ್ದು, ಕಂದಾಯ ಇಲಾಖೆ ಜನವರಿ 1 ರಂದು ಬಿಬಿಎಂಪಿ ಗೆ ಸರ್ವೆ ವರದಿ ಸಲ್ಲಿಕೆ ಮಾಡಲಿದ್ದೇವೆ ನಗರ ಜಿಲ್ಲಾಧಿಕಾರಿ ದಯಾನಂದ ಹೇಳಿದ್ದಾರೆ.

ಬಿಬಿಎಂಪಿಗೆ ಇಡಿ ನೊಟೀಸ್: ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ

ಇನ್ನು ಇಷ್ಟು ದಿನ ಬಿಬಿಎಂಪಿ ಅಧಿಕಾರಿಗಳು ಸರ್ವೆ ಕಾರ್ಯ ನೆಪವೊಡ್ಡಿ ಸ್ಥಗಿತಗೊಂಡಿದ್ದ ಒತ್ತುವರಿ ಕಾರ್ಯಚರಣೆಯನ್ನ ಇದೀಗ ಮತ್ತೆ ಒತ್ತುವರಿ ತೆರವು ಪ್ರಾರಂಭಿಸಬೇಕಾಗಿದೆ. ಆಲ್ಲದೆ ಹೊಸ ವರ್ಷದ ಮೂಡ್ ನಲ್ಲಿದ್ದ ರಾಜಕಾಲುವೆ ಒತ್ತುವರಿದಾರರಿಗೆ ಬಿಬಿಎಂಪಿ ಶಾಕ್ ನೀಡಿದೆ.

Latest Videos
Follow Us:
Download App:
  • android
  • ios