ಬೆಂಗಳೂರು: ಬಿಬಿಎಂಪಿ ಅನುದಾನ ಕಾಮಗಾರಿ, ಮುಖ್ಯ ಎಂಜಿನಿಯರ್‌ರಿಂದಲೇ ಬಿಲ್ ಪಾವತಿ
ಈವರೆಗೆ ವಲಯ ಆಯುಕ್ತರ ಹಂತದಲ್ಲಿ ಬಿಲ್ಲು ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಇನ್ನು ಮುಂದೆ ವಲಯ ಮುಖ್ಯ ಅಭಿಯಂತರರ ಹಂತದಲ್ಲಿಯೇ ಬಿಲ್ಲು ಪಾವತಿಸುವುದು. ಅದಕ್ಕೆ ಅಗತ್ಯವಿರುವ ಐಎಫ್‌ಎಂಎಸ್ ತಂತ್ರಾಂಶದಲ್ಲಿ ಸಂಬಂಧಿಸಿದ ಬದಲಾವಣೆಗಳನ್ನು ಮಾಡಿಕೊಂಡು ಪಾವತಿ ಮಾಡುವಂತೆ ಸೂಚಿಸಿದ ಹಣಕಾಸು ವಿಭಾಗದ ವಿಶೇಷ ಆಯುಕ್ತರು

ಬೆಂಗಳೂರು(ಸೆ.20): ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಬಿಲ್ಲುಗಳನ್ನು ವಲಯಗಳ ಮುಖ್ಯ ಎಂಜಿನಿಯರ್ ಹಂತದಲ್ಲಿಯೇ ಪಾವತಿಸುವಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಆದೇಶಿಸಿದ್ದಾರೆ.
ಈವರೆಗೆ ವಲಯ ಆಯುಕ್ತರ ಹಂತದಲ್ಲಿ ಬಿಲ್ಲು ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆಯನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಇನ್ನು ಮುಂದೆ ವಲಯ ಮುಖ್ಯ ಅಭಿಯಂತರರ ಹಂತದಲ್ಲಿಯೇ ಬಿಲ್ಲು ಪಾವತಿಸುವುದು. ಅದಕ್ಕೆ ಅಗತ್ಯವಿರುವ ಐಎಫ್‌ಎಂಎಸ್ ತಂತ್ರಾಂಶದಲ್ಲಿ ಸಂಬಂಧಿಸಿದ ಬದಲಾವಣೆಗಳನ್ನು ಮಾಡಿಕೊಂಡು ಪಾವತಿ ಮಾಡುವಂತೆ ಸೂಚಿಸಲಾಗಿದೆ.
ಬೆಂಗ್ಳೂರಿನಲ್ಲಿವೆ ಬರೋಬ್ಬರಿ 2.8 ಲಕ್ಷ ಬೀದಿ ನಾಯಿಗಳು..!
ಬಿಲ್ಲು ಪಾವತಿ ಮಾಡುವ ಮುನ್ನ ವಲಯ ಕಾರ್ಯಪಾಲಕ ಅಭಿಯಂತರರು (ಪ್ರೀ ಆಡಿಟ್) ಕಾಮಗಾರಿಯ ಬಿಲ್ಲುಗಳನ್ನು ಚಾಲ್ತಿಯಲ್ಲಿರುವ ನಿಯಮಗಳಂತೆ ಪರಿಶೀಲಿಸಿ ಐಎಫ್‌ಎಂಎಸ್ ತಂತ್ರಾಂಶದಲ್ಲಿ ಸಂಬಂಧಿಸಿದ ವಲಯ ಮುಖ್ಯ ಅಭಿಯಂತರರಿಗೆ ಸಲ್ಲಿಸುವುದು.
ವಲಯ ಮುಖ್ಯ ಅಭಿಯಂತರರು ಬಿಲ್ಲು ಪಾವತಿ ಮಾಡುವ ಮುನ್ನ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ನಿರ್ವಹಣೆಯ ನೈಜತೆಯ ಬಗ್ಗೆ ಖಚಿತಪಡಿಸಿಕೊಂಡು ನಂತರ ಜೇಷ್ಟತೆ ಆಧಾರದ ಮೇಲೆ ಪಾವತಿ ಮಾಡುವುದು.
ನಿಯಮಾನುಸಾರ ನಿವ್ವಳ ಮೊತ್ತವನ್ನು ನೇರವಾಗಿ ಗುತ್ತಿಗೆದಾರರಿಗೆ ಹಾಗೂ ಶಾಸನಬದ್ಧ ಕಟಾವಣೆಗಳನ್ನು ಕಾಮಗಾರಿ ವಿಭಾಗಕ್ಕೆ ವರ್ಗಾಹಿಸುವುದು.
ಕಾಮಗಾರಿ ಬಗ್ಗೆ ಯಾವುದಾದರೂ ದೂರು ಹಾಗೂ ತನಿಖೆಗಳು ಇಲ್ಲಿದಿರುವ ಬಗ್ಗೆ ಮುಖ್ಯ ಅಭಿಯಂತರರು ಖಚಿತ ಪಡಿಸಿಕೊಳ್ಳುವುದು. ನಗದು ಪುಸಕ್ತಗಳ ನಿರ್ವಹಣೆ ಮತ್ತು ಲೆಕ್ಕ ಸಮನ್ವಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.