Land Encroachment: ಕೆಜಿಎಫ್‌ ಬಾಬು ಒತ್ತುವರಿ ಮಾಡಿದ್ದ ಜಾಗ ತೆರವಿಗೆ BBMP ಸಿದ್ಧತೆ

*    ಭೂಮಿ ವಶಕ್ಕೆ ಪಡೆಯಲು ಬಿಬಿಎಂಪಿ ವಿಶೇಷ ಆಯುಕ್ತ ಆದೇಶ
*    ಶ್ರೀನಿವಾಸಪುರದಲ್ಲಿ 1 ಎಕರೆ ಜಾಗ ಒತ್ತುವರಿ
*    ಕೆಜಿಎಫ್‌ ಬಾಬು, ಡಿಕೆಶಿ ವಿರುದ್ಧ ಎಸಿಬಿಗೆ ದೂರು
 

BBMP Preparing For Land Clearance of Encroachment of Land From From KGF Babu grg

ಬೆಂಗಳೂರು(ಡಿ.10):  ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸೂಫ್‌ ಷರೀಫ್‌(Yousuf Shariff) ವಿರುದ್ಧ ಭೂಮಿ ಅತಿಕ್ರಮಣ ಮಾಡಿರುವ ಸಂಬಂಧ ಬಿಜೆಪಿ(BJP) ಮುಖಂಡ ಎನ್‌ಆರ್‌ ರಮೇಶ್‌(NR Ramesh) ಆರೋಪ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಂಡಿದೆ.

ಬೆಂಗಳೂರು(Bengaluru) ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದ ಸರ್ವೆ ನಂ.15ರ ಒಟ್ಟು 11.01 ಎಕರೆ ವಿಸ್ತೀರ್ಣದಲ್ಲಿ ಪೂರ್ವ ಭಾಗದ 2.21 ಎಕರೆ ವಿಸ್ತೀರ್ಣದ ಸ್ವತ್ತನ್ನು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆಂದು ಬಿಬಿಎಂಪಿಗೆ(BBMP) ಹಸ್ತಾಂತರಿಸಲಾಗಿತ್ತು. ಈ ಸ್ವತ್ತನ್ನು ಯೂಸುಫ್‌ ಷರೀಫ್‌ ಅವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಎನ್‌.ಆರ್‌.ರಮೇಶ್‌ ಮುಖ್ಯಮಂತ್ರಿಯವರಿಗೆ(Chief Minister of Karnataka) ದೂರು ನೀಡಿದ್ದರು.

Government Land Encroachment: 'KGF ಬಾಬುವಿನಿಂದ 115 ಕೋಟಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ'

ಈ ಬೆನ್ನಲ್ಲೇ ಯೂಸೂಫ್‌ ಷರೀಫ್‌ ಅತಿಕ್ರಮಿಸಿರುವ ಭೂಮಿಯನ್ನು( Land Encroachment) ವಶಕ್ಕೆ ಪಡೆದು ಈ ಸ್ವತ್ತಿನಲ್ಲಿ ಪಾಲಿಕೆ ಆಸ್ತಿಯೆಂದು ನಮೂದಿಸಿ ಅತಿಕ್ರಮ ಪ್ರವೇಶ ನಿರ್ಬಂಧಿಸಿದೆ ಎಂದು ಸೂಚನ ಫಲಕ ಅಳವಡಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ(ಆಸ್ತಿಗಳು) ಆದೇಶಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿ ಶ್ರೀನಿವಾಸಪುರ ಗ್ರಾಮದ ಸರ್ವೇ ನಂಬರ್‌ 15ರ ಸುಮಾರು .115 ಕೋಟಿ ಮೌಲ್ಯದ 11.01 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗದ(Government Land) ಪೈಕಿ 7.20 ಎಕರೆ ಜಾಗವನ್ನು ಸಾರ್ವಜನಿಕ ಹರಾಜು(Auction) ಹೆಸರಿನಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. ಇನ್ನು 2.21 ಎಕರೆ ಜಾಗವನ್ನು ಜಿಲ್ಲಾಧಿಕಾರಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಉದ್ದೇಶಕ್ಕಾಗಿ 2014ರಲ್ಲಿ ಬಿಬಿಎಂಪಿಗೆ ಅಧಿಕೃತವಾಗಿ ಹಸ್ತಾಂತರ ಮಾಡಿದ್ದಾರೆ. ಉಳಿದ 1.01 ಎಕರೆ ಜಾಗವನ್ನು ಕೆಜಿಎಫ್‌ ಬಾಬು ಅಕ್ರಮ ಕಬಳಿಸಿ ಬೇಲಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಸಾರ್ವಜನಿಕ ಹರಾಜಿನಲ್ಲಿ ಈ 7.20 ಎಕರೆ ಜಾಗವನ್ನು ಮಾರಾಟ ಮಾಡಲು 2007ರ ಮೇನಲ್ಲಿ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಅಧಿಸೂಚನೆ ಹೊರಡಿಸಿದ್ದರು. ಈ ಜಾಗಕ್ಕೆ ಕನಿಷ್ಠ ಬೆಲೆ 7.50 ಕೋಟಿ ನಿಗದಿ ಪಡಿಸಲಾಗಿತ್ತು. ಈ ಹರಾಜಿನಲ್ಲಿ ನಾಲ್ವರು ಆಸಕ್ತರು ಪಾಲ್ಗೊಂಡಿದ್ದರು. ಈ ನಡುವೆ ಕೆಜಿಎಫ್‌ ಬಾಬು(KGF Babu) ಹಿಲ್‌ಲ್ಯಾಂಡ್‌ ಎಸ್ಟೇಟ್‌(Hillland Estate) ಹೆಸರಿನಲ್ಲಿ ತಾವು ಸಹ ಈ ಹರಾಜಿನಲ್ಲಿ ಪಾಲ್ಗೊಳ್ಳುವುದಾಗಿ 2007ರ ಜೂನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾನೂನು ಬಾಹಿರವಾಗಿ ಕೆಜಿಎಫ್‌ ಬಾಬು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.

ಕನಿಷ್ಠ 7.50 ಕೋಟಿ ಬದಲಾಗಿ ಕೆಜಿಎಫ್‌ ಬಾಬುಗೆ 6.20 ಕೋಟಿಗೆ ಆ ಜಾಗ ಮಾರಾಟ ಮಾಡಲಾಗಿತ್ತು. ನಿಯಮಾನುಸಾರ ಹರಾಜಿನಲ್ಲಿ ಭಾಗವಹಿಸಿದ್ದ ನಾಲ್ವರು ವ್ಯಕ್ತಿಗಳಿಗೆ ಹರಾಜಿನಲ್ಲಿ ಅವಕಾಶವನ್ನೇ ನೀಡಿಲ್ಲ. ಅಂದಿನ ಜಿಲ್ಲಾಧಿಕಾರಿ ಎಂ.ಎ.ಸಾದಿಕ್‌ ಹಾಗೂ ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್‌ ರಂಗನಾಥಯ್ಯ ಅವರು ಕೆಜಿಎಫ್‌ ಬಾಬು ಜತೆಗೆ ಶಾಮೀಲಾಗಿ ಕಾನೂನೂ ಬಾಹಿರವಾಗಿ ಸರ್ಕಾರಿ ಸ್ವತ್ತು ಕಬಳಿಸಲು ನೆರವಾಗಿದ್ದಾರೆ ಎಂದು ರಮೇಶ್‌ ದೂರಿದ್ದರು.

Council Election Karnataka: ಸಾವಿರಾರು ಕೋಟಿ ಒಡೆಯನಿಗೆ ಈಗ ಸಖತ್ ಟಫ್‌ ಫೈಟ್‌ : ಭದ್ರಕೋಟೆಯಲ್ಲಿ ಬಿಜೆಪಿ ಧ್ವಜ ?

ಕೆಜಿಎಫ್‌ ಬಾಬು, ಡಿಕೆಶಿ ವಿರುದ್ಧ ಎಸಿಬಿಗೆ ದೂರು

ವಿಧಾನ ಪರಿಷತ್‌ ಚುನಾವಣೆಗೆ ಬೆಂಗಳೂರು ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಯೂಸಫ್‌ ಶರೀಫ್‌ (ಕೆಜಿಎಫ್‌ ಬಾಬು) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ACB) ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ(Social Worker) ಆಲಂ ಪಾಷ ಎಸಿಬಿಗೆ ದೂರು ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರು. ನೀಡುವುದಾಗಿ ಯೂಸಫ್‌ ಘೋಷಣೆ ಮಾಡುವ ಮೂಲಕ ಮತದಾರರಿಗೆ(Voters) ಹಣದ ಆಮಿಷವೊಡ್ಡಿದ್ದಾರೆ. ಅಲ್ಲದೆ, ಚುನಾವಣೆಯಲ್ಲಿ(Election) ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರು. ಮತ್ತು 5 ಸಾವಿರ ರು., 10 ಸಾವಿರ ರು., 50 ಸಾವಿರ ರು. ಮತ್ತು ಒಂದು ಲಕ್ಷ ರು. ಜೀವವಿಮೆ(Life Insurance) ಲೆಕ್ಕದಲ್ಲಿ ತಲಾ 5 ಲಕ್ಷ ರು. ಹಣ ನೀಡುವುದಾಗಿ ಬಹಿರಂಗವಾಗಿ ಮತದಾರರಿಗೆ ಹೇಳಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ(Violation of Code of Conduct) ಎಂದು ಉಲ್ಲೇಖಿಸಲಾಗಿದೆ.
 

Latest Videos
Follow Us:
Download App:
  • android
  • ios