Council Election Karnataka: ಸಾವಿರಾರು ಕೋಟಿ ಒಡೆಯನಿಗೆ ಈಗ ಸಖತ್ ಟಫ್‌ ಫೈಟ್‌ : ಭದ್ರಕೋಟೆಯಲ್ಲಿ ಬಿಜೆಪಿ ಧ್ವಜ ?

  • ಪ್ರತಿಪಕ್ಷ ಕಾಂಗ್ರೆಸ್‌ನ ಹಿಡಿತದಲ್ಲಿರುವ ಬೆಂಗಳೂರು ನಗರ ಸ್ಥಳೀಯ ಸಂಸ್ಥೆ
  • ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಆಡಳಿತಾರೂಢ ಬಿಜೆಪಿ 
MLC Election BJP Tough Fight to Bengaluru Congress candidate KGF babu snr

 ಬೆಂಗಳೂರು (ಡಿ.05) : ಪ್ರತಿಪಕ್ಷ ಕಾಂಗ್ರೆಸ್‌ನ (Congress) ಹಿಡಿತದಲ್ಲಿರುವ ಬೆಂಗಳೂರು ನಗರ(Bengaluru City) ಸ್ಥಳೀಯ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಆಡಳಿತಾರೂಢ ಬಿಜೆಪಿ(BJP) ಅಭಿವೃದ್ಧಿ, ಸಂಘಟನೆಯ ಅಸ್ತ್ರವನ್ನಿಟ್ಟುಕೊಂಡು ರಾಜಕೀಯ (Politics) ತಂತ್ರಗಾರಿಕೆ ಮಾಡಿದೆ. ಕ್ಷೇತ್ರದಲ್ಲಿ ಜೆಡಿಎಸ್‌ (JDS) ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ (Congress) ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ.

ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇದು ಕಾಂಗ್ರೆಸ್‌ನ (Congress) ಭದ್ರಕೋಟೆ. ಒಂದೆರಡು ಬಾರಿ ಬಿಜೆಪಿ (BJP) ಪೈಪೋಟಿ ನೀಡಿದರೂ ಕ್ಷೇತ್ರವನ್ನು ‘ಕೈ’ ಮುಷ್ಟಿಯಿಂದ ವಶಕ್ಕೆ ಪಡೆದುಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಹಿಡಿತದಲ್ಲಿರುವ ಬೆಂಗಳೂರು (Bengaluru) ನಗರ ಸ್ಥಳೀಯ ಸಂಸ್ಥೆಗೆ ಲಗ್ಗೆ ಇಡಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಬಾರಿಯ ಚುನಾವಣೆಯು (Election) ಸಂಘಟನೆ, ಅಭಿವೃದ್ಧಿ, ಆರ್ಥಿಕ ಬಲದ ಮೇಲೆ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆಡಳಿತದಲ್ಲಿರುವ ಕಾರಣ ಬಿಜೆಪಿ(BJP), ಅಭಿವೃದ್ಧಿ ಮತ್ತು ಸಂಘಟನೆಯ ಮೇಲೆ ವಿಶ್ವಾಸವಿಟ್ಟುಕೊಂಡರೆ, ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಯ ಆರ್ಥಿಕ ಬಲ ಮತ್ತು ಮೂಲ ಮತಗಳ ಮೇಲೆ ನಂಬಿಕೆ ಇಟ್ಟಿಕೊಂಡು ಪ್ರಚಾರ ಮಾಡುತ್ತಿದೆ.

ನೇರ ಪೈಪೋಟಿ: ಬಿಜೆಪಿ (BJP) ಅಭ್ಯರ್ಥಿಯಾಗಿ ಎಚ್‌.ಎಸ್‌.ಗೋಪಿನಾಥ್‌ (HS Giponath), ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯೂಸಫ್‌ ಷರೀಫ್‌ (Yusuf Sharig - KGF babu ) ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ(Shinappa) ಕಣದಲ್ಲಿದ್ದಾರೆ. ಆದರೆ, ಗೋಪಿನಾಥ್‌ ಮತ್ತು ಯೂಸಫ್‌ ಷರೀಫ್‌ ನಡುವೆ ನೇರ ಹಣಾಹಣಿ ಇದೆ. ಗೋಪಿನಾಥ್‌ ಅವರು ಈ ಹಿಂದೆ ಚುನಾವಣಾ ಕಣಕ್ಕಿಳಿದಿದ್ದು, ಕೆಲವೇ ಮತಗಳ ಅಂತರಲ್ಲಿ ಸೋಲನುಭವಿಸಿದರು. ಬಿಇ (ಸಿವಿಲ್‌ ಎಂಜಿನಿಯರ್‌) ಪದವೀಧರ ಆಗಿರುವ ಗೋಪಿನಾಥ್‌ ಅವರು ಬಿಜೆಪಿಯಲ್ಲಿ (BJP ) ಹಲವು ಹುದ್ದೆ ನಿರ್ವಹಿಸಿದ್ದಾರೆ. ಸಂಘಟನಾತ್ಮಕ ಕಾರ್ಯದಲ್ಲಿ ತೊಡಗಿರುವುದರಿಂದ ಸಂಘಟಿತವಾಗಿ ಪಕ್ಷದ ಮತ ಪಡೆವ ಚಾಣಕ್ಯತೆ ಇದೆ. ಅಲ್ಲದೆ, ಪಕ್ಷವೇ ಆಡಳಿತದಲ್ಲಿರುವ ಕಾರಣ ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳುತ್ತಿದ್ದಾರೆ.

ಇನ್ನು, ಕಾಂಗ್ರೆಸ್‌ನ (congreaa) ಯೂಸಫ್‌ ಷರೀಫ್‌ ರಾಜಕೀಯದಲ್ಲಿ (Politics) ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. 1743 ಕೋಟಿ ರು. ಆಸ್ತಿಯ ಒಡೆಯನಾಗಿರುವುದು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿದೆ. ಅವರ ವಿರುದ್ಧದ ಹಳೆಯ ಪ್ರಕರಣವೊಂದನ್ನು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ (ST Somashekar) ಕೆದಕಿದ್ದರಿಂದ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ. 2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು (Dodda Basavaraju)  ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ (M narayana swamy) ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಕಾಂಗ್ರೆಸ್‌ ಯೂಸಫ್‌ಗೆ ಟಿಕೆಟ್‌ ನೀಡಿದೆ. ಬಿಜೆಪಿಯ (BJP) ಮತದಾರರು ಹೆಚ್ಚಿದ್ದರೂ ಕಾಂಗ್ರೆಸ್‌ಗೆ ಗೆಲ್ಲುವ ಆತ್ಮ ವಿಶ್ವಾಸ ಇದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ - BBMP), ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ (ZP) ಸದಸ್ಯರ ಮತಗಳು ಇಲ್ಲದ ಕಾರಣ ಗ್ರಾಮ ಪಂಚಾಯಿತಿ ( Grama panchayat) ಮತ್ತು ಪಟ್ಟಣ್ಣ ಪಂಚಾಯಿತಿ ಸದಸ್ಯರ ಮತಗಳೇ ಅಭ್ಯರ್ಥಿಗಳ ಹಣೆ ಬರಹ ಬರೆಯಲಿವೆ.

ಮತದಾರರ ವಿವರ :  ಒಟ್ಟು - 2062

ಪುರುಷ - 995

ಮಹಿಳೆ - 1077

2015ರ ಚುನಾವಣೆ ಫಲಿತಾಂಶ

ಎಂ. ನಾರಾಯಣ ಸ್ವಾಮಿ (ಕಾಂಗ್ರೆಸ್‌) - 1384

ದೊಡ್ಡ ಬಸವರಾಜು (ಬಿಜೆಪಿ) - 1302

Latest Videos
Follow Us:
Download App:
  • android
  • ios