Asianet Suvarna News Asianet Suvarna News

ನಿಯಮ ಮೀರಿ 680 ಕೋಟಿ ಪಾವತಿ: ಬಿಬಿಎಂಪಿ ಅಧಿಕಾರಿ ಸಸ್ಪೆಂಡ್‌

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿಯಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ| 64 ಪುಟದ ಪತ್ರ ಬರೆದಿದ್ದ ಆಯುಕ್ತ| ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಡಾ. ಆರ್‌.ಗೋವಿಂದ ರಾಜ್‌ ಸೇವೆಯಿಂದ ಅಮಾನತು| 680 ಕೋಟಿ ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ| 

BBMP Officer Dr R Govindraj Suspended grg
Author
Bengaluru, First Published Oct 19, 2020, 7:23 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.19):  ಜ್ಯೇಷ್ಠತೆ ನಿಯಮ ಉಲ್ಲಂಘಿಸಿ ಗುತ್ತಿಗೆದಾರರಿಗೆ ಸುಮಾರು 680 ಕೋಟಿ ಬಿಲ್‌ ಪಾವತಿ ಮಾಡಿದ್ದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಡಾ. ಆರ್‌.ಗೋವಿಂದ ರಾಜ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಗುತ್ತಿಗೆದಾರರಿಗೆ ಹಣ ಬಿಡುಗಡೆ ಜೇಷ್ಠತೆ ನಿಯಮ ಅನುಸರಿಸಬೇಕು. ಆದರೆ, ಗೋವಿಂದರಾಜ್‌ ಈ ನಿಯಮ ಉಲ್ಲಂಘಿಸಿರುವ ದೂರುಗಳು ಕೇಳಿ ಬಂದಿತ್ತು. ಹೀಗಾಗಿ ಅ.2ರಂದು ಏಕಾಏಕಿ ಮುಖ್ಯ ಲೆಕ್ಕಾಧಿಕಾರಿ ಕಚೇರಿ ಬೀಗ ಮುದ್ರೆ (ಸೀಲ್‌) ಹಾಕಿ ಗೋವಿಂದರಾಜ್‌ ಅವರನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡಿ, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಗೆ ವಾಪಾಸು ಕಳುಹಿಸಲಾಗಿತ್ತು ಮತ್ತು ತನಿಖೆಗೆ ಆದೇಶಿಸಲಾಗಿತ್ತು.

ಅದರಂತೆ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಇರುವ ಎಲ್ಲ ಕಡತಗಳನ್ನು ಜಪ್ತಿ ಮಾಡಿ ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬರೋಬ್ಬರಿ 680 ಕೋಟಿಯನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸರ್ಕಾರದ ಆರ್ಥಿಕ ಇಲಾಖೆಗೆ ಬರೋಬ್ಬರಿ 64 ಪುಟಗಳ ಪತ್ರ ಬರೆದು ಗೋವಿಂದ ರಾಜ್‌ ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಮತ್ತು ಸೇವೆಯಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು.

ಬಿಬಿಎಂಪಿ ಒಡೆತನದ 6828 ಆಸ್ತಿಗಳ ಸರ್ವೇ ಮಾಡಿ ಸಂರಕ್ಷಿಸಿ: ಗೌರವ್‌

ಬಿಬಿಎಂಪಿ ಆಯುಕ್ತರು ಪತ್ರದ ಆಧಾರದ ಮೇಲೆ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಶಶಿಧರ್‌ ಅವರು ಡಾ. ಆರ್‌.ಗೋವಿಂದ ರಾಜ್‌ ಅವರನ್ನು ಅಮಾತನು ಮಾಡಿ ಆದೇಶಿಸಿದೆ. ಅಲ್ಲದೇ ಇಲಾಖಾ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ನ್ಯೂನ್ಯತೆಗಳು

1.ರಸ್ತೆಗಳ ವಾರ್ಷಿಕ ನಿರ್ವಹಣೆ ಎಸ್ಕೊ್ರೕ ಖಾತೆ ಜೇಷ್ಠತೆ ಉಲ್ಲಂಘಿಸಿ 21.38 ಕೋಟಿ ಬಿಡುಗಡೆ
2.ಬಿಬಿಎಂಪಿಯ ಕಾಮಗಾರಿಗಳಿಗೆ ರಾಜ್ಯ ಹಣಕಾಸು ಆಯೋಗದ ಅನುದಾನದಿಂದ 133 ಕೋಟಿ ಬಿಡುಗಡೆ.
3.ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಸರ್ಕಾರದ ವಿಶೇಷ ಮೂಲಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯ 12.26 ಕೋಟಿ ಬಿಡುಗಡೆ.
4.ಆಫ್‌ ಲೈನ್‌ನಲ್ಲಿ ಕಾನೂನು ಬಾಹಿರವಾಗಿ 87.98 ಕೋಟಿ ಬಿಡುಗಡೆ.
5.ಜಿಎಸ್‌ಟಿ ಬಗ್ಗೆ ನೀಡಿದ ತಪ್ಪು ಅಭಿಪ್ರಾಯದಿಂದ ಬಿಬಿಎಂಪಿಗೆ 4.39 ಕೋಟಿ ನಷ್ಟ.
6.14 ಹಣಕಾಸು ಆಯೋಗದ 421 ಕೋಟಿ ಅನುದಾನವನ್ನು ತಾತ್ಕಾಲಿಕ ಮಾರ್ಗಪಲ್ಲಟ.

ಬೇರೆ ಸಿಬ್ಬಂದಿ ನಿಯೋಜನೆ

ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಮುಖ್ಯ ಲೆಕ್ಕಾಧಿಕಾರಿಯೇ ಈ ರೀತಿ ನಿಯಮ ಉಲ್ಲಂಘಿಸಿ ಹಣ ಬಿಡುಗಡೆ ಮಾಡಿರುವುದು ಕಂಡು ಬಂದಿದೆ. ಮುಂದಿನ ದಿನದಲ್ಲಿ ಇಡೀ ಕಚೇರಿ ಅಧಿಕಾರಿ ಸಿಬ್ಬಂದಿಯನ್ನು ಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಿ ಬೇರೆ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.
 

Follow Us:
Download App:
  • android
  • ios