ಧಾರವಾಡ(ಅ.16): ರಾಜ್ಯದಲ್ಲಿ ಇತ್ತೀಚೆಗೆ ಅತ್ಯಾಚಾರದ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಅತ್ಯಾಚಾರಿಗಳ ಜನನಾಂಗ ಕತ್ತರಿಸುವ ಕಾನೂನು ಜಾರಿ ಮಾಡುವಂತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಬಸವ ಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ ಆಗ್ರಹಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ, ಅತ್ಯಾಚಾರ ನಡೆದ ನಂತರ ಆರೋಪಿಗಳನ್ನು ಬಂಧಿಸುವುದು, ಅವರಿಗೆ ಜಾಮೀನು ನೀಡಿ ಮತ್ತೆ ಅವರು ಹೊರಗೆ ಬರುವ ಪ್ರಶ್ನೆಯೇ ಬೇಡ. ಅವರು ಮಾಡಿದ ತಪ್ಪಿಗಾಗಿ ಅವರ ಜನನಾಂಗ ಕತ್ತರಿಸುವ ಕಾನೂನು ಜಾರಿ ಮಾಡಿದರೆ ಅತ್ಯಾಚಾರದಂತಹ ಪ್ರಕರಣಗಳು ತಗ್ಗುತ್ತವೆ ಎಂದರು.

ಕೋವಿಡ್‌ ನಿಯಮಗಳೇ ಬಾಗಿಲು ತೆರೆಯಲು ಅಡ್ಡಿ: ಧಾರವಾಡದಲ್ಲಿ ಚಿತ್ರಮಂದಿರ ಓಪನ್‌ ಇಲ್ಲ..!

ಹಾಗೆಯೇ, ಹೆಣ್ಣುಮಕ್ಕಳು ಸಹ ಉಡುಗೆ- ತೊಡುಗೆಯಲ್ಲಿ ಸಂಪ್ರದಾಯ ಮುರಿಯಬಾರದು. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ತಲೆ ಮೇಲೆ ಸೆರಗು ಹೊತ್ತುಕೊಂಡು ಯುದ್ಧ ಮಾಡಿದ್ದಾರೆ. ಆದರೆ, ನಮ್ಮ ಯುವತಿಯರು ಹೊಸ ವರ್ಷ ಬಂದರೆ ಸಾಕು ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ತುಂಡು ಬಟ್ಟೆ ತೊಟ್ಟು ಕುಣಿಯುತ್ತಾರೆ. ಇದು ತಪ್ಪು. ಉಡುಗೆ- ತೊಡುಗೆಯಲ್ಲಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.