Search results - 120 Results
 • Dharwad

  Dharwad21, Jan 2019, 8:37 AM IST

  ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮೈಕ್‌, ಮೇಜು ಕಿತ್ತೆಸೆದು ಗಲಾಟೆ

  ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಈ ಬಾರಿ ವಿಷಾದಕರ ಘಟನೆ ನಡೆದು ಹೋಗಿದೆ. ಭಾನುವಾರ ಸಂಜೆ ಸಮಾರೋಪ ಸಮಾರಂಭ ವೇದಿಕೆಗೆ ನುಗ್ಗಿದ ನಾಲ್ಕೈದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೈಕ್‌, ಪೋಡಿಯಂ ಎಸೆದು ಕುರ್ಚಿಯಿಂದ ಬ್ಯಾನರ್‌ ಸಹ ಹರಿದು ಹಾಕಿರುವ ಘಟನೆ ನಡೆದಿದೆ.

 • fight

  state20, Jan 2019, 12:32 PM IST

  ಸಾಹಿತ್ಯ ಸಂಭ್ರಮದಲ್ಲಿ ‘ರಾಷ್ಟ್ರೀಯತೆ’ ಜಟಾಪಟಿ!

  ಸಾಹಿತ್ಯ ಸಂಭ್ರಮದಲ್ಲಿ ‘ರಾಷ್ಟ್ರೀಯತೆ’ ಜಟಾಪಟಿ| ರಾಷ್ಟ್ರೀಯತೆಯಿಂದ ಸಾವು-ನೋವು: ಚಿಂತಕ ಶಿವ| ಸಭಿಕರ ಆಕ್ಷೇಪ, ವಾಗ್ವಾದ

 • Marati Writer Laxman Gaikwad

  WEB SPECIAL18, Jan 2019, 4:47 PM IST

  ಹಂದಿ ಮೂತ್ರವನ್ನೇಕೆ ಹಿಂದು ಸೇವಿಸೋಲ್ಲ?: ಧಾರವಾಡದ ಪ್ರತಿಧ್ವನಿ

  ಧಾರವಾಡದಲ್ಲಿ ಸಂಕ್ರಾಂತಿ ವೇಳೆ ಪ್ರತಿವರ್ಷ ನಡೆಯುವ ಸಾಹಿತ್ಯ ಸಂಭ್ರಮಕ್ಕೆ ಇಂದು ಚಾಲನೆ ಸಿಕ್ಕಿದೆ. ವಿವಿಧ ವಿಚಾರಗಳ ಮೇಲೆ ಚರ್ಚೆ, ಗೋಷ್ಠಿಗಳು ನಡೆಯುತ್ತಿದ್ದು, ಈ ಸಂಭ್ರಮದ ಪ್ರತಿಧ್ವನಿ ಎಂಬಂತೆ ಮಹಾರಾಷ್ಟ್ರದ ಲೇಖಕರೊಬ್ಬರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

 • Baraguru Ramachandrappa

  WEB SPECIAL18, Jan 2019, 2:13 PM IST

  ಇದು ವಿವೇಕಾನಂದರ ಕಾಲವಲ್ಲ, ವಿವಾದಾನಂದರ ಕಾಲ - ಧಾರವಾಡದಲ್ಲಿ ಬರಗೂರು

  ಅಖಿಲ ಭಾರತ ಸಮ್ಮೇಳನ 61 ವರ್ಷಗಳ ನಂತರ ಧಾರವಾಡದಲ್ಲಿ ಯಶಸ್ವಿಯಾಗಿ ಮುಗಿದು ಇನ್ನೂ 10 ದಿನಗಳಾಗಿಲ್ಲ. ಇದೀಗ ಸಾಹಿತ್ಯದ ತವರೂರು ಧಾರವಾಡ ಮತ್ತೊಂದು ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಮೂರು ದಿನಗಳ ಸಂಭ್ರಮ ಉದ್ಘಾಟನೆಯಾಗಿದೆ.

 • mb Patil

  NEWS14, Jan 2019, 6:11 PM IST

  ಎಂಬಿಪಿಗೆ ದೊಡ್ಡ ಸಹಾಯ ಮಾಡಿದ್ದ ಬಿಜೆಪಿ ನಾಯಕ ಯಾರು? ಶಾಮನೂರು ರಹಸ್ಯ

  ಕಾಂಗ್ರೆಸ್‌ನ ಇಬ್ಬರು ನಾಯಕರ ನಡುವೆ ಕಿತ್ತಾಟ ಮುಂದುವರಿದಿದೆ. ಶಾಮನೂರು ಶಿವಶಂಕರಪ್ಪ ಮತ್ತು ಗೃಹ ಸಚಿವ ಎಂಬಿ ಪಾಟೀಲ್ ಒಬ್ಬರ ಮೇಲೆ ಒಬ್ಬರು ಹೇಳಿಕೆ ನೀಡುತ್ತಿದ್ದಾರೆ.

 • Vasudendra

  WEB SPECIAL13, Jan 2019, 1:14 PM IST

  ಮಕ್ಕಳಿಗೆ ಉಚಿತ ಪುಸ್ತಕ: ಸಾಹಿತ್ಯ ಸಮ್ಮೇಳನದಲ್ಲಿ ವಸುದೇಂದ್ರರ ಕೌತುಕ!

  ಸಮ್ಮೇಳನವು ಮಾನಸಿಕ ಸಂತೋಷವನ್ನು ನೀಡಿದರೂ ದೈಹಿಕವಾಗಿ ಜರ್ಜರಿತಗೊಳಿಸುತ್ತದೆ. ಕಳೆದ ಹಲವು ವರ್ಷಗಳಿಂದ ಪುಸ್ತಕದ ಮಳಿಗೆಗಳು ಗುಣಮಟ್ಟದಲ್ಲಿ ಪ್ರಗತಿ ಹೊಂದುತ್ತಾ ಬಂದಿದ್ದವು. ಶ್ರವಣಬೆಳಗೊಳ, ರಾಯಚೂರು, ಮೈಸೂರು ? ಎಲ್ಲಾ ಕಡೆಯೂ ಸಾಕಷ್ಟುಉತ್ತಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. ಧಾರವಾಡದವರು ಮಾತ್ರ ಹತ್ತು ವರ್ಷದ ಹಿಂದಿನ ಅಧೋಗತಿಗೆ ಅದನ್ನು ತೆಗೆದುಕೊಂಡು ಹೋದರು. ಪೂರ್ಣಕುಂಭ ಮೆರವಣಿಗೆ ಕಾಡಿದಷ್ಟುಈ ಅವ್ಯವಸ್ಥೆ ಸಾಹಿತಿಗಳನ್ನು ಕಾಡಲಿಲ್ಲ. ಪೂರ್ಣಕುಂಭ ವಿರೋಧಿಸಿ ಕವಿತೆಗಳನ್ನು ಹಲವರು ಓದಿದರೂ, ಅವ್ಯವಸ್ಥೆಯನ್ನು ಖಂಡಿಸಿ ಯಾರೂ ಕವಿತೆ ಓದಿದ್ದು ಕಾಣಲಿಲ್ಲ.

 • Swamiji

  NEWS11, Jan 2019, 5:55 PM IST

  ಮುರುಘಾ ಶ್ರೀ ಫೇಸ್‌ಬುಕ್‌ನಲ್ಲಿ ಮಹಿಳೆ..ಹ್ಯಾಕ್ ಮಾಡಿದ ಕಿರಾತಕರು!

  ಸೋಶಿಯಲ್ ಮೀಡಿಯಾ ಖಾತೆಗಳು ಅದು ಯಾವ್ಯಾವುದೋ ಕಾರಣಕ್ಕೆ ಹ್ಯಾಕ್ ಆಗಿಬುಡುತ್ತವೆ. ಕೆಲವೊಮ್ಮೆ ಗೊಂದಲಗಳನ್ನು ಸೃಷ್ಟಿ ಮಾಡಿಬಿಡಬಹುದು. ಹಾಗೆಯೇ ಇಲ್ಲಿ ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿಗಳ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದ್ದು ಮಹಿಳೆಯೊಬ್ಬರ ಚಿತ್ರ  ಪೋಸ್ಟ್ ಮಾಡಲಾಗಿದೆ. ಭಕ್ತರು ಅನ್ಯತಾ ಭಾವಿಸಬಾರದು..ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ಮಠ ತಿಳಿಸಿದೆ.

 • Railway Crossing

  Dharwad11, Jan 2019, 9:35 AM IST

  ರೇಲ್ವೆ ಗೇಟ್‌​ನಲ್ಲಿ ತಪ್ಪಿದ ಭಾರೀ ದುರಂತ : 40 ಮಂದಿ ಪ್ರಾಣ ಉಳಿಸಿದ ಚಾಲಕ

  ಸಾರಿಗೆ ಸಂಸ್ಥೆಯ ಬಸ್‌ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಗುರು​ವಾರ ಇಲ್ಲಿನ ಕರ್ನಾ​ಟಕ ವಿಶ್ವ​ವಿ​ದ್ಯಾ​ಲ​ಯದ ಬಳಿಯ ಶ್ರೀನ​ಗರ ರೇಲ್ವೆ ಗೇಟ್‌​ನಲ್ಲಿ ಭಾರೀ ರೈಲು ದುರಂತ​ವೊಂದು ತಪ್ಪಿ​ದೆ.

 • ಸಮ್ಮೇಳನಕ್ಕೆ ಸಿಂಗಾರಗೊಂಡ ನಗರಿ

  NEWS7, Jan 2019, 3:58 PM IST

  ಧಾರವಾಡಕ್ಕೆ ಹೋದಿ ಏನೇನ್ ತಂದಿ?

  84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಅನೇಕ ಚರ್ಚೆ, ಸಂವಾದ, ಸುದ್ದಿಗೋಷ್ಟಿಗಳು ನಡೆದವು. ಕಲಾಭಿಮಾನಿಗಳಿಗೆ. ಸಾಹಿತ್ಯಾಸಕ್ತರಿಗೆ ಮೂರು ದಿನ ಅರ್ಥಪೂರ್ಣವಾಗಿತ್ತು. ಮೂರನೇ ದಿನದ ಕಾರ್ಯಕ್ರಮದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದವು. ಅದರ ವಿವರ ಇಲ್ಲಿದೆ ನೋಡಿ.  

 • congress

  NEWS7, Jan 2019, 3:57 PM IST

  ಕೈ ಕೊಟ್ಟ ಪಕ್ಷೇತರ : ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

  ಅಧಿಕಾರ ಗದ್ದುಗೆ ಏರಲು ಬೆಂಬಲ ನೀಡಿದ್ದ ಪಕ್ಷೇತರ ಮುಖಂಡ ಇದೀಗ ಕೈ ಕೊಟ್ಟಿದ್ದು ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಮುಂದಾಗಿದ್ದು, ಧಾರವಾಡ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯಕ್ಕೆ ಕಾಂಗ್ರೆಸ್ ಸದಸ್ಯರು ಮುಂದಾಗಿದ್ದಾರೆ. 

 • Kambar- Dharwad

  NEWS7, Jan 2019, 12:48 PM IST

  ನಾನು ಎಡವೋ, ಬಲವೋ ನನಗೇ ಗೊತ್ತಿಲ್ಲ: ಕಂಬಾರರು

  ‘ನಾನು ಎಡವೋ ಅಥವಾ ಬಲವೋ ಎಂದು ಈಗಲೂ ನನಗೆ ಗೊತ್ತಾಗಿಲ್ಲ. ನನಗೆ ಎರಡು ಕೈಗಳು ಇವೆಯಾದ್ದರಿಂದ ಎಡವೂ ಹೌದು. ಬಲನೂ ಹೌದು!’ ಸಾಹಿತ್ಯ ವಲಯದ ಎಡ-ಬಲಗಳ ಬಹು ಚರ್ಚೆಗಳ ಪ್ರಸ್ತುತ ದಿನಗಳಲ್ಲಿ ತಮ್ಮ ನಿಲುವಿನ ಪ್ರಶ್ನೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರರು ಉತ್ತರಿಸಿದ್ದು ಹೀಗೆ.

 • Dharwad- CM

  NEWS7, Jan 2019, 11:25 AM IST

  ಸಮ್ಮೇಳನದಿಂದ ರಾಜಕಾರಣಿಗಳನ್ನು ದೂರವಿಡಿ!

  ಎಲ್ಲ ರೀತಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇನ್ನುಂದೆ ರಾಜಕಾರಣಿಗಳಿಗೆ ಆಹ್ವಾನ ಬೇಡ. ಅವರಿದ್ದರೆ ಸಮ್ಮೇಳನಕ್ಕೆ ಅಪಮಾನ..! ಅದೇ ರೀತಿ ಧಾರವಾಡದಲ್ಲಿ ನಡೆದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನಾಲ್ಕು ಗಂಟೆ ವಿಳಂಬ ಮಾಡಿದ್ದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಯಿತು.- ಡಾ. ರಾಘವೇಂದ್ರ ಪಾಟೀಲ್ 

 • Book sale

  NEWS7, Jan 2019, 10:01 AM IST

  ಮೈಸೂರಿಗಿಂತ ಧಾರವಾಡದಲ್ಲಿ ಪುಸ್ತಕ ವ್ಯಾಪಾರ ಜೋರು

  ಅಂದಾಜು ಐದು ಲಕ್ಷ ಮಂದಿ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಆ ಸಂಖ್ಯೆಗೆ ತಕ್ಕ ಪುಸ್ತಕ ಮಾರಾಟ ಆಗಲಿಲ್ಲ. ಪುಸ್ತಕ ಮಾರಾಟ ಕುರಿತಾಗಿ ಪುಸ್ತಕ ಪ್ರಕಾಶಕರಿಂದ ಮಿಶ್ರ ಪ್ರತಿಕ್ರಿಯೆ. ಪ್ರತಿಷ್ಠಿತ ಮಳಿಗೆಗಳು ವ್ಯಾಪಾರ ಚೆನ್ನಾಗಿದೆ ಎಂದರೆ, ಕೆಲವು ಪ್ರಕಾಶಕರು ಪರವಾಗಿಲ್ಲ ಎನ್ನುತ್ತಾರೆ. ಮಾರಾಟ ಇಲ್ಲವೇ ಇಲ್ಲ ಎಂದವರು ಕಡಿಮೆ. ದೊಡ್ಡ ಮಳಿಗೆಗಳಿಗೆ ಸುಮಾರು ಆರು ಲಕ್ಷ ಬೆಲೆಯ ಪುಸ್ತಕ ಮಾರಾಟ ನಡೆದಿದೆ. ಪುಸ್ತಕ ಸಂಗ್ರಹ ಚೆನ್ನಾಗಿದ್ದ ಸಣ್ಣ ಮಳಿಗೆಗಳ ಪುಸ್ತಕ ವ್ಯಾಪಾರವೂ ಒಂದೂವರೆ ಲಕ್ಷ ರು. ದಾಟಿದೆ. ಮೈಸೂರು ಸಮ್ಮೇಳನಕ್ಕೆ ಹೋಲಿಸಿದರೆ ಧಾರವಾಡದ ಪುಸ್ತಕ ಸಮ್ಮೇಳನ ಯಶಸ್ವಿಯಾಗಿದೆ.

   

 • Dharwad

  NEWS7, Jan 2019, 9:40 AM IST

  ಧಾರವಾಡ ಸಮ್ಮೇಳನ ಕಲಿಸಿದ 10 ಪಾಠಗಳು

  ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನ ತೆರೆ ಕಂಡಿದೆ. ಎಂದಿನಂತೆ ಈ ಸಮ್ಮೇಳನದಲ್ಲೂ ಕೆಲವೊಂದು ಲೋಪದೋಷಗಳಿದ್ದವು. ಅಂಥ ಹತ್ತು ಅಂಶಗಳನ್ನಿಲ್ಲಿ ಪಟ್ಟಿಮಾಡಲಾಗಿದೆ. ಮುಂದಿನ ಸಮ್ಮೇಳನದಲ್ಲಿ ಇವು ಮರುಕಳಿಸದಂತೆ ನೋಡಿಕೊಂಡರೆ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಯಶಸ್ವಿಯಾಗಬಹುದು.

 • 84 Akhila Bharata Kannada Sahitya Sammelana

  NEWS7, Jan 2019, 9:21 AM IST

  ಆಂಗ್ಲ ವಿರೋಧಿ ಕೂಗಿನೊಂದಿಗೆ ಸಮ್ಮೇಳನ ಸಂಪನ್ನ

  ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರು ಕೇವಲ 22 ನಿಮಿಷಗಳ ಭಾಷಣದ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ಕಳೆದ ಎರಡು ದಶಕದಲ್ಲಿ ಅತ್ಯಂತ ಪುಟ್ಟಅಧ್ಯಕ್ಷ ಭಾಷಣ ಮಾಡಿದ ದಾಖಲೆಗೂ ಪಾತ್ರರಾದರು. ಅವರ ಭಾಷಣ ಕನ್ನಡ ಶಾಲೆಗಳ, ಕನ್ನಡ ಮಾಧ್ಯಮದ ಕುರಿತಷ್ಟೇ ಆಗಿದ್ದರಿಂದ ಸಾಕಷ್ಟುಚರ್ಚೆಗೂ ಒಳಗಾಯಿತು. ಸಮ್ಮೇಳನದ ಉದ್ದಕ್ಕೂ ಅದು ವಿವಿಧ ವೇದಿಕೆಗಳಲ್ಲಿ ಅನುರಣಿಸಿತು.