ಇಂದಿನಿಂದ ಮೇ. 10ರ ವರೆಗೆ ರಾಜ್ಯದಲ್ಲಿ ಬೃಹತ್ ಪ್ರವಾಸ: ಕೂಡಲ ಶ್ರೀ

ಇಂದಿನಿಂದ ರಾಜ್ಯದಲ್ಲಿ ಶರಣು ಒಂದಾನಾಯನು ಎಂಬ ಯಾತ್ರೆ ಮಾಡುವ ಮೂಲಕ ಇಂದಿನಿಂದ ಮೇ. 10ರ ವರೆಗೆ ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸವನ್ನ ಹಮ್ಮಿಕೊಳ್ಳಲಾಗಿದೆ‌. ಹೀಗಾಗಿ ಪೂಜ್ಯರ ಅಶಿರ್ವಾದ ಪಡೆದುಕೊಂಡು ಹೋಗ್ಬೇಕು ಅಂತ ಶ್ರೀ ಮಠಕ್ಕೆ ಬಂದಿದ್ದೇನೆ ಎಂದ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ

Basava Jayamrutunjaya Swamiji Talks Over Panchamasali Reservation grg

ತುಮಕೂರು(ಏ.22):  ಸತತ 2 ವರ್ಷ 5 ತಿಂಗಳ ಕಾಲ ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಮೀಸಲಾತಿ ಪಡೆದುಕೊಳ್ಳಬೇಕೆಂದು, ಬಹಳ ದೊಡ್ಡ ಹೋರಾಟ ಹಾಗೂ ಚಳುವಳಿಯನ್ನ‌ ಮಾಡಲಾಯಿತು. ಮೊದಲ ‌ಹಂತದ ಯಶಸ್ಸನ್ನ‌ ಪಡೆದ ಮೇಲೆ ಮೊದಲ‌ ಬಾರಿಗೆ ತುಮಕೂರಿನ ನಮ್ಮೆಲ್ಲರ ಆರಾಧ್ಯ ದೈವ ಆಗಿರುವ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಗೌರವ ನಮನ‌ ಸಲ್ಲಿಸಿ ಪರಮ ಪೂಜ್ಯ ಸಿದ್ದಲಿಂಗ ಶ್ರೀಗಳ ಅಶಿರ್ವಾದ ಪಡೆದಿದ್ದೇವೆ. ನಮ್ಮ ಈ ಐತಿಹಾಸಿಕ ಹೋರಾಟಕ್ಕೆ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಯಾರೆಲ್ಲಾ ಸಹಕಾರ ಕೊಟ್ಟು ನಮ್ಮ ಯಶಸ್ಸಿಗೆ ಬೆಂಬಲ‌ ಕೊಟ್ಟಿದ್ದಾರೋ ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಅಂತ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಇಂದು(ಶನಿವಾರ) ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಧ್ಯುಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಇಂದಿನಿಂದ ರಾಜ್ಯದಲ್ಲಿ ಶರಣು ಒಂದಾನಾಯನು ಎಂಬ ಯಾತ್ರೆ ಮಾಡುವ ಮೂಲಕ ಇಂದಿನಿಂದ ಮೇ. 10ರ ವರೆಗೆ ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸವನ್ನ ಹಮ್ಮಿಕೊಳ್ಳಲಾಗಿದೆ‌. ಹೀಗಾಗಿ ಪೂಜ್ಯರ ಅಶಿರ್ವಾದ ಪಡೆದುಕೊಂಡು ಹೋಗ್ಬೇಕು ಅಂತ ಶ್ರೀ ಮಠಕ್ಕೆ ಬಂದಿದ್ದೇನೆ ಅಂತ ಹೇಳಿದ್ದಾರೆ. 

ರಂಜಾನ್ ನೆಪದಲ್ಲಿ ರಾಜಕೀಯ ಬದ್ಧ ವೈರಿಗಳ ಭೇಟಿ, ಕುತೂಹಲಕ್ಕೆ ಕಾರಣವಾಯ್ತು ಸೊಗಡು ಶಿವಣ್ಣ ನಡೆ!

ನಮ್ಮ ಹೋರಾಟಕ್ಕೆ 2d ಎಂಬ ಹೊಸ ಮೀಸಲಾತಿಯನ್ನ ನಮ್ಮ‌ ಸಮುದಾಯಕ್ಕೆ ನೀಡಲಾಗಿದೆ. ಮೊದಲ ಮೆಟ್ಟಿಲು ಹತ್ತಿದ ಕಾರಣ ಮಠದ ಶ್ರೀಗಳ ಅಶಿರ್ವಾದ ಪಡೆದುಕೊಂಡು ನಮ್ಮ‌ ಮುಂದಿನ ಹೋರಾಟ ಮುಂದುವರಿಸಬೇಕೆಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೇವೆ. ಈ ಚಳುವಳಿಗೂ ಸಿದ್ದಗಂಗಾ ಮಠಕ್ಕೂ ಬಹಳ ಸಂಬಂಧ ಇದೆ. ನಾವು ಕೇಳಿದ್ದು ಲಿಂಗಾಯತ ಪಂಚಮಸಾಲಿ ಹಾಗೂ ಲಿಂಗಾಯತ ಉಪನಾಮಗಳಿಗೆ ಮೀಸಲಾತಿ. ಆದರೆ ಸರ್ಕಾರ ಎಲ್ಲಾ ಲಿಂಗಾಯತ ಒಳಪಂಗಡವನ್ನ ಒಳಗೊಂಡಂತೆ. ಹೊಸ ಪ್ರವರ್ಗವನ್ನ ಸೃಷ್ಟಿ ಮಾಡಿ ಆರಂಭದಲ್ಲಿ ನ್ಯಾಯ ಕೊಡುವಂತಹ ಕೆಲಸವನ್ನ ಮಾಡಿದೆ. ನಮ್ಮ ಹೋರಾಟಕ್ಕೆ ಸಿದ್ದಗಂಗಾ ಮಠ ಮಟ್ಟದ ಸಹಕಾರ ನೀಡಿದೆ. ಸತ್ಯಾಗ್ರಹಕ್ಕೆ ಕುಳಿತ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸಾವಿರಾರು ಮಂದಿಗೆ ಅನ್ನ ಆಶ್ರಯ ಕೊಟ್ಟು ಕರ್ನಾಟಕದಲ್ಲಿ ಯಾವ ಮಠಾಧೀಶರು ಕೊಡಲಾಗದ ಅಶಿರ್ವಾದವನ್ನ ಶ್ರೀಮಠ ಕೊಟ್ಟಿದೆ. ಸಿದ್ದಗಂಗಾ ಮಠದ ಫಲವೇ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು. ಈ ಸಂದರ್ಭದಲ್ಲಿ ನಾನು ಪಕ್ಷಾತೀತವಾಗಿ ಧನ್ಯವಾದ ಹೇಳ್ತಿನಿ ಅಂತ ಹೇಳಿದ್ದಾರೆ. 

ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರದ ಒಬಿಸಿ ಶಿಫಾರಸಿಗೆ ಒತ್ತಾಯ ಹಾಗೂ ಹೋರಾಟ ಮಾಡ್ತಿವಿ. ಸರ್ಕಾರ ಎಲ್ಲಾ ಲಿಂಗಾಯತರಿಗೆ ಅವಕಾಶ ಮಾಡಿಕೊಟ್ಟಿದೆ ಧನ್ಯವಾದಗಳನ್ನ ತಿಳಿಸುತ್ತೇನೆ. ಒಂದು ಹಂತದಲ್ಲಿ ಸರ್ಕಾರ ನೀಡಿರುವ ಮೀಸಲಾತಿ ನಮಗೆ ಸಮಾಧಾನ ತಂದಿದೆ. ನಮ್ಮ ಮಕ್ಕಳಿಗೆ ಎಷ್ಟರ ಮಟ್ಟಿಗೆ ಮೀಸಲಾತಿ ಕೊಡ್ಬೇಕೋ ಅದನ್ನ ಕೊಡುವಂತಹ ಕೆಲಸವನ್ನ ರಾಜ್ಯ ಸರ್ಕಾರ‌ ಮಾಡಿದೆ. ನಮ್ಮ ಪಂಚಮಸಾಲಿ ಹೋರಾಟದಿಂದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಎಲ್ಲಾ ಪಕ್ಷದಲ್ಲೂ ಮಾನ್ಯತೆ ನೀಡಿ ಹೆಚ್ಚಿನ ಸ್ಥಾನಮಾನ ಸಿಕ್ಕಿದೆ. ಇದು ಪಂಚಮಸಾಲಿ ಹೋರಾಟದ ಫಲ. ಈ ಹೋರಾಟದಲ್ಲಿ ದುಡಿದ ಕಟ್ಟಕಡೆಯ ವ್ಯಕ್ತಿಗೆ ಸಲ್ಲಬೇಕು ಅಂತ ಶ್ರೀಗಳು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios