Asianet Suvarna News Asianet Suvarna News

ರಂಜಾನ್ ನೆಪದಲ್ಲಿ ರಾಜಕೀಯ ಬದ್ಧ ವೈರಿಗಳ ಭೇಟಿ, ಕುತೂಹಲಕ್ಕೆ ಕಾರಣವಾಯ್ತು ಸೊಗಡು ಶಿವಣ್ಣ ನಡೆ!

ಒಂದು ಕಾಲದಲ್ಲಿ ರಾಜಕೀಯ ಬದ್ಧ ವೈರಿಗಳಾದ ಡಾ.ರಫೀಕ್ ಅಹಮದ್ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ. ಕುತೂಹಲ ಮೂಡಿಸಿದ ರಾಜಕೀಯ ಬದ್ಧ ವೈರಿಗಳ ಭೇಟಿ. ಸಹಕಾರ ನೀಡುವಂತೆ ರಫೀಕ್ ಗೆ ಮನವಿ ಮಾಡಿದ ಸೊಗಡು ಶಿವಣ್ಣ.

Karnataka Election 2023 BJP leader sogadu shivanna meet congress leader rafeeq ahmed gow
Author
First Published Apr 22, 2023, 5:51 PM IST

ತುಮಕೂರು (ಏ.22): ಒಂದು ಕಾಲದಲ್ಲಿ ರಾಜಕೀಯ ಬದ್ಧ ವೈರಿಗಳಾದ ಡಾ.ರಫೀಕ್ ಅಹಮದ್ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿದ್ದಾರೆ.‌ ರಂಜಾನ್ ಹಬ್ಬದ ನೆಪದಲ್ಲಿ ಡಾ.ರಫೀಕ್ ಅಹಮದ್ ಮನೆಗೆ ಭೇಟಿ ನೀಡಿದ ಸೊಗಡು ಶಿವಣ್ಣ ಪಕ್ಷೇತರವಾಗಿ ಸ್ಪರ್ಧಿಸಿರುವ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಈ ಇಬ್ಬರು ನಾಯಕರು ಹಿಂದಿನ ಚುನವಣೆಯಲ್ಲಿ ಬದ್ಧ ವೈರಿಗಳಾಗಿದ್ದು, ಕಾಂಗ್ರೆಸ್ ನಿಂದ ಡಾ.ರಫೀಕ್ ಅಹಮದ್ ಸ್ಪರ್ಧಿಸಿದ್ರೆ, ಬಿಜೆಪಿಯಲ್ಲಿ ಸೊಗಡು ಶಿವಣ್ಣ ಸ್ಪರ್ಧಿಸಿ ಟಕ್ಕರ್ ಕೊಡುತ್ತಿದ್ದರು, ಬದಲಾದ ಸನ್ನಿವೇಶದಲ್ಲಿ ಈ ಇಬ್ಬರು ನಾಯಕರಿಗೂ ಟಿಕೆಟ್ ಕೈ ತಪ್ಪಿದ್ದು, ತಮ್ಮ ತಮ್ಮ ಪಕ್ಷದಲ್ಲಿ ಮೂಲೆ ಗುಂಪಾಗಿದ್ದಾರೆ. 

ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣಗೆ ವರಿಷ್ಠರು ಮಣೆಹಾಕದಿರುವುದು  ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೊಗಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ, ಇದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.

ನಾನು ಭೂತನೂ ಅಲ್ಲ ಪಿಶಾಚಿಯೂ ಅಲ್ಲ, ವರುಣಾದಲ್ಲಿ ಸಿದ್ದರಾಮಯ್ಯ ನಿರಂತರ

ಇನ್ನೊಂದೆಡೆ ಮಾಜಿ ಶಾಸಕ ಡಾ.ರಫೀಕ್‌ಅಹಮದ್ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಇಕ್ಬಾಲ್ ಅಹಮದ್ ಎಂಬ ಹೊಸ ಮುಖಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆಗ ಪಕ್ಷದ ಮುಖಂಡರ ವಿರುದ್ಧ ಡಾ.ರಫೀಕ್ ಅಹಮದ್ ಆಕ್ರೋಶ ವ್ಯಕ್ತ ಪಡಿಸಿದ್ರೆ, ರಫೀಕ್ ಅಹಮದ್ ಮಾವ ಮಾಜಿ ಶಾಸಕ ಶಫೀ ಅಹಮದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ರು. ಆದರೆ ಈ ಇಬ್ಬರು ನಾಯಕರು ಚುನಾವಣೆಗೆ ಸ್ಪರ್ಧಿಸದೆ ತಟಸ್ಥವಾಗಿದ್ದಾರೆ. ಈಹಿನ್ನೆಲೆಯಲ್ಲಿ ಇಂದು ಹಬ್ಬದ ನೆಪದಲ್ಲಿ ಸೊಗಡು ಶಿವಣ್ಣ ಜಯನಗರದಲ್ಲಿರುವ ಡಾ.ರಫೀಕ್ ಅಹಮದ್ ಮನೆಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಹೆಚ್‌ಡಿಕೆಗೆ ಅನಾರೋಗ್ಯ, ಚುನಾವಣಾ ಪ್ರಚಾರ ಕಾರ್ಯಕ್ರಮಗಳು ದಿಢೀರ್ ರದ್ದು!

ಈ ಇಬ್ಬರು ನಾಯಕರಿಗೂ ತಮ್ಮಗಳ ಪಕ್ಷದಿಂದ ಟಿಕೆಟ್ ತಪ್ಪಿರುವುದು, ಇದೀಗ ಇಬ್ಬರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.  ಈ ಇಬ್ಬರು ನಾಯಕರ ಭೇಟಿ  ಕಾಂಗ್ರೆಸ್ ಹಾಗೂ ಬಿಜೆಪಿ ಪಾಳಯದಲ್ಲಿ ಆತಂಕ ಹುಟ್ಟಿಸಿದೆ.  ಏತನ್ಮಧ್ಯೆ ಈ ಒಡಕಿನ ಲಾಭ ಪಡೆಯಲು ಜೆಡಿಎಸ್ ಕೂಡ ಹವಣಿಸಿದೆ.‌

Follow Us:
Download App:
  • android
  • ios