Asianet Suvarna News Asianet Suvarna News

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ, ಸಿಎಂ ಬದಲಿಸಲು ಒತ್ತಾಯ!

ಕೊರೋನಾ ಸೋಂಕಿನ ನಡುವೆಯೂ ಆಡಳಿತಾರೂಢ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಗುರುವಾರ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿವಾಸದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಸೇರಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

Basangouda Patil Yatnal and Umesh Katti demand to change cm
Author
Bangalore, First Published May 29, 2020, 7:55 AM IST

ಬೆಂಗಳೂರು(ಮೇ 29): ಕೊರೋನಾ ಸೋಂಕಿನ ನಡುವೆಯೂ ಆಡಳಿತಾರೂಢ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಗುರುವಾರ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿವಾಸದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಸೇರಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರಾದ ಉಮೇಶ್‌ ಕತ್ತಿ, ರಾಜುಗೌಡ, ದತ್ತಾತ್ರೇಯ ಪಾಟೀಲ, ರಾಜಕುಮಾರ್‌ ಪಾಟೀಲ್‌ ಮೊದಲಾದವರು ಈ ಭೋಜನ ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದ್ದರೂ ನಿಖರವಾಗಿ ಎಷ್ಟುಮಂದಿ ಪಾಲ್ಗೊಂಡಿದ್ದರು ಎಂಬುದು ಸ್ಪಷ್ಟವಾಗಿ ಹೊರಬಿದ್ದಿಲ್ಲ. ಈ ಪೈಕಿ ಯತ್ನಾಳ ಮತ್ತು ಕತ್ತಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಬದಲಾಯಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್‌ಗೆ ರಾಜ್ಯದ ಅರ್ಧದಷ್ಟುಜನಕ್ಕೆ ಸೋಂಕು! ವೈರಾಣು ವಿಜ್ಞಾನಿ ಎಚ್ಚರಿಕೆ

ಇನ್ನುಳಿದ ಶಾಸಕರ ಪೈಕಿ ಕೆಲವರಿಗೆ ಸಚಿವ ಸ್ಥಾನದ ಜೊತೆಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ನೆರವು ಸಿಗುತ್ತಿಲ್ಲ ಎಂಬ ಅಸಮಾಧಾನವಿದೆ. ಆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು ಎನ್ನಲಾಗಿದೆ.

ಯತ್ನಾಳ, ಕತ್ತಿ ಹಾಗೂ ರಾಜುಗೌಡ ಅವರು ಕಳೆದ ಬಜೆಟ್‌ ಅಧಿವೇಶನ ವೇಳೆಯೇ ಸಭೆಗಳನ್ನು ನಡೆಸಿದ್ದರು. ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಬಳಿ ತಮ್ಮ ಅಹವಾಲು ಸಲ್ಲಿಸಲೂ ಮುಂದಾಗಿದ್ದರು. ಅಷ್ಟರಲ್ಲಿ ಕೊರೋನಾ ಲಾಕ್‌ಡೌನ್‌ ಜಾರಿಯಾಯಿತು. ಸಂಪುಟ ವಿಸ್ತರಣೆ ವೇಳೆ ತಮಗೆ ಅವಕಾಶ ನೀಡಬೇಕು ಎಂಬುದು ಅವರ ಬಲವಾದ ಬೇಡಿಕೆ. ಒಪ್ಪದಿದ್ದರೆ ಮುಖ್ಯಮಂತ್ರಿಗಳನ್ನೇ ಬದಲಾಯಿಸಬೇಕು ಎಂಬ ಪ್ರಸ್ತಾಪ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಈ ಶಾಸಕರು ಅತೃಪ್ತರು.

14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!

ಇದೀಗ ಹೆಚ್ಚು ಕಡಮೆ ಲಾಕ್‌ಡೌನ್‌ ಪೂರ್ಣ ಪ್ರಮಾಣದಲ್ಲಿ ಸಡಿಲಗೊಳ್ಳುತ್ತಿರುವ ಬೆನ್ನಲ್ಲೇ ಈ ಅತೃಪ್ತ ಶಾಸಕರು ಮತ್ತೆ ಸಭೆ ಸೇರಿ ತಮ್ಮ ಹಿಂದಿನ ಬೇಡಿಕೆಗೆ ಜೀವ ತುಂಬುವ ಪ್ರಯತ್ನ ನಡೆಸಿದ್ದಾರೆ.

ವಿಮಾನ ಏರಿದ್ಮೇಲೆ ಒಂದು, ಇಳಿದ್ಮೇಲೆ ಇನ್ನೊಂದು: ಮಹಿಳೆಯ ಕಿರಿಕ್

ಜೊತೆಗೆ ಮುಂದಿನ ತಿಂಗಳು ವಿಧಾನಪರಿಷತ್ತು ಮತ್ತು ರಾಜ್ಯಸಭೆಯ ಹಲವು ಸ್ಥಾನಗಳು ತೆರವಾಗುವುದರಿಂದ, ಆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ನಡೆಯಬಹುದು ಎಂಬ ನಿರೀಕ್ಷೆ ಈ ಶಾಸಕರಲ್ಲಿ ಟಿಸಿಲೊಡೆದಿದೆ. ಹೀಗಾಗಿ, ಭೋಜನ ಕೂಟದ ನೆಪದಲ್ಲಿ ಸಭೆ ಸೇರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಸಿದ್ಧತೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios