ಬಿಜೆಪಿ- ಕಾಂಗ್ರೆಸ್‌ನ ಉನ್ನತ ನಾಯಕರಿಂದ ಷಡ್ಯಂತ್ರ| ಈ ಎರಡೂ ಪಕ್ಷಗಳ ಇಬ್ಬರು ನಾಯಕರು ಯಾರು?| ಸಿಡಿ ಪ್ರಕರಣದ ಹಿಂದೆ ಇದೆ ಷಡ್ಯಂತ್ರ| ಸಿಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ರಾಜಕಾರಣಿಗಳನ್ನ ಜೈಲಿಗಟ್ಟಬೇಕು| ಇಲ್ಲವಾದರೆ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ: ಯತ್ನಾಳ್| 

ವಿಜಯಪುರ(ಮಾ.14): ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನ ವ್ಯವಸ್ಥಿತವಾಗಿ ಮುಗಿಸಿಹಾಕಬೇಕು ಅಂತ ಪ್ಲಾನ್ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿರುವ ಇಬ್ಬರು ಉನ್ನತ ನಾಯಕರಿಂದ ಕುತಂತ್ರ ನಡೆದಿದೆ. ಸಿಡಿ ಪ್ರಕರಣದ ಹಿಂದೆ ಭಾರೀ ಷಡ್ಯಂತ್ರವಿದೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಹಾಗಾದ್ರೆ ಈ ಎರಡೂ ಪಕ್ಷಗಳ ಇಬ್ಬರು ನಾಯಕರು ಯಾರು? ಎಂಬ ಪ್ರಶ್ನೆಗಳು ಉದ್ಭವವಾಗಿವೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಸಲೀಲೆ ಸಿಡಿ ಪ್ರಕರಣವನ್ನ ಎಸ್‌ಐಟಿ ತನಿಖೆಗೆ ನೀಡಲಾಗಿದೆ. ಈ ತನಿಖೆ ಎಷ್ಟು ಪಾರದರ್ಶಕವಾಗಿ ಇರುತ್ತೆ ಅನ್ನೋದೇ ನನಗೆ ಸಂಶಯವಿದೆ ಎಂದು ಎಸ್‌ಐಟಿ ತನಿಖೆಗೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

ಯುವತಿ ವಿಡಿಯೋ ರಿಲೀಸ್, ಬೊಮ್ಮಾಯಿ ಮನೆಗೆ ಸಾಹುಕಾರ್ ದೌಡು, ಮುಂದಿನ ನಡೆ ಕುತೂಹಲ..!

ಅಲ್ಲಿ ಒಬ್ಬ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳ್ತಾನೆ. ಈ ಹಿಂದೆ ಕೂಡ ಡ್ರಗ್ಸ್ ಬಗ್ಗೆ ತನಿಖೆ ನಡೆಸಿದ್ರು, ತಾರ್ಕಿಕ ಅಂತ್ಯವಿಲ್ಲದೆ ಕೇಸ್ ಮುಚ್ಚಿ ಹಾಕಿದ್ರು. ಹೀಗಾಗಿ SIT ಬಿಟ್ಟು ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. 
ಇನ್ನು ಅದೇಷ್ಟೋ ರಾಜಕಾರಣಿಗಳ ಸಿಡಿ ಇವೆ. ಎರಡೂ ಪಕ್ಷಗಳ ಆ ನಾಯಕರು, ನಾಯಕನೊಬ್ಬನ ಮಗನ ಬಳಿಯೂ ಸಿಡಿ ಇವೆ. ಸಿಬಿಐ ತನಿಖೆ ನಡೆಸಿ ಸಿಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ರಾಜಕಾರಣಿಗಳನ್ನ ಜೈಲಿಗಟ್ಟಬೇಕು. ಇಲ್ಲವಾದರೆ ಈ ಕೆಟ್ಟ ಸಂಸ್ಕೃತಿ ಮುಂದುವರೆಯುತ್ತದೆ ಎಂದಿದ್ದಾರೆ. 

ಬಿಜೆಪಿ ಹಾಗೂ ಕಾಂಗ್ರೆಸ್ ಉನ್ನತ ನಾಯಕರಿಬ್ಬರ ಮನೆಯಲ್ಲಿ ಸಿಡಿಗಳಿವೆ. ಸಿಬಿಐ ತನಿಖೆ ನಡೆಸಿ ಇವರನ್ನ ಜೈಲಿಗಟ್ಟಬೇಕು. ಷಡ್ಯಂತ್ರದಲ್ಲಿ ಯುವತಿ ಭಾಗವಹಿಸಿರುವುದರ ಬಗ್ಗೆ ತನಿಖೆ ನಡೆಯಬೇಕು. ಆ ವಿಡಿಯೋ ನೋಡಿದ್ರೆ, ನಿನ್ನೆಯದು ಬೇರೆ ಇದೆ ಅಂತ ಅನ್ಸುತ್ತೆ. ರಮೆಶ್ ಜಾರಕಿಹೊಳಿ ವಿಡಿಯೋದಲ್ಲಿ ಬೀದರ್ ಭಾಷೆ ಇದೆ. ಇಲ್ಲಿ ಬೆಂಗಳೂರು ಭಾಷೆ ಉಪಯೋಗವಾಗಿದೆ. ಭಾಷೆಗಳು ಹೇಗೆ ಚೆಂಜ್ ಆಗುತ್ವೆ?, ಹೀಗೆ ಮಾತಾಡು ಅಂತಾ ಕಾಂಗ್ರೆಸ್ ಉನ್ನತ ನಾಯಕರು ಹೇಳಿದ್ದಾರೋ? ಅಥವಾ ಬಿಜೆಪಿಯ ಉನ್ನತ ನಾಯಕರು ಹೇಳಿದ್ದಾರೋ? ಗೊತ್ತಿಲ್ಲ ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.