ತುಮಕೂರು(ಏ.19): ಸರ್ಕಾರದ ಆದೇಶದಂತೆ ಈಗಾಗಲೇ ಮುಚ್ಚಿರುವ ವೈನ್‌ ಸ್ಟೋರ್‌ಗಳು ಕಳ್ಳತನವಾದರೆ ಮಾಲೀಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಆದ್ದರಿಂದ ರಾತ್ರಿ ವೇಳೆಯಲ್ಲಿ ಅಂಗಡಿಗಳನ್ನು ಕಾಯ್ದುಕೊಳ್ಳಲು ಭದ್ರತಾ ಸಿಬ್ಬಂದಿ ನೇಮಿಸಿಕೋಳ್ಳಬೇಕೆಂದು ಡಿವೈಎಸ್ಪಿ ಜಗದೀಶ್‌ ವೈನ್‌ ಸ್ಟೋರ್‌ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ತಾಲೂಕಿನ ವೈನ್‌ ಸ್ಟೋರ್‌ ಮಾಲೀಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ

ಮಹಾಮಾರಿ ಕೊರೋನಾ ವೈರಸ್‌ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಆದ್ದರಿಂದ ವೈನ್‌ ಸ್ಟೋರ್‌ ಮಾಲೀಕರು ತಾಲೂಕು ಆಡಳಿತದೊಂದಿಗೆ ಸಹಕರಿಸುವುದು ಅಗತ್ಯವಾಗಿದೆ ಎಂದರು.

ಸಾರ್ವಜನಿಕರಿಂದ 60 ರು. ಬೆಲೆ ಬಾಳುವ ಮದ್ಯದ ಬಾಟಲ್‌ ಅನ್ನು 600 ರುಪಾಯಿಗಳಿಗೆ ಮಾರುತಿದ್ದಾರೆ ಎಂದು ಮಾಹಿತಿ ಇದೆ. ಇದರಿಂದ ಮಾಲೀಕರು ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ದುರಾಸೆಗೆ ಒಳಗಾಗುವುದು ಉತ್ತಮ ಬೆಳವಣಿಗೆಯಲ್ಲ. ಸರ್ಕಾರಿ ಆದೇಶವನ್ನು ಪಾಲಿಸಿ ಎಂದು ಎಚ್ಚರಿಸಿದರು.

ವೈನ್‌ ಸ್ಟೋರ್‌ ಮಾಲೀಕರೇ ಕಳ್ಳತನ ಮಾಡಿಸುತ್ತಿದ್ದಾರೆ ಎಂಬ ಅನುಮಾನವಿದೆ. ಪೊಲೀಸ್‌ ಇಲಾಖೆಗೂ ಸಹ ತುಂಬಾ ಒತ್ತಡದ ಕೆಲಸವಿರುವುದರಿಂದ ನಿಮ್ಮ ವೈನ್‌ ಸ್ಟೋರ್‌ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಾಲೀಕರೆ ತಮ್ಮ ವೈನ್‌ ಸ್ಟೋರ್‌ಗಳಿಗೆ ರಾತ್ರಿ ಮತ್ತು ಬೆಳಗಿನ ವೇಳೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಇದಕೆ ಇಲಾಖೆಯಿಂದ ನಿಗದಿತ ಪಾಸ್‌ ನೀಡಲಾಗುತ್ತದೆ ಎಂದರು.

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳದೆ ಹೋದರೆ ವೈನ್‌ ಸ್ಟೋರ್‌ ಕಳ್ಳತನವಾದ ಸಂದರ್ಭದಲ್ಲಿ ಮಾಲೀಕರ ಮೇಲೆಯೇ ಪ್ರಕರಣ ದಾಖಲಿಸಲಾಗುವುದು. ಅಂಗಡಿಯ ಸುತ್ತ ಸಿಸಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ ಎಂದು ತಿಳಿಸಿದರು.

ತಹಸೀಲ್ದಾರ್‌ ವಿಶ್ವನಾಥ್‌ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಮದ್ಯಪಾನ ಮಾರಾಟವಾಗುತ್ತದೆ ಎಂಬ ವಿಷಯ ತಿಳಿದಿದೆ. ಮದ್ಯದ ಬಾಟಲ್‌ಗಳು ಸಿಕ್ಕರೆ ನಿರ್ದಾಕ್ಷಣ್ಯವಾಗಿ ಅಂಗಡಿಯನ್ನು ಸೀಜ್‌ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಮದ್ಯ ಮಾರಾಟ ಅಂಗಡಿಗಳಲ್ಲಿ ಬಾಟಲ್‌ಗಳನ್ನು ನೇರವಾಗಿ ಕಾಣುವಂತೆ ಜೋಡಿಸಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಮದ್ಯದ ಬಾಟಲ್‌ಗಳು ಹೊರಗಡೆ ಹೋಗುವವರಿಗೆ ಕಾಣದಂತೆ ಕಪ್ಪು ಹ್ಲಾಸನ್ನು ಅಳವಡಿಸದಿದ್ದರೆ ಅಂಗಡಿ ಸೀಜ್‌ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿ ಗವಿಯಪ್ಪ, ನಂದೀಶ್‌, ಮಲ್ಲಿಕಾರ್ಜುನ್‌ ಉಪಸ್ಥಿತರಿದ್ದರು.