ಮಡಿಕೇರಿ(ಜು.12): ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ದೃಢವಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಪೊಲೀಸ್‌, ಬ್ಯಾಂಕ್‌ ಉದ್ಯೋಗಿ, ರೆಸಾರ್ಟ್‌ ಸಿಬ್ಬಂದಿ ಸೇರಿದಂತೆ ಶನಿವಾರ ಒಟ್ಟು 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 151ಕ್ಕೇ ಏರಿಕೆಯಾಗಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಈ ವರೆಗೆ ಜಿಲ್ಲೆಯಲ್ಲಿ 62 ಮಂದಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದ್ದು, ಸೋಮವಾರಪೇಟೆ ತಾಲೂಕಿನ ಕುಸುಬೂರು(ಹಳ್ಳದಿಣ್ಣೆ) ಗ್ರಾಮದ 41 ವರ್ಷದ ಪುರುಷ ಬ್ಯಾಂಕ್‌ ಉದ್ಯೋಗಿ, ಕೊಡ್ಲಿಪೇಟೆ ಸಮೀಪದ ಬೆಸ್ತೂರಿನ 30 ವರ್ಷದ ಪುರುಷ ಬ್ಯಾಂಕ್‌ ಉದ್ಯೋಗಿ, ಬಳಗುಂದ 41 ವರ್ಷ ಪ್ರಾಯದ ಪುರುಷ, ಶನಿವಾರಸಂತೆಯ ಗುಡುಗಳಲೆ ಗ್ರಾಮದ 32 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಕುಕ್ಕೆ ಕ್ಷೇತ್ರಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ದಂಪತಿ ಭೇಟಿ

ವಿರಾಜಪೇಟೆ ತಾಲೂಕಿನ ಎಂ. ಎಂ. ಲೇಔಟ್‌ನ 34 ವರ್ಷದ ಮಹಿಳೆ, ಕೆದಮಳ್ಳೂರು ಗ್ರಾಮದ 50 ವರ್ಷ ಪ್ರಾಯದ ಮಹಿಳೆ, ಗೋಣಿಕೊಪ್ಪದ ನೇತಾಜಿ ಲೇಔಟ್‌ನ 21 ವರ್ಷದ ಮಹಿಳೆ ಹಾಗೂ 41 ವರ್ಷದ ಮಹಿಳೆ, ಮಡಿಕೇರಿಯ ಭಗವತಿ ನಗರದ ಖಾಸಗಿ ರೆಸಾರ್ಟ್‌ ಸಿಬ್ಬಂದಿ 31 ವರ್ಷದ ಪುರುಷ, ಮಡಿಕೇರಿಯ ಪೊಲೀಸ್‌ ಕ್ವಾಟರ್ಸ್‌ನ 38 ವರ್ಷದ ಪುರುಷ ಪೊಲೀಸ್‌ಗೆ ಕೊರೋನಾ ದೃಢವಾಗಿದೆ.

ವಿರಾಜಪೇಟೆಯ ಶಾಂತಿನಗರದ ಈ ಹಿಂದೆ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಿಂದ ಮತ್ತೆ ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 67ವಷÜರ್‍ದ ಪುರುಷ, 57 ಹಾಗೂ 28 ವರ್ಷದ ಮಹಿಳೆಯರು, 10 ಹಾಗೂ 7 ವರ್ಷದ ಇಬ್ಬರು ಬಾಲಕರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸೋಂಕಿತರ ಹೆಚ್ಚಳ: ಒಂದೇ ದಿನ 90 ಮಂದಿಗೆ ವೈರಸ್‌

ಗೋಣಿಕೊಪ್ಪದ ಅಚ್ಚಪ್ಪ ಲೇಔಟ್‌ನ 86 ವರ್ಷದ ಮಹಿಳೆ ಹಾಗೂ ಎಂ. ಎಂ. ಲೇ ಔಟ್‌ನ 38 ವರ್ಷದ ಪುರುಷನಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಈ ಎರಡೂ ಬಡಾವಣೆಗಳನ್ನು ನಿಯಂತ್ರಿತ ಪ್ರದೇಶ ಎಂದು ಘೋಷಿಸಲಾಗಿದೆ.

ಆರೋಗ್ಯ ಕಾರ್ಯಕರ್ತರಿಂದ ಸೋಂಕು:

ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿ ಗೃಹದಲ್ಲಿದ್ದ 21 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದ್ದು, ಈ ಹಿಂದೆ ಸೋಂಕು ದೃಢಪಟ್ಟಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ ಎಂದು ಹೇಳಲಾಗಿದೆ.

ಮತ್ತೊಂದೆಡೆ ಶನಿವಾರಸಂತೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ 31 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಪ್ರವಾಸ ಇತಿಹಾಸವಿರುವ ಸೋಮವಾರಪೇಟೆ ತಾಲೂಕು ನೇರಳೆ ಗ್ರಾಮದ ಜ್ವರ ಲಕ್ಷಣವಿದ್ದ 26 ವರ್ಷದ ಪುರುಷನಲ್ಲೂ ಕೋವಿಡ್‌-19 ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನೇರಳೆ ಗ್ರಾಮದಲ್ಲೂ ನಿಯಂತ್ರಿತ ಪ್ರದೇಶ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಹುಲುಸೆ ಮತ್ತು ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮಗಳನ್ನು ನಿಯಂತ್ರಿತ ಪ್ರದೇಶದಿಂದ ಮುಕ್ತಗೊಳಿಸಲಾಗಿದೆ.

ನಿಯಂತ್ರಿತ ಪ್ರದೇಶ ಘೋಷಣೆ:

ಸೋಮವಾರಪೇಟೆ ತಾಲೂಕಿನ ಕುಸುಬೂರು (ಹಳ್ಳದಿಣ್ಣೆ), ಕೊಡಿಪೇಟೆಯ ಬೆಸ್ತೂರು, ಸೋಮವಾರಪೇಟೆಯ ಬಳಗುಂದ, ಶನಿವಾರಸಂತೆಯ ಗುಡುಗಳಲೆ, ಮಡಿಕೇರಿಯ ಭಗವತಿ ನಗರ, ಮಡಿಕೇರಿಯ ಪೊಲೀಸ್‌ ವಸತಿ ಗೃಹ, ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನಿಯಂತ್ರಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ತಂಡದಿಂದ ಹಲ್ಲೆ: ಗ್ರಾಮ ಪಂಚಾಯತ್ ಸದಸ್ಯ ಸಾವು

ಜಿಲ್ಲೆಯ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಕೊಡಗಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ಈ ಪೈಕಿ 62 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ, ಒಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ 88 ಪ್ರಕರಣಗಳು ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳ ಸಂಖ್ಯೆಯೂ 61ಕ್ಕೆ ಏರಿಕೆಯಾಗಿದೆ.

ಸೋಂಕಿತರು 151

ಗುಣಮುಖರು: 62

ಚಿಕಿತ್ಸೆ ಪಡೆಯುತ್ತಿರುವವರು: 88

ನಿಯಂತ್ರಿತ ಪ್ರದೇಶ: 61