ಸೋಂಕಿತರ ಹೆಚ್ಚಳ: ಒಂದೇ ದಿನ 90 ಮಂದಿಗೆ ವೈರಸ್‌

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ದ್ವಿಗುಣಗೊಂಡಿದೆ. ಶನಿವಾರ ಒಟ್ಟು 90 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಎಎಸೈ, ಹೊಟೇಲ್‌ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಬ್ಯಾಂಕ್‌ ಸಿಬ್ಬಂದಿ, ಅಂಗಡಿ ಗ್ರಾಹಕರು ಸೇರಿದ್ದಾರೆ. ಅದರಲ್ಲೂ ಉಡುಪಿ ತಾಲೂಕಿನಲ್ಲಿಯೇ 66 ಮಂದಿಗೆ ಈ ಸೋಂಕು ತಗುಲಿದೆ.

90 covid19 positive cases in Udupi on July 11th

ಉಡುಪಿ(ಜು.12): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ದ್ವಿಗುಣಗೊಂಡಿದೆ. ಶನಿವಾರ ಒಟ್ಟು 90 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಎಎಸೈ, ಹೊಟೇಲ್‌ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಬ್ಯಾಂಕ್‌ ಸಿಬ್ಬಂದಿ, ಅಂಗಡಿ ಗ್ರಾಹಕರು ಸೇರಿದ್ದಾರೆ. ಅದರಲ್ಲೂ ಉಡುಪಿ ತಾಲೂಕಿನಲ್ಲಿಯೇ 66 ಮಂದಿಗೆ ಈ ಸೋಂಕು ತಗುಲಿದೆ.

ಶನಿವಾರ ಪತ್ತೆಯಾದ ಸೋಂಕಿತರಲ್ಲಿ 57 ಮಂದಿ ಪುರುಷರು ಮತ್ತು 25 ಮಂದಿ ಮಹಿಳೆಯರು, ಹತ್ತು ವರ್ಷದೊಳಗಿನ 5 ಬಾಲಕಿಯರು ಮತ್ತು 3 ಬಾಲಕರಿದ್ದಾರೆ. ಅವರಲ್ಲಿ 1 ವರ್ಷದ ಗಂಡು ಮಗುವೂ ಇದೆ.

ಆನ್ ಲೈನ್ ಶಿಕ್ಷಣ ಕಷ್ಟಸಾಧ್ಯ, ಹಾಗಾಗಿ ಸುರೇಶ್ ಕುಮಾರ್ ಹೊಸ ಪರಿಹಾರ

ಈ ಸೋಂಕಿತರಲ್ಲಿ ಮುಂಬೈಯಿಂದ 8, ಬೆಂಗಳೂರಿನಿಂದ 5, ಮಂಗಳೂರು ಮತ್ತು ರಾಯಚೂರಿನಿಂದ ತಲಾ ಒಬ್ಬರು ಬಂದವರಾಗಿದ್ದರೆ, ಉಳಿದ 75 ಮಂದಿ ಸ್ಥಳೀಯರಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಡಿಎಚ್‌ಒ ಡಾ.ಸೂಡಾ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1567 ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 1245 ಮಂದಿ ಗುಣಮುಖರಾಗಿದ್ದಾರೆ. 3 ಮಂದಿ ಮೃತಪಟ್ಟಿದ್ದು, 319 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 3ರ ಹರೆಯದ ಪುಟಾಣಿ ದಾಖಲೆ!

ಶನಿವಾರ 663 ವರದಿಗಳು ಬಂದಿದ್ದು, ಅವುಗಳಲ್ಲಿ 90 ಪಾಸಿಟಿವ್‌ ಮತ್ತು 573 ನೆಗೆಟಿವ್‌ ಆಗಿವೆ. ಮತ್ತೆ 269 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಲ್ಲಿ 120 ಹಾಟ್‌ಸ್ಪಾಟ್‌ ನಿಂದ ಬಂದವರು, 117 ಕೊರೋನಾ ಸೋಂಕಿತರು, 32 ಮಂದಿ ಕೊರೋನಾ ಶಂಕಿತರಾಗಿದ್ದಾರೆ. ಒಟ್ಟು 2030 ವರದಿಗಳು ಕೈಸೇರಬೇಕಾಗಿವೆ.

ಕಾಪು: ಎಎಸೈಗೆ ಸೋಂಕು

ಕಾಪು ಠಾಣೆಯ ಎಎಸೈಗೂ ಸೋಂಕು ತಗುಲಿದ್ದು, ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಎಎಸೈ ಅವರು ಈಗಾಗಲೇ ಕೋಟದಲ್ಲಿರುವ ತಮ್ಮ ಮನೆಯಲ್ಲಿ ಕ್ವಾರಂಟೈನ್‌ ನಲ್ಲಿದ್ದುದರಿಂದ ಠಾಣೆಯ ಇತರ ಸಿಬ್ಬಂದಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಕಾಪು ಸುತ್ತಮುತ್ತಲಿನ ಹೆಜಮಾಡಿ, ಪಡುಬಿದ್ರಿ, ಕುತ್ಯಾರು, ಚಂದ್ರನಗರ, ಕುರ್ಕಾಲು, ಶಿರ್ವ ಗ್ರಾಮಗಳಲ್ಲಿ 15ಕ್ಕೂ ಹೆಚ್ಚು ಮನೆಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನರಿಗೆ, ಒಟ್ಟು 30 ಮಂದಿಗೆ ಸೋಂಕು ಪತ್ತೆಯಾಗಿದೆ ಎಂದು ಕಾಪು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಬ್ರಾಯ ಕಾಮತ್‌ ಹೇಳಿದ್ದಾರೆ.

11.07.2020

ಒಟ್ಟು ಸೋಂಕಿತರು: 1567.

ಗುಣಮುಖರು: 1245

ಮಡತರು: 3

ಚಿಕಿತ್ಸೆ ಪಡೆಯುತ್ತಿರುವವರು: 319.

Latest Videos
Follow Us:
Download App:
  • android
  • ios