Bagalkote: ಬಾರದ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಊರ ತುಂಬ ಮೆರವಣಿಗೆ ಭರ್ಜರಿ ಊಟ!
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮಸ್ಥರು ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿರುವ ಪ್ರಸಂಗ ನಡೆದಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಜೂ.17): ರಾಜ್ಯದಲ್ಲಿ ಮಳೆ ಅಭಾವ ಸೃಷ್ಠಿಯಾಗಿರುವ ಬೆನ್ನಲ್ಲೆ ಅಲ್ಲಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಇನ್ನಿಲ್ಲದ ಸಂಪ್ರದಾಯಗಳನ್ನು ಆಚರಿಸುತ್ತಾ ಬಂದಿದ್ದು, ಇವುಗಳ ಮಧ್ಯೆ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರೆಲ್ಲ ಸೇರಿ ಕತ್ತೆಗಳ ಜೋಡಿಗೆ ಮದುವೆ ಮಾಡಿದ ಪ್ರಸಂಗ ನಡೆದಿದೆ. ಮಳೆಯ ಬರ ಆವರಿಸಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮಸ್ಥರು ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿರುವ ಪ್ರಸಂಗ ನಡೆದಿದೆ.
ಗ್ರಾಮಸ್ಥರ ಒಮ್ಮತದಂತೆ ಗ್ರಾಮದೇವತೆ ಹನುಮಾನ ದೇವಸ್ಥಾನ ಮುಂಭಾಗದಲ್ಲಿ ಇಂದು ಗಂಡು ಮತ್ತು ಹೆಣ್ಣು ಕತ್ತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ಬೆಳಿಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ನಡೆದ ಆರತಕ್ಷತೆಯಲ್ಲಿ ನಾವಲಗಿ ಹಾಗೂ ಸುತ್ತಲಿನ ಗ್ರಾಮಸ್ಥರೆಲ್ಲರೂ ಪಾಲ್ಗೊಂಡಿದ್ದರು. ಗಂಡಿನ ಕಡೆಯವರಾಗಿ ರಾಮಪ್ಪ ಭಜಂತ್ರಿ ನೇತೃತ್ವ ವಹಿಸಿದರೆ, ಹೆಣ್ಣಿನ ಕಡೆಯವರಾಗಿ ಸಣ್ಣಪ್ಪ ನಿಂತಿದ್ದರು.
ದೇವಸ್ಥಾನ ಮುಂಭಾಗದಲ್ಲಿ ಸ್ವಚ್ಛಂಧವಾಗಿ ಚಪ್ಪರದೊಂದಿಗೆ ರಂಗೋಲಿ ಹಾಕಿ, ಗಂಡಿನ ಕಡೆಯವರನ್ನು ಕತ್ತೆ ಜತೆ ವಾದ್ಯ ತಂಡದೊಂದಿಗೆ ಮದುವೆ ಮಂಟಪಕ್ಕೆ ಬರ ಮಾಡಿಕೊಂಡರು. ಬೀಗರನ್ನು ಎದುರುಗೊಂಡ ಜನರು ವರೋಪಚಾರಗಳನ್ನು ಮಾಡಿದರು.
ಇನ್ನು ಅರಿಷಿನ ನೀರು ಹಾಕಿ ಹೆಣ್ಣು ಕತ್ತೆಗೆ ಸೀರೆ, ಬಳಿ, ಮಂಗಳ ಸೂತ್ರದೊಂದಿಗೆ ಹಾರವನ್ನು ಹಾಕಿ, ಗಂಡು ಕತ್ತೆಗೆ ಬಟ್ಟೆ, ಟೊಪ್ಪಿಗೆ, ಟಾವೆಲ್ ಹಾಕಿದ್ದರು, ಇತ್ತ ಎರಡೂ ಕಡೆಯವರು ತಮ್ಮ ನೆಂಟರಿಷ್ಟರ ಮದುವೆಗಳಲ್ಲಿ ಪಾಲ್ಗೊಂಡಿರುವಂತೆ ಸಂಭ್ರಮಿಸಿದರು.
Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ,
ಕತ್ತೆಗಳ ಮದುವೆಯಲ್ಲಿ ಬಂದವರಿಗೆ ಊಟ, ಸಂಭ್ರಮದ ಮೆರವಣಿಗೆ
ಇನ್ನು ಇಷ್ಠೇ ಅಲ್ಲ ಕತ್ತೆಗಳ ನವ ಜೋಡಿಯ ವಿವಾಹದ ಖುಷಿ ಹಂಚಲು ಮದುವೆಗೆ ಬಂದವರಿಗೆ ಊಟ ಹಾಕಲಾಗಿತ್ತು. ಇವೆಲ್ಲದರ ನಂತರ ಇಡೀ ಗ್ರಾಮದ ತುಂಬೆಲ್ಲ ನವದಂಪತಿಗಳ ಮೆರವಣಿಗೆ ಕೂಡ ಜರುಗಿತು. ಈ ಸಂದರ್ಭ ಎಲ್ಲೆಂದರಲ್ಲಿ ಮನೆಗಳ ಮುಂದೆ ಮೆರವಣಿಗೆ ಮುಂದೆ ನೀರು ಹಾಕುವದರೊಂದಿಗೆ ಸ್ವಾಗತಿಸಿ ಮರ‍್ನಾಲ್ಕು ಸಾವಿರ ರೂಪಾಯಿಗಳಷ್ಟು ಮುಯ್ಯಿ ಸಹ ಸೇರಿದ್ದು, ವಿಶೇಷವಾಗಿತ್ತು.
ಬಿಜೆಪಿ ಪರಿಷ್ಕರಿಸಿದ್ದ ಎಲ್ಲ ಪಾಠಗಳಿಗೂ ಕೊಕ್: ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ
ಬರಗಾಲ ಎದುರಾಗುವ ಭೀತಿ ಕಾರಣ ಕತ್ತೆ ಮದುವೆ:
ಇದೇ ಸಂದರ್ಭ ಗುರು ಮರಡಿಮಠ ಮಾತನಾಡಿ, ಎಲ್ಲರೂ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಇನ್ನೇನು ಬೀಜ ಮೊಳಕೆಯೊಡೆದ ಸಂದರ್ಭದಲ್ಲಿ ಮಳೆ ದಿಢೀರನೆ ಕೈಕೊಟ್ಟಿದ್ದು ರೈತರಿಗೆ ಬರೆ ಎಳೆದಂತಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದಲ್ಲಿ ಬರಗಾಲ ಎದುರಾಗುವ ಭೀತಿ ಕಾರಣ ಕತ್ತೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಂತೆ ಈ ಕಾರ್ಯ ಮಾಡುತ್ತಿದ್ದೇವೆ ಎಂದರು.