Asianet Suvarna News Asianet Suvarna News

ರಾಜ್ಯದ ಹಾಲು ರಫ್ತು ಕುಸಿತಕ್ಕೆ ಬ್ಯಾಕ್ಟೀರಿಯಾ ಕಾರಣ

ಜಾನುವಾರುಗಳಿಂದ ಉತ್ಪಾದನೆಗೊಂಡ ಹಾಲನ್ನು ಕನಿಷ್ಠ ಅರ್ಧ ತಾಸಿನೊಳಗೆ ಶಿಥೀಲಿಕರಣ ಕೇಂದ್ರದಲ್ಲಿ ಶೇಖರಿಸಿಟ್ಟರೆ ಹಾಲಿನ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಸರಬರಾಜಿನಲ್ಲಿ ಆಗುವ ವಿಳಂಬ ಮತ್ತು ಅಶುದ್ಧತೆಯ ಪರಿಣಾಮದಿಂದ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವಂತೆ ಮಾಡುತ್ತದೆ

Bacterial Contamination of Indian Dairy Products
Author
Bengaluru, First Published Sep 24, 2018, 4:05 PM IST

ಟಿ. ನರಸೀಪುರ[ಸೆ.24]: ಹೈನುಗಾರಿಕೆಯಲ್ಲಿ ಉತ್ಪಾದನೆಗೊಂಡ ಹಾಲಿನ ಮೇಲೆ ನಿರಂತರವಾಗಿ ಆಗುತ್ತಿರುವಂತಹ ಬ್ಯಾಕ್ಟೀರಿಯಾಗಳ ದಾಳಿಯಿಂದಾಗಿ ರಾಜ್ಯದ ಹಾಲಿನ ಉತ್ಪನ್ನಗಳು ಅಂತರರಾಜ್ಯ ಹಾಗೂ ವಿದೇಶಗಳಿಗೆ ರಫ್ತಾಗುತ್ತಿಲ್ಲವೆಂದು ಮೈಮುಲ್ ಹೆಚ್ಚುವರಿ ನಿರ್ದೇಶಕ ಮಲ್ಲಿಕಾರ್ಜುನ ಆತಂಕ ವ್ಯಕ್ತಪಡಿಸಿದರು. 

ತಾಲೂಕಿನ ಎಂ. ಕೆಬ್ಬೇಹುಂಡಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ನಡೆದ 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಹಾಲು ಉತ್ಪಾದಕರ ಅಹವಾಲು ಸ್ವೀಕರಿಸಿ ಮಾತನಾಡಿ, ಜಾನುವಾರುಗಳಿಂದ ಉತ್ಪಾದನೆಗೊಂಡ ಹಾಲನ್ನು ಕನಿಷ್ಠ ಅರ್ಧ ತಾಸಿನೊಳಗೆ ಶಿಥೀಲಿಕರಣ ಕೇಂದ್ರದಲ್ಲಿ ಶೇಖರಿಸಿಟ್ಟರೆ ಹಾಲಿನ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಸರಬರಾಜಿನಲ್ಲಿ ಆಗುವ ವಿಳಂಬ ಮತ್ತು ಅಶುದ್ಧತೆಯ ಪರಿಣಾಮದಿಂದ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವಂತೆ ಮಾಡುತ್ತದೆ ಎಂದು ಹೇಳಿದರು. 

ವಿದೇಶಗಳಲ್ಲಿ ಬಹುತೇಕ ಹೈನುಗಾರಿಕೆ ಯಾಂತ್ರೀಕರಣಗೊಂಡಿದ್ದರಿಂದ ಹಾಲಿಗೆ ಅಲ್ಲ್ಯಾರೂ ಕೈಯನ್ನ ಹಾಕಲ್ಲ. ಉತ್ಪಾದನೆಗೊಂಡ ಹಾಲಿಗೆ ಮಾರುಕಟ್ಟೆಯಲ್ಲಿ ನಿಖರವಾದ ಬೆಲೆ ಸಿಗುವುದರಿಂದ ಜಾನುವಾರುಗಳಲ್ಲಿ ಪೋಷಕಾಂಶಗಳು ವೃದ್ಧಿಯಾಗಲು ಲವಣಾಂಶ ಮೇವನ್ನು ಕೊಟ್ಟು ಹಾಲಿನಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯದರ್ಶಿ ಎಸ್. ಸಿದ್ದರಾಜು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ 1,68,642 ರು. ನಿವ್ವಳ ಲಾಭ ಬಂದಿದ್ದು, ಉತ್ಪಾದಕರಿಗೆ ಶೇ.65 ರಷ್ಟನ್ನು ಬೋನಸ್ ರೂಪದಲ್ಲಿ ನೀಡಲಾಗುವುದು.

ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಯೇ ಮುಂದಿನ 20118-19ನೇ ಸಾಲಿನ ಅಂದಾಜು ಬಜೆಟ್‌ಗೆ ಅನುಮೋದನೆ ನೀಡಬೇಕು ಎಂದು ವಾರ್ಷಿಕ ವರದಿಯ ಮಾಹಿತಿಯನ್ನು ಸಭೆಗೆ ನೀಡಿದರು. ಸಂಘದ ಅಧ್ಯಕ್ಷ ಎಸ್. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸೋಮಶೇಖರಪ್ಪ, ನಿರ್ದೇಶಕರಾದ ಬಿ. ರೇವಣ್ಣ, ಬಿ. ಚನ್ನಬಸವಯ್ಯ, ಪಿ. ಮಹದೇವಯ್ಯ, ರಂಗಸ್ವಾಮಿ, ಶಿವನಂಜಮ್ಮ, ಕಮಲಮ್ಮ, ಎನ್. ಮಹೇಶ, ಗ್ರಾಪಂ ಸದಸ್ಯ ಬಸವರಾಜು, ಹಾಲು ಪರೀಕ್ಷಕ ಪಿ. ರಾಜು ಇದ್ದರು.
 

Follow Us:
Download App:
  • android
  • ios