Udupi: ಸತ್ಯವಾಯಿತು ಬಬ್ಬು ಸ್ವಾಮಿಯ ನುಡಿ, ಸೆರೆಯಾದ ಕಳ್ಳ
ಮಲ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನ,ಮೂಕಾಂಬಿಕ ಅಮ್ಮನವರ ಸನ್ನಿಧಿಯಲ್ಲಿ ಕಳ್ಳತನ ಮಾಡಿದ ಆರೋಪಿ ಬಂಧನವಾಗಿದ್ದು, ಇದರೊಂದಿಗೆ ಬಬ್ಬುಸ್ವಾಮಿ ದೈವದ ನುಡಿ ಸತ್ಯವಾಗಿದೆ ಎಂದು ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ (ಡಿ.31): ಮಲ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನ,ಮೂಕಾಂಬಿಕ ಅಮ್ಮನವರ ಸನ್ನಿಧಿಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಇದರೊಂದಿಗೆ ಬಬ್ಬುಸ್ವಾಮಿ ದೈವದ ನುಡಿ ಸತ್ಯವಾಗಿದೆ ಎಂದು ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ. ಈ ದೈವಸ್ಥಾನದ ಕಾಣಿಕೆ ಹುಂಡಿಯು ಸೆ. 6 ರಂದು ಕಳ್ಳತನವಾಗಿತ್ತು. ಈ ಬಗ್ಗೆ ಭಕ್ತರು ಮರುದಿನ ದೈವದರ್ಶನ ನಡೆಸಿ ದೂರು ನೀಡಿದ್ದರು. ದೈವವು ಮುಂದಿನ ನೇಮೋತ್ಸವದ ಒಳಗಾಗಿ ಕಳ್ಳನನ್ನು ದೈವಸ್ಥಾನದ ಎದುರಲ್ಲಿ ನಿಲ್ಲಿಸುವುದಾಗಿ ಅಭಯ ನೀಡಿತ್ತು.
ಡಿ. 28ರಂದು ಮಲ್ಪೆ ಠಾಣಾಧಿಕಾರಿ ಗುರುನಾಥ್ ಹಾದಿಮಾನಿ ತಂಡ ಆರೋಪಿ ಹರ್ಷಿತ್ ಎಂಬಾತನನ್ನು ಬೈಂದೂರಿನಲ್ಲಿ ಬಂಧಿಸಿದ್ದು, ದೈವಸ್ಥಾನಕ್ಕೆ ಕರೆತಂದಿದ್ದರು. ಆರೋಪಿಯು ಈ ದೈವಸ್ಥಾನದಲ್ಲಿ ಮತ್ತು ಜಿಲ್ಲೆಯ ಇತರ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು; ಅಲೋಚಿಸಿ ಸಿನಿಮಾ ಮಾಡ್ಬೇಕಾ?
ದೈವಸ್ಥಾನದ ಕಾಣಿಕೆ ಹುಂಡಿ ಕಳ್ಳತನವಾದಾಗ, ಭಕ್ತರೆಲ್ಲರೂ ಸೇರಿ ದೈವಕ್ಕೆ ದೂರು ನೀಡಿದ್ದೇವು. ದೈವದ ಕಾರ್ಣಿಕದಿಂದಲೇ ಕಳ್ಳನ ಬಂಧನವಾಗಿದೆ ಮತ್ತು ಆತನನ್ನು ಪೊಲೀಸರು ದೈವಸ್ಥಾನಕ್ಕೆ ಕರೆ ತಂದಿದ್ದಾರೆ ಎಂದು, ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
‘ಕಾಂತಾರ 2’ ಸಿನಿಮಾಗೆ ಬೇಕು ವೀರೇಂದ್ರ ಹೆಗ್ಗಡೆ ಅನುಮತಿ: ಈ ಕುರಿತು ದೈವ ಹೇಳಿದ್ದೇನು?
ಕರಾವಳಿ ಭಾಗದಲ್ಲಿ ದೈವದ ಕಾರಣಿಕದ ಬಗ್ಗೆ ಅನೇಕ ದಂತ ಕಥೆಗಳನ್ನು ಕೇಳುತ್ತೇವೆ. ಇದೀಗ ಬಬ್ಬುಸ್ವಾಮಿಯ ನುಡಿ ಸತ್ಯವಾದ ಅಪರೂಪದ ಪ್ರಸಂಗ ನಡೆದಿದ್ದು, ಜನರ ಶ್ರದ್ಧೆ ಮತ್ತು ಭಕ್ತಿಗೆ ಇಂಬು ನೀಡಿದಂತಾಗಿದೆ