ತುಮಕೂರು, [ಜ.20]: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ ಚಿಕಿತ್ಸೆಯಲ್ಲಿ ಬದಲಾವಣೆ ಮಾಡಲಾಗಿದೆ.

ಈಗ ಶ್ರೀಗಳಿಗೆ ಆಯುರ್ವೇದದ ಔಷಧಿಯನ್ನು ನೀಡಲಾಗುತ್ತಿದೆ ಎಂದು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಪವಾಡ ರೀತಿ ಸಿದ್ಧಗಂಗಾ ಶ್ರೀ ಆರೋಗ್ಯ ಚೇತರಿಕೆ: ವೈದ್ಯಲೋಕಕ್ಕೇ ಅಚ್ಚರಿ

ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಶ್ರೀಗಳನ್ನ ಇಂದು [ಭಾನುವಾರ] ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, 

ಡಾ. ಶಿವಕುಮಾರ ಶ್ರೀಗಳ ಆರೋಗ್ಯ ಕುರಿತಂತೆ ಸುತ್ತೂರು ಶ್ರೀಗಳು, ಕಿರಿಯ ಶ್ರೀಗಳು ಮತ್ತು ನಾನು ಅರ್ಧ ಗಂಟೆ ಕಾಲ ವೈದ್ಯರ ಜೊತೆ  ಚರ್ಚೆ ಮಾಡಿದ್ದೇವೆ.

ಈಗ ಶ್ರೀಗಳಿಗೆ ಆಯುರ್ವೇದದ ಔಷಧಿಯನ್ನ ನೀಡುತ್ತಿದ್ದೇವೆ. ಯಾರೂ ಆತಂಕ ಪಡಬೇಕಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಭಕ್ತರಿಗೆ ಶ್ರೀಗಳ ಬಗ್ಗೆ ಆತಂಕ ಬೇಡ, ಅವರು ಗುಣಮುಖರಾಗಲೆಂದು ನಾವೆಲ್ಲ ಪ್ರಾರ್ಥಿಸೋಣ. ದೈವ ಶಕ್ತಿಯೊಂದು ಶ್ರೀಗಳನ್ನ ಸುಧಾರಣೆ ಮಾಡುತ್ತಿದೆ. ಪ್ರಜ್ಞೆ 10  ದಿನಗಳಿಂದ ಹೇಗಿತ್ತೋ, ಹಾಗೆಯೇ ಇದೆ ಎಂದು ಮಾಹಿತಿ ನೀಡಿದರು.