ಮೋದಿ ಸರ್ಕಾರಕ್ಕೆ 6 ವರ್ಷ: ಕುಂದಾಪುರ ಆಟೋ ಚಾಲಕನಿಂದ 1 ರು. ಆಟೋ ಸೇವೆ
ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ತಿ ಆರು ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಇಲ್ಲೊಬ್ಬ ಅಭಿಮಾನಿ ತಮ್ಮದೇ ಆದ ವಿಶಿಷ್ಟಶೈಲಿಯಲ್ಲಿ ಮೆರೆದಿದ್ದಾರೆ. ಆ ಮೋದಿ ಅಭಿಮಾನಿಯೇ ಆಟೋ ಸತೀಶ್
ಕುಂದಾಪುರ(ಮೇ 29): ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ತಿ ಆರು ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಇಲ್ಲೊಬ್ಬ ಅಭಿಮಾನಿ ತಮ್ಮದೇ ಆದ ವಿಶಿಷ್ಟಶೈಲಿಯಲ್ಲಿ ಮೆರೆದಿದ್ದಾರೆ. ಆ ಮೋದಿ ಅಭಿಮಾನಿಯೇ ಆಟೋ ಸತೀಶ್.
ಆಟೋ ಸುತ್ತಲೂ ಮೋದಿ ಚಿತ್ರ ಹಾಕಿ ಬಾಡಿಗೆ ಮಾಡುತ್ತಿರುವ ಕುಂದಾಪುರದ ಈ ಆಟೋ ಚಾಲಕ ಸತೀಶ್ ಪ್ರಭು, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಕುಂದಾಪುರ ಭಾಗದಲ್ಲೆಲ್ಲಾ ಸತೀಶ್ ಪ್ರಭು ಎಂದರೆ ಥಟ್ಟನೆ ನೆನಪಿಗೆ ಬರೋದು ಪ್ರಧಾನಿ ನರೇಂದ್ರ ಮೋದಿಯವರು.
ವಿಮಾನ ಏರಿದ್ಮೇಲೆ ಒಂದು, ಇಳಿದ್ಮೇಲೆ ಇನ್ನೊಂದು: ಮಹಿಳೆಯ ಕಿರಿಕ್
ಅಷ್ಟರ ಮಟ್ಟಿಗೆ ಈ ಪ್ರಭು ನಮೋಗಾಗಿ ಸೇವೆ ನೀಡುತ್ತಾ ಬಂದಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಸರ್ಕಾರದ ಪ್ರತಿ ವರ್ಷಾಚರಣೆಯಲ್ಲೂ ಆಟೋ ಚಾಲಕ ಸತೀಶ್ ಪ್ರಭು ತಮ್ಮ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಭಿನ್ನ ಸೇವೆಯನ್ನು ನೀಡುತ್ತಾ ಪ್ರಧಾನಿ ಮೋದಿಯವರ ಮೇಲಿರುವ ಅಭಿಮಾನವನ್ನು ತೋರ್ಪಡಿಸುತ್ತಿದ್ದಾರೆ.
ಸಂಗ್ರಹವಾದ ಹಣ ಮೋದಿಗೆ ನೀಡುವ ಬಯಕೆ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಆರು ವರ್ಷ ಪೂರೆಸಿದ ಸಂಭ್ರಮಾಚರಣೆ ಸಲುವಾಗಿ ಹಂಗಳೂರು ವಿನಾಯಕ ಚಿತ್ರ ಮಂದಿರ ಬಳಿಯ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕ ಸತೀಶ್ ಪ್ರಭು 1 ವಾರ 1 ರುಪಾಯಿ ದರದಲ್ಲಿ ಬಾಡಿಗೆ ಸೇವೆಯನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 6 ವರ್ಷ ತುಂಬುತ್ತಲಿದೆ.
ಮಾವಿನ ಹಣ್ಣಿನಿಂದ ಕೊರೋನಾ: ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟ ನಾರಾಯಣಗೌಡ್ರು...!
ಈ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕ ಸತೀಶ್ ಪ್ರಭು ಅವರು ಸತತ 7 ದಿನಗಳ ಕಾಲ ಅಂದರೆ ಮೇ 26 ರಿಂದ ಜೂನ್ 1ರ ವರೆಗೆ 5 ಕಿ.ಮೀ. ವರೆಗೆ ಕೇವಲ 1 ರು. ದರದಲ್ಲಿ ರಿಕ್ಷಾ ಬಾಡಿಗೆ ಸೇವೆ ಒದಗಿಸುತ್ತಿದ್ದಾರೆ. ರಿಕ್ಷಾದಲ್ಲಿ ಡಬ್ಬವೊಂದನ್ನು ಇರಿಸಿಕೊಂಡಿರುವ ಸತೀಶ್ ಪ್ರಭು ಪ್ರಯಾಣಿಕರ ಕೈಯ್ಯಿಂದಲೇ ಒಂದು ರು.ನ್ನು ಡಬ್ಬಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಆರು ವರ್ಷಗಳಿಂದಲೂ ಪ್ರಭು ಸಂಗ್ರಹಿಸಿರುವ ಹಣವನ್ನು ಪ್ರಧಾನಿ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಕೊಡಬೇಕೆಂಬ ಆಸೆ ಅವರದು. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಿಲ್ಲ.
ಕಳೆದ ಬಾರಿ ನರೇಂದ್ರ ಮೋದಿಯವರು ಮಂಗಳೂರಿಗೆ ಬಂದಾಗ ಭೇಟಿಯಾಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಮುಂದೊಂದು ದಿನ ಪ್ರಧಾನಿ ಭೇಟಿಯಾಗುವ ಸಮಯ ಬಂದೇ ಬರುತ್ತೆ. ಆ ಸಮಯದಲ್ಲಿ ಆ ಹಣವನ್ನು ಅವರಿಗೆ ಕೊಡುತ್ತೇನೆ ಎನ್ನುತ್ತಾರೆ ಸತೀಶ್ ಪ್ರಭು. ಆಟೋ ಸೇವಾ ಕೈಂಕರ್ಯದಲ್ಲಿ ನಿರತರಾಗಿರುವ ಸತೀಶ್ ಪ್ರಭು ಅವರ ಕಾಯಕ ಮೋದಿ ಅಭಿಮಾನಿಗಳ ಶ್ಲಾಘನೆಗೆ ಪಾತ್ರವಾಗಿದೆ.