Asianet Suvarna News Asianet Suvarna News

Panchamasali Reservation: ಕಾನೂನಾತ್ಮಕವಾಗಿ 2ಎ ಮೀಸಲಾತಿಗೆ ಪ್ರಯತ್ನ: ವಚನಾನಂದ ಶ್ರೀ

*  ಸೂಕ್ತ ಮಾಹಿತಿ ಒದಗಿಸಿ ಶಾಶ್ವತ 2ಎ ಮೀಸಲಾತಿಗಾಗಿ ಪ್ರಯತ್ನ
*  ಹರಮಾಲೆ ಪಂಚಾಮಸಾಲಿ ಪೀಠದ ದೂರದೃಷ್ಟಿಯ ಸಂಕಲ್ಪ
*  ಹರಮಾಲೆ 1 ಕೋಟಿ ಜಪದಿಂದ ಸಕಲ ಸಂಪತ್ತು ಪ್ರಾಪ್ತಿ 
 

Attempting to Legally 2A Reservation to Panchamasali Community says Vachananand Swamiji grg
Author
Bengaluru, First Published Jan 3, 2022, 9:50 AM IST

ಹರಪನಹಳ್ಳಿ(ಡಿ.03):  ಕಾನೂನಾತ್ಕವಾಗಿ 2ಎ ಮೀಸಲಾತಿ(2A Reservation) ಹಾಗೂ ಒಬಿಸಿ(OBC) ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಇದರಿಂದ ಪಂಚಮಸಾಲಿ(Panchamasali) ಸಮಾಜಕ್ಕೆ ಶಾಶ್ವತವಾಗಿ ಮೀಸಲಾತಿ ಪಡೆಯಲು ಸಾಧ್ಯ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ(Vachananad Swamiji) ಹೇಳಿದರು. ತಾಲೂಕಿನ ಅರಸಿಕೇರಿ ಗ್ರಾಮದಲ್ಲಿ ಹರಜಾತ್ರ ಮಹೋತ್ಸವ(Harajatre Mahotsawa) ಹಾಗೂ ಪಂಚಮಸಾಲಿ ಶ್ರೀ ವಚನಾನಂದ ಸ್ವಾಮೀಜಿ ಅವರ ಚತುರ್ಥ ಪೀಠಾರೋಹಣ ಕಾರ್ಯಕ್ರಮ ನಿಮಿತ್ತ ಗ್ರಾಮದರ್ಶನಕ್ಕೆ ಆಗಮಿಸಿ ಮಾತನಾಡಿದರು.

2ಎ ಮೀಸಲಾತಿ ಸಂಬಂಧಿಸಿದಂತೆ ಕೇಂದ್ರದ ಹಿಂದುಳಿದ ಆಯೋಗದ ವಿವಿಧ ತಾಲೂಕುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಕಾನೂನು ತಜ್ಞರೊಂದಿಗೆ ಚರ್ಚಿಸಿ, ಸೂಕ್ತ ಮಾಹಿತಿ ಒದಗಿಸಿ ಶಾಶ್ವತವಾಗಿ 2ಎ ಮೀಸಲಾತಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

Panchamasali Reservation: 2ಎ ಮೀಸಲು ಸೌಲಭ್ಯ ಸಿಗೋವರೆಗೂ ಹೋರಾಟ: ಕೂಡಲ ಶ್ರೀ

ಸಣ್ಣ-ಪುಟ್ಟ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ಯುವ ಸಮೂಹ ದುಶ್ಚಟದ ದಾಸರಾಗಿದ್ದಾರೆ. ಅವರನ್ನು ಗುರುತಿಸಿ ಸಂಸ್ಕಾರವನ್ನು ಆಧ್ಯಾತ್ಮಿಕ ಮಾರ್ಗದ ಮೂಲಕ ನೀಡುವುದು ಎಲ್ಲ ಗುರುಪೀಠದ ಜಗದ್ಗುರುಗಳದ್ದಾಗಿರುತ್ತದೆ. ಈ ದಿಸೆಯಲ್ಲಿ ಪಂಚಾಮಸಾಲಿ ಪೀಠ(Panchamasali Peetha) ಮಹತ್ವದ ಹೆಜ್ಜೆ ಇಟ್ಟು ಸಾಗುತ್ತಿದೆ ಎಂದು ತಿಳಿಸಿದರು.

ಹರಜಾತ್ರೆಯ ನಿಮಿತ್ತ ಜ. 14 ಮತ್ತು 15ರಂದು ಪೀಠಾರೋಹಣ ಕಾರ್ಯಕ್ರಮದಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು, ರಾಷ್ಟ್ರೀಯ ಶಿಕ್ಷಣ, ಕೃಷಿ ಕೌಶಲ್ಯ, ಸಾಂಸ್ಕೃತಿಕ ಸಂಭ್ರಮ, ವಸ್ತು ಪ್ರದರ್ಶನ ನಡೆಯಲಿದೆ.

ಹರಮಾಲೆ ಪಂಚಾಮಸಾಲಿ ಪೀಠದ ದೂರದೃಷ್ಟಿಯ ಸಂಕಲ್ಪ. ಜಾತ್ಯತೀತವಾಗಿ(Secular) ಪಿಡುಗುಗಳಿಗೆ ಆಕರ್ಷಿತರಾಗಿರುವ ಯುವ ಪೀಳಿಗೆಯ ಆತ್ಮ ಶುದ್ಧೀಕರಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ವೇದಿಕೆಯಾಗಲಿದೆ. ಈಗಾಗಲೇ ಸಾವಿರಾರು ಯುವ ಮನಸುಗಳು 21, 15, 9, 3, 1 ದಿನಗಳ ಕಾಲ ಹರಮಾಲೆ ಧರಿಸಿ ವ್ರತ ಕೈಗೊಂಡಿದ್ದಾರೆ. ಹರಮಾಲೆ 1 ಕೋಟಿ ಜಪದಿಂದ ಸಕಲ ಸಂಪತ್ತು ಪ್ರಾಪ್ತಿಯಾಗಲಿದೆ. ಸಂಸ್ಕಾರದ ಭಾಗವಾಗಿ ಪ್ರತಿಯೊಬ್ಬರು ಹರಮಾಲೆ ಜಪದಲ್ಲಿ ಪಾಲ್ಗೊಂಡು ಜ್ಞಾನಮಾರ್ಗದಲ್ಲಿ ನಡೆಯಬೇಕು ಎಂದರು.

ಜ. 14ರಂದು ನಡೆಯುವ ಕಾರ್ಯಕ್ರಮಕ್ಕೆ ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪ(V Devendrappa) ಅವರಿಗೆ ಹರಮಾಲೆಯನ್ನು (ರುದ್ರಾಕ್ಷಿ) ಶ್ರೀಗಳು ಹಾಕಿದರು. ಅಂದಿನ ಒಂದು ದಿನದ ಪ್ರಸಾದ ವ್ಯವಸ್ಥೆ ಕಲ್ಪಿಸುವುದಾಗಿ ಸಂಸದರು ಶ್ರೀ ಗಳಿಗೆ ತಿಳಿಸಿದರು. ಹಿರೇಮೆಗಳಗೆರೆ, ಉಚ್ಚಂಗಿದುರ್ಗ, ಅರಸೀಕೆರೆ, ಮತ್ತಿಹಳ್ಳಿ, ಅಡವಿಹಳ್ಳಿ, ಗೌರಿಪುರ, ಮೈದೂರು, ಚಿಗಟೇರಿ, ಗ್ರಾಮಗಳಲ್ಲಿ ಶ್ರೀಗಳು ಗ್ರಾಮದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್‌, ತಾಲೂಕು ಅಧ್ಯಕ್ಷ ಪಾಟೀಲ್‌ ಬೆಟ್ಟನಗೌಡ, ವಕೀಲ ಎಂ. ಅಜ್ಜಣ್ಣ, ಜಿ.ಕೆ. ಮಲ್ಲಿಕಾರ್ಜುನ, ಮುಖಂಡರಾದ ಎ.ಜಿ. ಮಂಜುನಾಥ್‌, ಚೆನ್ನನಗೌಡ, ಶಶಿಧರ ಪೂಜಾರ, ಚಂದ್ರಶೇಖರ ಪೂಜಾರ್‌ ಮಂಜುನಾಥ್‌, ಅಂಗಡಿ ಪ್ರಕಾಶ್‌, ದೊಡ್ಡಜ್ಜರ ಹನುಮಂತಪ್ಪ, ಅಂಗಡಿ ಚಂದ್ರಪ್ಪ, ವೈ.ಡಿ. ಅಣ್ಣಪ್ಪ, ಪಿ.ಬಿ. ಗೌಡ್ರು, ಪ್ರಶಾಂತ ಪಾಟೀಲ್‌, ಎನ್‌. ಹರೀಶ್‌, ವಿ. ಮಂಜುನಾಥ್‌, ಮಹೇಶ ಪೂಜಾರ, ಶ್ಯಾನಬೋಗರ ಸುರೇಶ್‌, ಶಾಸಪ್ಪ ಪರಸಪ್ಪ, ರವಿ, ಹನುಮಂತಪ್ಪ, ಬುಳ್ಳಪ್ಪ, ಮಲ್ಲಿಕಾರ್ಜುನ್‌, ಉಚ್ಚಂಗಿದುರ್ಗ, ಅರಸಿಕೇರಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸೇರಿದಂತೆ ಉಪಸ್ಥಿತರಿದ್ದರು.

Panchamasali: ಸಿಎಂ ಆಗಿರುವವರೆಗೂ ಬೊಮ್ಮಾಯಿಗೆ ಬೆಂಬಲ: ಕೂಡಲ ಶ್ರೀ

ಮಾಜಿ ಸಿಎಂ ಬಿಎಸ್‌ವೈ ಕೈಕೊಟ್ಟಿದ್ದಾರೆ: ಕೂಡಲ ಶ್ರೀ

ಯಾದಗಿರಿ: ‘2ಎ’ ಮೀಸಲಾತಿ ವಿಚಾರ ಈಗಾಗಲೇ ಒಂದು ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ವಿಳಂಬವಾದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ್ಯ ಸ್ವಾಮೀಜಿ (Jayamrutunjaya Swamiji)  ಹೇಳಿದ್ದರು. 

ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕಲ್ಪಿಸುವ ವಿಶ್ವಾಸವಿದೆ. ಒಂದು ವೇಳೆ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ ತಿಂಗಳ ಒಳಗೆ ಸಿಎಂ ಮೀಸಲಾತಿ ನೀಡುತ್ತೆನೆಂದು ಸಿಎಂ ಭರವಸೆ ಕೊಟ್ಟಿದ್ದಾರೆ. ನಮಗೆ ಬಸವರಾಜ ಬೊಮ್ಮಾಯಿ ಅವರ ಮೇಲೆ ನಂಬಿಕೆ, ವಿಶ್ವಾಸವಿದೆ. ಹೀಗಾಗಿ ಸಿಎಂ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು.
 

Follow Us:
Download App:
  • android
  • ios