Asianet Suvarna News Asianet Suvarna News

Panchamasali: ಸಿಎಂ ಆಗಿರುವವರೆಗೂ ಬೊಮ್ಮಾಯಿಗೆ ಬೆಂಬಲ: ಕೂಡಲ ಶ್ರೀ

*  ಸಿಎಂ ಬದಲಾಯಿಸುವುದು ಮತ್ತು ಮುಂದುವರೆಸುವುದು ಆ ಪಕ್ಷದ ಆಂತರಿಕ ವಿಚಾರ
*  ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ಬೊಮ್ಮಾಯಿ
*  ನಮ್ಮ ಹೋರಾಟಕ್ಕೆ ಉತ್ತಮ ಫಲ ನೀಡಲು ಪ್ರಯತ್ನ 

Support Basavaraj Bommai as long as CM Says Jayamrutunjaya Swamiji grg
Author
Bengaluru, First Published Dec 29, 2021, 6:45 AM IST

ಬೆಂಗಳೂರು(ಡಿ.29):  ಬಸವರಾಜ ಬೊಮ್ಮಾಯಿ(Basavaraj Bommai) ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರೆಗೂ ನಮ್ಮ ಬೆಂಬಲ ಇರಲಿದೆ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ತಿಳಿಸಿದ್ದಾರೆ

ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತಂತೆ ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳನ್ನು ಬದಲಾಯಿಸುವುದು ಮತ್ತು ಮುಂದುವರೆಸುವುದು ಆ ಪಕ್ಷದ ಆಂತರಿಕ ವಿಚಾರವಾಗಿದೆ. ಈ ಸಂಬಂಧ ನಾವು ಪ್ರತಿಕ್ರಿಯೆ ನೀಡುವುದಕ್ಕೆ ಸರಿಯಾದ ಕ್ರಮವಲ್ಲ. ಆದರೆ, ಬಸವರಾಜ ಬೊಮ್ಮಾಯಿ ಎಲ್ಲಿಯವರೆಗೂ ಮುಖ್ಯಮಂತ್ರಿಯಾಗಿರುತ್ತಾರೋ ಅಲ್ಲಿಯವರೆಗೂ ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ಅವರಿಗಿರಲಿದೆ ಎಂದು ಹೇಳಿದರು.

Anti Conversion Bill: ಮತಾಂತರ ನಿಷೇಧ ಕಾಯ್ದೆಗೆ ಕೂಡಲ ಶ್ರೀ ಬೆಂಬಲ?

‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂಪ್ಪನನವರಿಗೆ(BS Yediyurappa) ಪಂಚಮಸಾಲಿ(Panchamasali) ಲಿಂಗಾಯತರಿಗೆ(Lingayat) ಮೀಸಲಾತಿ(Reservation) ನೀಡುವ ವಿಚಾರದಲ್ಲಿ ತಪ್ಪು ಮಾಹಿತಿಯಿತ್ತು. ಇದರಿಂದ ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ನಮ್ಮ ಎಲ್ಲ ಮನವಿಗಳನ್ನು ನೀಡಲು ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಹೋಗಬೇಕಾಗಿತ್ತು. ಆದರೆ, ಇದೀಗ ಬೊಮ್ಮಾಯಿಯವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ನಮ್ಮ ಹೋರಾಟಕ್ಕೆ ಉತ್ತಮ ಫಲ ನೀಡಲು ಪ್ರಯತ್ನ ನಡೆಸುತ್ತಿದ್ದಾರೆ. ಆದ್ದರಿಂದ ನಮ್ಮ ಬೆಂಬಲ ಅವರಿಗೆ ಇದೆ’ ಎಂದು ಸ್ವಾಮೀಜಿ ತಿಳಿಸಿದರು.

‘2ಎ’ ಮೀಸಲಾತಿ ಕಲ್ಪಿಸದಿದ್ದರೆ ಮತ್ತೆ ಹೋರಾಟ: ಕೂಡಲ ಶ್ರೀ

ಯಲಬುರ್ಗಾ: ‘2ಎ’ ಮೀಸಲಾತಿ ಚಳವಳಿ ಈಗಾಗಲೇ ಒಂದು ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದಾರೆ. ವಿಳಂಬವಾದಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ್ಯ ಸ್ವಾಮೀಜಿ(Jayamrutunjaya Swamiji)  ಹೇಳಿದರು.

ಡಿ.26 ರಂದು ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ 243ನೇ ಜಯಂತ್ಯುತ್ಸವ ಹಾಗೂ ಪಂಚಮಸಾಲಿ ಸಮಾಜ ಭವನದ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಮಸಾಲಿ(Panchamasali) ಸಮಾಜದವರು ಎಂದುಕೊಳ್ಳಲು ಹಿಂಜರಿಯುತ್ತಿದ್ದ ಜನರು ‘2ಎ’ ಮೀಸಲಾತಿ(2 A Reservation) ಪಾದಯಾತ್ರೆಯಿಂದ ಪಂಚಮಸಾಲಿ ಸಮಾಜದವರು ಎಂದು ಹೇಳಿಕೊಳುವ ಮೂಲಕ ಸಮಾಜ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಯಲಬುರ್ಗಾ ಪಂಚಮಸಾಲಿ ಸಮಾಜದ ತವರೂರು. ತುಮ್ಮರಗುದ್ದಿ ಗ್ರಾಮದಲ್ಲಿ ಒಂದೇ ವರ್ಷದಲ್ಲಿ ಚನ್ನಮ್ಮ ಪುತ್ಥಳಿ, ಪಾದಯಾತ್ರೆ ಕಾರ್ಯಕ್ರಮ, ಚೆನ್ನಮ್ಮ ಉತ್ಸವ ಮಾಡುವ ಮೂಲಕ 3 ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಣೆ ಮಾಡಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ ಎಂದು ಹೇಳಿದ್ದರು.

Resarvation For Panchamasali : ಪಂಚಮಸಾಲಿ ಮೀಸಲು ಬಗ್ಗೆ ಒಳ್ಳೆ ನಿರ್ಧಾರ: ಸಿಎಂ

ಪಂಚಮಸಾಲಿ ಸಮಾಜದವರು ಸಹೃದಯ ಉಳ್ಳವರು. ಬಡಮಕ್ಕಳಿಗೆ ಕೈಲಾದಷ್ಟು ಸಹಾಯ ಮಾಡುವ ಮೂಲಕ ಅವರಿಗೆ ಶಿಕ್ಷಣ ದೊರಕಿಸಿ ಕೊಡಲು ಕೈಜೋಡಿಸಬೇಕು. ಆರತಿ ಹಿಡಿಯುವ ಕೈಯಲ್ಲಿ ಪೆನ್ನು ಬರಬೇಕು. ಕುಂಭ ಹೋರುವ ತಲೆಯ ಮೇಲೆ ಪುಸ್ತಕಗಳು ಬರಬೇಕು. ಹೆಣ್ಣು ಮಕ್ಕಳು ಬುದ್ಧಿವಂತರಾದರೆ ಸಮಾಜದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸಮಾಜ ಸಂಘಟನೆ ಬಲಿಷ್ಠಗೊಳಿಸಲು ಶ್ರಮಿಸಬೇಕು ಎಂದರು.

ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ ಮಾತನಾಡಿ, ಜಯಂತಿ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಬೇಕು. ಉಳಿದ ಹಣವನ್ನು ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ ವಿದ್ಯಾಭ್ಯಾಸಕ್ಕೆ(Study) ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಮಾಜದ ಬಡವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕಾಗಿದೆ ಎಂದರು. ಸಮಾಜದ ಮುಖಂಡ ಬಸವಲಿಂಗಪ್ಪ ಬೂತೆ, ಸಮಾಜದ ಧರ್ಮದರ್ಶಿ ಕಳಕನಗೌಡ ಪಾಟೀಲ ಕಲ್ಲೂರು, ಕಳಕಪ್ಪ ಕಂಬಳಿ, ಶರಣಪ್ಪ ಈಳಿಗೇರ್‌, ರುದ್ರಗೌಡ ಸೋಲಬಗೌಡ್ರ ಮಾತನಾಡಿದರು.
 

Follow Us:
Download App:
  • android
  • ios