ಜೀವನ್ಮರಣದ ಹೋರಾಟದಲ್ಲಿ ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್, ಕಳೆದ ಮೂರು ತಿಂಗಳಿಂದ ಚಿಕಿತ್ಸೆ

ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಲು ತೆರಳಿದ್ದಾಗ ಆರೋಪಿಗಳಿಂದ ಹಲ್ಲೆಗೊಳಗಾಗಿ ಸತತ ಮೂರು ತಿಂಗಳಿಂದ ಐಸಿಯುನಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಇನ್ಸ್‌ಪೆಕ್ಟರ್ ಶ್ರೀಮಂತ ಇಲ್ಲಾಳ್  ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

assaulted CPI Srimantha Illal condition serious gow

ಬೆಂಗಳೂರು (ಡಿ.17): ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಲು ತೆರಳಿದ್ದಾಗ ಆರೋಪಿಗಳಿಂದ ಹಲ್ಲೆಗೊಳಗಾಗಿ ಸತತ ಮೂರು ತಿಂಗಳಿಂದ ಐಸಿಯುನಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಇನ್ಸ್‌ಪೆಕ್ಟರ್ ಶ್ರೀಮಂತ್‌ ಇಲ್ಲಾಳ  ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂರು ತಿಂಗಳಾದರು ಇನ್ಸ್‌ಪೆಕ್ಟರ್ ಆರೋಗ್ಯ ಇನ್ನೂ ಚೇತರಿಕೆ ಕಂಡಿಲ್ಲ.  ಸದ್ಯ ಅವರು ಓಲ್ಡ್‌ ಏರ್ಪೋರ್ಟ್ ರಸ್ತೆಯ ಖಾಸಗಿ ಅಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬುರಗಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಆಗಿರುವ  ಶ್ರೀಮಂತ್‌ ಇಲ್ಲಾಳ ಅವರಿಗೆ  ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆಕೋರರ ಬಂಧನದ ವೇಳೆ ಹಲ್ಲೆಯಾಗಿತ್ತು. ನಗರದ ಖಾಸಗಿ ಅಸ್ಪತ್ರೆಯಲ್ಲಿ ದಾಖಲಾಗಿರುವ ಇಲ್ಲಾಳ್ ಗೆ ಈವರೆಗೆ ವೈದ್ಯರು ನಾಲ್ಕು ಸರ್ಜರಿ ಮಾಡಿದ್ದಾರೆ. ಇಲ್ಲಾಳ್ ಮೆದುಳು ಭಾಗದಲ್ಲಿ ಹೆಚ್ಚಿನ ಗಾಯವಾಗಿದ್ದು, ಇನ್ನೂ ಅರೆಪ್ರಜ್ಞಾವಸ್ಥೆಯಲ್ಲಿದ್ದಾರೆ. 

ಕಳೆದ ಸೆಪ್ಟೆಂಬರ್ ನಲ್ಲಿ ಹಲ್ಲೆಗೊಳಗಾಗಿದ್ದ ಇನ್ಸ್‌ಪೆಕ್ಟರ್ ಶ್ರೀಮಂತ್‌ ಇಲ್ಲಾಳ ಅವರನ್ನು ಕುಟುಂಬ ಮತ್ತು ಪೊಲೀಸ್ ಇಲಾಖೆ ಬೆಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಿತ್ತು. ಎರಡೂವರೆ ತಿಂಗಳಿಂದ ಶ್ರೀಮಂತ್‌ ಇಲ್ಲಾಳ ಆರೋಗ್ಯದ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಮಲ್ಟಿಪಲ್ ಇಂಜುರಿಯಿಂದ ಬಳಲಿದ್ದ ಇನ್ಸ್‌ಪೆಕ್ಟರ್ ಆರೋಗ್ಯದಲ್ಲಿ ಅಲ್ಪ ಸ್ವಲ್ಪ ಸುಧಾರಣೆ ಕಂಡಿದೆ.  ಅದರೂ ಮೆದುಳು ಬಳಿ ಗಾಯವಾಗಿದ್ದರಿಂದ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಲಾಗಿದೆ. 

 ತಂದೆಯನ್ನ ನೆನೆದು ಮಗನ ದುಃಖ: ನಮಗೆ ನಮ್ಮ ತಂದೆಯೇ ಧೈರ್ಯವಾಗಿದ್ದರು, ಅದರೆ ಈಗ ಅವರನ್ನ ನೋಡಲು ನಮಗೆ ಬೇಜಾರಾಗುತ್ತಿದೆ ಎಂದು ಶ್ರೀಮಂತ್‌ ಇಲ್ಲಾಳ ಪುತ್ರ ಕಿರಣ್ ಅಳು ತೋಡಿಕೊಂಡಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿತ್ತು. ಅದ್ರೆ ಕಳೆದ ಎರಡು ದಿನಗಳಿಂದ ಮೆದುಳು ಭಾಗದಲ್ಲಿ ಸ್ವಲ್ಪ ಚಿಕಿತ್ಸೆ ಅವಶ್ಯಕತೆ ಇದ್ದು ಇಂದು ಸರ್ಜರಿ ನಡೆಯುತ್ತಿದೆ ಎಂದು ಶ್ರೀಮಂತ್‌ ಇಲ್ಲಾಳ ಪುತ್ರ ಕಿರಣ್ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಈವೆರೆಗೆ 31 ಆರೋಪಿಗಳ ಬಂಧನ: ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ್‌ ಇಲ್ಲಾಳ ಹಾಗೂ ಮಹಾಗಾಂವ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಆಶಾ ಮತ್ತು ಸಿಬ್ಬಂದಿಯವರು ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಲು ತೆರಳಿದ್ದಾಗ ಆರೋಪಿತರೆಲ್ಲರೂ ಗುಂಪಾಗಿ ಸೇರಿ ಅವರ ಮೇಲೆ ತೀವ್ರ ಹಲ್ಲೆ ಮಾಡಿದ 31 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಇವರನ್ನು ಬಂಧಿಸಲಾಗಿದೆ. 

ಅಕ್ರಮ ಗಾಂಜಾ ದಂಧೆಕೋರರ ದಾಳಿ: ಹಲ್ಲೆಗೀಡಾದ ಸಿಪಿಐ ಇಲ್ಲಾಳ್‌ಗೆ ಶ್ವಾಸನಾಳ ಶಸ್ತ್ರ ಚಿಕಿತ್ಸೆ

ಪೊಲೀಸರು ದಾಳಿ ಮಾಡಲು ಬಂದಾಗ ಆರೋಪಿತರೆಲ್ಲರೂ ಕಲ್ಲು ತೂಟಾಟ ಮಾಡಿದಾಗ ಪೊಲೀಸ್‌ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡರೆ ಸಿಪಿಐ ಶ್ರೀಮಂತ್‌ ಇಲ್ಲಾಳ ಇವರು ಸಿಕ್ಕಿಬಿದ್ದಿದ್ದು, ಇವರಿಗೆ ಆರೋಪಿತರೆಲ್ಲರೂ ಸೇರಿ ಹಂಟರ್‌, ಕಟ್ಟಿಗೆಯಿಂದ, ಕೈಯಿಂದ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದು ಅವರ ಹತ್ತಿರ ಇದ್ದ ಲೋಡೆಡ್‌ ಪಿಸ್ತೂಲ್‌, ಮೊಬೈಲ್‌, ಹಣ, ಬಂಗಾರದ ಚೈನ್‌ ಮತ್ತು ಎರಡು ರಿಂಗ್‌, ವಾಚ್‌ ಮತ್ತು ಜಾಕೇಟ್‌ ದೋಚಿಕೊಂಡು ಹೋಗಿದ್ದರು.

ಮಣಿಪಾಲ್ ಆಸ್ಪತ್ರೆಯಲ್ಲಿರುವ ಆನಂದ್ ಮಾಮನಿ ಮತ್ತು ಶ್ರೀಮಂತ ‌ಇಲ್ಲಾಳ್ ಆರೋಗ್ಯ ವಿಚಾರಿಸಿದ ಸಿಎಂ

ಆರೋಪಿಗಳಿಂದ ಲೋಡೆಡ್‌ ಪಿಸ್ತೂಲ್‌, ಒನ್‌ ಪ್ಲಸ್‌ ಮೊಬೈಲ್‌, 30ಗ್ರಾಂ. ಬಂಗಾರದ ಚೈನ್‌, 10 ಗ್ರಾಂ. ಎರಡು ಬಂಗಾರದ ರಿಂಗ್‌, ವಾಚ್‌, ಕಟ್ಟಿಗೆಗಳು, ಹಂಟರ್‌ಗಳು, ಟಾಚ್‌ರ್‍ಗಳನ್ನು ಹೀಗೆ ಒಟ್ಟು ಅಂದಾಜು ಕಿಮ್ಮತ್ತು 2.5 ಲಕ್ಷ ಕಿಮ್ಮತ್ತಿನ ವಸ್ತುಗಳನ್ನು ಆರೋಪಿತರಿಂದ ವಶಪಡಿಸಿಕೊಳ್ಳಲಾಗಿತ್ತು. 

Latest Videos
Follow Us:
Download App:
  • android
  • ios