ಚಿಕ್ಕಮಗಳೂರು ತಾಲೂಕಿನ ಕಾಫಿ ತೋಟದಲ್ಲಿ ತೋಟದ ಮಾಲೀಕ ದಲಿತ ಗರ್ಭೀಣಿ ಹಲ್ಲೆ ಮಾಡಿದ್ದಾರೆ. ಆಕೆಗೆ ಗರ್ಭಪಾತ ಕೂಡ ಆಗಿದೆ. ಆದರೆ, ತೋಟದ ಮಾಲೀಕನ ವಿರುದ್ಧ ದೂರು ದಾಖಲಾಗಿ ಎರಡು ದಿನವಾದರೂ ಆತನನ್ನ ಬಂಧಿಸಿಲ್ಲ ಎಂದು ಸಾವಿರಾರು ಜನ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.13): ಚಿಕ್ಕಮಗಳೂರು ತಾಲೂಕಿನ ಕಾಫಿ ತೋಟದಲ್ಲಿ ತೋಟದ ಮಾಲೀಕ ದಲಿತ ಗರ್ಭೀಣಿ ಹಲ್ಲೆ ಮಾಡಿದ್ದಾರೆ. ಆಕೆಗೆ ಗರ್ಭಪಾತ ಕೂಡ ಆಗಿದೆ. ಆದರೆ, ತೋಟದ ಮಾಲೀಕನ ವಿರುದ್ಧ ದೂರು ದಾಖಲಾಗಿ ಎರಡು ದಿನವಾದರೂ ಆತನನ್ನ ಬಂಧಿಸಿಲ್ಲ ಎಂದು ಸಾವಿರಾರು ಜನ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ 6 ದಲಿತ ಕುಟುಂಬಗಳ 14 ಜನರನ್ನ ಇಡೀ ದಿನ ತೋಟದ ಮಾಲೀಕ ಜಗದೀಶ್ ಗೌಡ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ, ಕೇಳಿದ ಕೂಡಲೇ ಮೊಬೈಲ್ ಹಿಂದಿರುಗಿಸಲಿಲ್ಲ ಎಂದು ಎರಡು ತಿಂಗಳ ಗರ್ಭೀಣಿ ಮೇಲೂ ಹಲ್ಲೆ ಮಾಡಿದ್ದರು. 

ಆದರೆ, ತೋಟದ ಮಾಲೀಕನ ಮೇಲೆ ಪ್ರಕರಣ ದಾಖಲಾಗಿ ಎರಡು ದಿನವಾದರೂ ಪೊಲೀಸರು ಅವರನ್ನ ಅರೆಸ್ಟ್ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ದಲಿತ ಸಂಘಟನೆಗಳು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಬಾಳೆಹೊನ್ನೂರು ಚಲೋ ಎಂಬ ಬೃಹತ್ ಜಾಥಾ ಕೈಗೊಂಡಿದ್ದಾರೆ. ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹತ್ತಕ್ಕೂ ಹೆಚ್ಚು ದಲಿತ ಸಂಘಟನೆಗಳು ಜಾಥಾದಲ್ಲಿ ಪಾಲ್ಗೊಂಡು ಕೂಡಲೇ ಆರೋಪಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Chikkamagaluru: ಶ್ರೀ ದೇವೀರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಪಿಎಸ್‌ಐ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ: ಕಾಫಿ ತೋಟದ ಮಾಲಿಕರಾದ ಜಗದೀಶ್‌ಗೌಡ ಮಗ ತಿಲಕ್ ಗೌಡರನ್ನು ಬಂಧಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಆದಿ ದ್ರಾವಿಡ ಸೇವಾ ಸಂಘ, ದಲಿತ ಮತ್ತು ಪ್ರಗತಿಪರ ಸಂಘಗಳ ಒಕ್ಕೂಟ, ಡಿಎಸ್ಎಸ್, ಸಿಪಿಐ ರೆಡ್ ಸ್ಟಾರ್, ಬೀಮ್ ಆರ್ಮಿ ಸದಸ್ಯುರುಗಳು ಮತ್ತು ಕೂಲಿಕಾರ್ಮಿಕರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಭೂ ಮಾಲಿಕರ ವಿರುದ್ದ ಘೋಷಣೆ ಕೂಗಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಬೀಮ್ ಆರ್ಮಿ ಜಿಲ್ಲಾಧ್ಯಕ್ಷ ಗಿರೀಶ್ ಮಾತನಾಡಿ, ಹಲ್ಲೆ ನಡೆದು ಎರಡು ದಿನ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ ಹಾಗೂ ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಮಾನವೀಯತೆ ಮರೆತು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು ಘನಘೋರ ಅಪರಾಧವಾಗಿದೆ.

ಚಾಮರಾಜನಗರದ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರಿಲ್ಲ: ಖಾಯಂ ಅಧಿಕಾರಿ ನೇಮಿಸದೆ ಸರ್ಕಾರದ ನಿರ್ಲಕ್ಷ್ಯ

ಪೋಲಿಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸ್ಥಳಕ್ಕೆ ಬರುವುದಿಲ್ಲವೆಂದು ಮಾಹಿತಿ ತಿಳಿದಾಕ್ಷಣ ಆಕ್ರೋಶಗೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಿದರು. ಈ ಸಂದರ್ಭದಲ್ಲಿ ಅರ್ಧ ಗಂಟೆಗಳ ಕಾಲ ಭಾರಿ ಮಳೆ ಸುರಿದಿದ್ದು ಮಳೆಯ ನಡುವೆಯೂ ರಸ್ತೆ ತಡೆ ನಡೆಸಿದರು. ಎಎಸ್‌ಪಿ ಗುಂಜನ್ ಆರ್ಯ, ವೃತ್ತ ನಿರೀಕ್ಷಕ ವಸಂತ್ ಶಂಕರ್ ಭಗವತ್, ಪ್ರತಿಭಟನಾಕಾರರ ನಡುವೆ ಮಾತುಕತೆ ನಡೆಸಿ ಎರಡು ದಿನಗಳೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರೂ ಸಹ ಪ್ರತಿಭಟನಾಕಾರರ ಆಕ್ರೋಶ ಕಡಿಮೆಯಾಗಿರಲಿಲ್ಲ. ಠಾಣಾಧಿಕಾರಿ ನಿತ್ಯಾನಂದಗೌಡ ಸೇರಿದಂತೆ ಕೊಪ್ಪ ವಿಭಾಗದ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಭದ್ರತೆಗೆ ತೊಡಗಿಸಿಕೊಂಡಿದ್ದರು.