ಈಗಿನ ಜನರೇಷನ್‌ಗೆ ಟೆಕ್ನಿಕಲ್ ಎವಿಡೆನ್ಸ್ ತುಂಬಾನೆ ಮುಖ್ಯ ಅದ್ರಲ್ಲೂ ಕಳ್ಳಕಾಕರ ಪತ್ತೆ ಕಾರ್ಯದಲ್ಲಿ ಸಿಸಿ ಕ್ಯಾಮೆರಗಳು ತನ್ನದೆಯಾದ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜ.17): ಈಗಿನ ಜನರೇಷನ್‌ಗೆ ಟೆಕ್ನಿಕಲ್ ಎವಿಡೆನ್ಸ್ ತುಂಬಾನೆ ಮುಖ್ಯ ಅದ್ರಲ್ಲೂ ಕಳ್ಳಕಾಕರ ಪತ್ತೆ ಕಾರ್ಯದಲ್ಲಿ ಸಿಸಿ ಕ್ಯಾಮೆರಗಳು ತನ್ನದೆಯಾದ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತೆ. ಆದ್ರೆ ಚಾಮರಾಜನಗರದ ಭಾಗಶಃ 80 ಪರ್ಸೆಂಟ್ ಸಿಸಿ ಕ್ಯಾಮೆರಗಳೆ ವರ್ಕ್ ಆಗ್ತಾಯಿರ್ಲಿಲ್ಲ. ಕಳ್ಳಕಾಕಾರ ಕಾಟ ವೀಪರಿತವಾಗಿತ್ತು. ಈ ಕುರಿತು ಏಷಿಯಾನೆಟ್ ಸುವರ್ಣ ನ್ಯೂಸ್ ಅಕ್ಟೋಬರ್ ತಿಂಗಳಲ್ಲಿ ವರದಿ ಬಿತ್ತರಿಸಿತ್ತು. ಈಗ ಎಚ್ಚೆತ್ತ ಖಾಕಿ ಪಡೆ ಹೊಸದಾಗಿ 55 ಸಿಸಿ ಕ್ಯಾಮೆರಾ ಅಳವಡಿಸಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ಅಕ್ರಮಗಳನ್ನು ತಡೆಗಟ್ಟಲು ಹಾಗೂ ಅಪಘಾತ, ಕಳ್ಳಕಾಕರು ಇತ್ಯಾದಿ ಮಾಹಿತಿ ಕಲೆ ಹಾಕಲು ಪೊಲೀಸ್ ಇಲಾಖೆ ಹಾಗೂ ನಗರ ಸಭೆಯಿಂದ ಜಿಲ್ಲಾ ಕೇಂದ್ರ ಚಾಮರಾಜನಗರದ ಪ್ರಮುಖ ವೃತ್ತ, ರಸ್ತೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ 49 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಆದ್ರೆ ಸರಿಯಾದ ರೀತಿಯಲ್ಲಿ ಸರ್ವಿಸ್ ಮಾಡಿಸದ ಕಾರಣ 80 ಪರ್ಸೆಂಟ್ ಅಷ್ಟು ಸಿಸಿ ಕ್ಯಾಮರಗಳು ಕಾರ್ಯ ನಿರ್ವಹಿಸುತ್ತಲೇ ಇರಲಿಲ್ಲ. ಇದರಿಂದ ಕಳ್ಳಕಾಕರಿಗೆ ಚಾಮರಾಜನಗರ ಸ್ವರ್ಗದಂತೆ ಭಾಸವಾಗಿತ್ತು. ಆದರೆ ಏಷಿಯಾನೆಟ್ ಸುವರ್ಣ ನ್ಯೂಸ್ ಅಕ್ಟೋಬರ್ ತಿಂಗಳಲ್ಲಿ ವರದಿ ಬಿತ್ತರಿಸಿತ್ತು.

ಇದೀಗಾ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ 55 ನೂತನ ಅಡ್ವಾನ್ಸ್ ಕ್ಯಾಮರಗಳನ್ನ ಅಳವಡಿಸಿದ್ದು ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಫಲಶೃತಿ ನೀಡಿದೆ. ಇನ್ನೂ ಸಿಸಿ ಕ್ಯಾಮೆರಾಗಳು ದುರಸ್ತಿಯಲ್ಲಿ ಇರೋದ್ರಿಂದ ಪೊಲೀಸರು ಅಂದ್ರೆ ಕಳ್ಳಕಾಕರಿಗೆ ಭಯಾನೇ ಇಲ್ಲಾದಂತಾಗಿತ್ತು. ಚಾಮರಾಜನಗರದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ನಡುವೆ 40 ದಿನಗಳಲ್ಲಿ 18ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣ ದಾಖಲಾಗಿ ಪೊಲೀಸ್ ಇಲಾಖೆಯು ಮುಜುಗರಕ್ಕೆ ಒಳಗಾಗಿತ್ತು. ಒಂದೇ ಒಂದು ಮಾಹಿತಿ ಸಿಗದೆ ಪರಿಪಾಟಲು ಪಡಬೇಕಾಗಿತ್ತು. ಆದ್ರೆ ಈಗ ನೂತನವಾಗಿ ಅಡ್ವಾನ್ಸ್ ಕ್ಯಾಮರ ಅಳವಡಿಸಿದ್ದು ಈ ಕ್ಯಾಮೆರ ದೃಶ್ಯವನ್ನ ಸೆರೆ ಹಿಡಿಯುವುದು ಅಷ್ಟೇ ಅಲ್ಲದೆ ಪ್ರತಿಯೊಂದು ವಾಹನದ ಸಂಖ್ಯೆಯನ್ನ ಸೇವ್ ಮಾಡಿ ಅದರ ಮಾಲೀಕರ ಮಾಹಿತಿ ಹಾಗೂ ಆ ವಾಹನದ ಮೇಲೆ ಎಷ್ಟು ಪ್ರಕರಣಗಳಿವೆ ಎಂಬ ಮಾಹಿತಿಯನ್ನು ಸಹ ನೀಡಲಿದೆ. 

ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮ ತೊರೆಯಬಾರದು ಎಂದು ಕುಟುಂಬಗಳಿಗೆ ಧೈರ್ಯ ತುಂಬಿದ ಅಧಿಕಾರಿಗಳು!

ಇದರಿಂದ ಪೊಲೀಸರ ತನಿಖೆಗೆ ಸಾಕಷ್ಟು ಅನುಕೂಲ ಆಗಲಿದೆ. ಒಟ್ಟಾರೆ ಅಡ್ವಾನ್ಸ್ ಕ್ಯಾಮೆರಾ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ಆನೆ ಬಲ ಬಂದಂತಾಗಿದ್ದು, ಕ್ರೈಂ ಪತ್ತೆ ಕಾರ್ಯದಲ್ಲಿ ಸಹಾಯವಾಗಲಿದೆ. ರಾಜ್ಯದಲ್ಲಿ ಇತ್ತಿಚ್ಚಿಗೆ ಕ್ರೈಂ ಪ್ರಕರಣಗಳು ಕೂಡ ಹೆಚ್ಚಾಗ್ತಿದ್ದು ಇಂತಹ ಸಿಸಿಟಿವಿ ಅಳವಡಿಕೆಯಿಂದ ಕ್ರೈಂ ಮಾಡುವವರ ಮೇಲೆ ಕಣ್ಣೀಡಬಹುದಾಗಿದೆ. ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಫಲಶೃತಿ ಕೊಟ್ಟಿದ್ದು ಅದರ ಪರಿಣಾಮವೆ 55 ನೂತನ ಕ್ಯಾಮರಾ ಕಣ್ಗಾವಲಿನಿಂದ ಚಾಮರಾಜನಗರ ಇರಲಿದೆ.