ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮ ತೊರೆಯಬಾರದು ಎಂದು ಕುಟುಂಬಗಳಿಗೆ ಧೈರ್ಯ ತುಂಬಿದ ಅಧಿಕಾರಿಗಳು!

ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ಬಗ್ಗೆ ನಿಮ್ಮ ಏಷಿಯಾನೆಟ್ ಸುವರ್ಣ ನ್ಯೂಸ್ ಸಮಗ್ರ ವರದಿ ಪ್ರಸಾರ ಮಾಡುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತಿದೆ. ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ದ ಸಮರ ಸಾರಿದೆ. 

Torture by microfinance companies Officials reassure families not to leave the village

ವರದಿ: ಪುಟ್ಟರಾಜು.ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜ.11): ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ಬಗ್ಗೆ ನಿಮ್ಮ ಏಷಿಯಾನೆಟ್ ಸುವರ್ಣ ನ್ಯೂಸ್ ಸಮಗ್ರ ವರದಿ ಪ್ರಸಾರ ಮಾಡುತ್ತಿದ್ದಂತೆ ಚಾಮರಾಜನಗರ ಜಿಲ್ಲಾಡಳಿತ ಎಚ್ಚೆತ್ತಿದೆ. ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ದ ಸಮರ ಸಾರಿದೆ. ಊರು ತೊರೆಯುತ್ತಿದ್ದ ಕುಟುಂಬಗಳಿಗೆ ಧೈರ್ಯ ಹೇಳಿದೆ. ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಲು ಸಹಾಯವಾಣಿ ತೆರದು ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ. ಇತ್ತೀಚೆಗೆ ಹಳ್ಳಿ ಹಳ್ಳಿಗಳಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳು ಬಡವರು ಕೂಲಿ ಕಾರ್ಮಿಕರಿಗೆ  ಸಾಲ  ನೀಡಿ ಈಗ ಸಾಲದ ಶೂಲಕ್ಕೇ ಏರಿಸುತ್ತಿವೆ.

ಸಾಲ ಮರುಪಾವತಿಗೆ ಇವರು ನೀಡುವ ಕಿರುಕುಳದಿಂದ ಬೇಸತ್ತು ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಊರನ್ನೇ ಖಾಲಿ ಮಾಡಿವೆ. ಶಾಲೆಯಲ್ಲಿ ಓದುತ್ತಿದ್ದ  ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಕರೆದೊಯ್ದಿದ್ದಾರೆ. ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಚಾಮರಾಜನಗರ ಜಿಲ್ಲಾಡಳಿತ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಸಮರವನ್ನೇ ಸಾರಿದೆ.  ಸಾಲ ವಸೂಲಾತಿಗೆ ದೌರ್ಜನ್ಯ, ಕಿರುಕುಳ ಮಾನಸಿಕ ಹಿಂಸೆ ನೀಡಿದರೆ ದೂರು ನೀಡಲು ಸಹಾಯವಾಣಿ ತೆರೆದಿದೆ. ಗ್ರಾಮಗಳಲ್ಲಿ ಮಾಹಿತಿ ಸಂಗ್ರಹಿಸಲು  ಅಧಿಕಾರಿಗಳ ತಂಡ ರಚನೆ ಮಾಡಿದೆ. 

ಅದರಲ್ಲಿ ಚಾಮರಾಜನಗರ ತಹಸಿಲ್ದಾರ್ ಗಿರಿಜಾ ನೇತೃತ್ವದ ತಂಡ ದೇಶವಳ್ಳಿ ಹಾಗು ಹೆಗ್ಗವಾಡಿ ಗ್ರಾಮಕ್ಕೆ ಭೇಟಿ ನೀಡಿ ಕಿರುಕುಳದಿಂದ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದೆ. ಯಾರು ಸಹ ಗ್ರಾಮ ತೊರೆಯಬಾರದು, ನಿಮ್ಮ ಜೊತೆ ನಾವಿದ್ದೇವೆ, ನಿಮಗೆ ಕಿರುಕುಳ ನೀಡಿದಲ್ಲಿ ನಮಗೆ ದೂರು ನೀಡಿ, ಸಾಲ ಮರುಪಾವತಿಗೆ ಕಾಲಾವಾಕಾಶ ಕೊಡಿಸುತ್ತೇವೆ ಎಂದು ಭರವಸೆ ನೀಡಿದೆ. ಜೊತೆಗೆ ಕಿರುಕುಳ ನೀಡುವ ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ. ಇದೇ ವೇಳೆ ಕಿರುಕುಳದಿಂದ ನೊಂದು ತಂದೆ ತಾಯಿಯ ಸಾಲ ತೀರಿಸಲು ಕಿಡ್ನಿ ಮಾರುತ್ತೇನೆ.

ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್‌: ಸಾಲ ತೀರಿಸಲಾಗದೆ ಗ್ರಾಮ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು

ಪರ್ಮಿಷನ್ ಕೊಡಿಸಿ ಎಂದು ಏಷಿಯಾನೆಟ್ ಸುವರ್ಣ ನ್ಯೂಸ್ ಮುಂದೆ  ಅಳಲು ತೋಡಿಕೊಂಡಿದ್ದ ಬಾಲಕನ ಮನೆಗು ಅಧಿಕಾರಿಗಳ ತಂಡ ಭೇಟಿ ನೀಡಿ  ಬಾಲಕನಿಗು ಸಾಂತ್ವನ ಹೇಳಿದ ಅಧಿಕಾರಿಗಳು ಬಾಲಕ ಕುಟುಂಬಕ್ಕೆ ಗ್ರಾಮ ತೊರೆಯದಂತೆ ಧೈರ್ಯ ತುಂಬಿದ್ದಾರೆ.  ಸಾಲ ಮರುಪಾವತಿಗೆ  ಕಾಲವಾಕಾಶ ಕೊಡಿಸುವುದಾಗಿ ಭರವಸೆ ನೀಡಿದ್ದು ಇದಕ್ಕೆಲ್ಲ ಕಾರಣವಾದ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ  ಬಾಲಕ  ಧನ್ಯವಾದ ಹೇಳಿದ್ದಾನೆ. ಗ್ರಾಮ ತೊರೆದಿರುವ ಕುಟುಂಬಗಳನ್ನು ವಾಪಸ್ ಕರೆಸಲು ಹಾಗು ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಸದ್ಯದಲ್ಕೇ ಗ್ರಾಮ ಸಭೆ ನಡೆಸಲು  ಅಧಿಕಾರಿಗಳು ಮುಂದಾಗಿದ್ದಾರೆ ಒಟ್ಟಾರೆ ಮೈಕ್ರೋಫೈನಾನ್ಸ್ ಕಂಪನಿಗಳು  ನೀಡುತ್ತಿರುವ ಕಿರುಕುಳದ ವಿರುದ್ದ ಜಿಲ್ಲಾಡಳಿತ ಸಮರ ಸಾರಿದೆ.  ಇದರಿಂದ ಎಷ್ಟೋ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಇದು ನಿಮ್ಮ ಏಷಿಯಾನೆಟ್ ಸುವರ್ಣ ನ್ಯೂಸ್ ವರದಿಯ ಫಲಶೃತಿ.

Latest Videos
Follow Us:
Download App:
  • android
  • ios