ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಗತಿಗೆ ನೆರವಾಗಬೇಕು : ಪ್ರೊ.ಬಿ. ಶಂಕರ್
ವಿನೂತನ ತಂತ್ರಜ್ಞಾನ ಅಭಿವೃದ್ಧಿ ಪಡಿಸುವತ್ತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಲಿ ಎಂದು ಮೈಸೂರು ವಿವಿ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ.ಬಿ. ಶಂಕರ್ ತಿಳಿಸಿದರು.
ಮೈಸೂರು : ವಿನೂತನ ತಂತ್ರಜ್ಞಾನ ಅಭಿವೃದ್ಧಿ ಪಡಿಸುವತ್ತ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಲಿ ಎಂದು ಮೈಸೂರು ವಿವಿ ಸ್ಕೂಲ್ ಆಫ್ ಪ್ಲಾನಿಂಗ್ ಅಂಡ್ ಆರ್ಕಿಟೆಕ್ಚರ್ ನಿರ್ದೇಶಕ ಪ್ರೊ.ಬಿ. ಶಂಕರ್ ತಿಳಿಸಿದರು.
ಮೈಸೂರು ವಿವಿ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೇವಲ ಪಠ್ಯವನ್ನು ಅಧ್ಯಯನ ಮಾಡಿದರೆ ಸಾಲದು. ಜ್ಞಾನದೊಂದಿಗೆ ಕೌಶಲ್ಯವನ್ನೂ ರೂಢಿಸಿಕೊಳ್ಳುವುದು ಇಂದಿನ ಅಗತ್ಯ. ಜಗತ್ತು ಹೊಸತನವನ್ನು ಅನ್ವೇಷಣೆ ಮಾಡುತ್ತಿರುವ ಕಾಲಘಟ್ಟದಲ್ಲೇ ನಾವು ಸ್ಥಳೀಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಇವುಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್ ಮತ್ತು ರೋಬಾಟಿಕ್ ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ಭಾರತದ ಎಂಜಿನಿಯರ್‌ಗಳಿಗೆ ಜಾಗತಿಕ ಮಾನ್ಯತೆ ಇದೆ. ಕ್ರಿಯಾಶೀಲರಿಗೆ ವಿಶ್ವದಾದ್ಯಂತ ಉದ್ಯೋಗ ಅವಕಾಶಗಳು ತೆರೆದಿವೆ. ಹಾಗಾಗಿ ಟೀಂ ವರ್ಕ್ ಮೂಲಕ ವಿದ್ಯಾರ್ಥಿಗಳು ಹೊಸ ಸಂಶೋಧನೆಯತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಮೈಸೂರು ವಿವಿ ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕ ಪ್ರೊ.ಟಿ. ಅನಂತಪದ್ಮನಾಭ, ಸಂತೋಷ್, ಸುಮಾ, ಸಚಿನ್, ನಿತಿನ್, ರಾಕೇಶ್, ಸಂಪನ್ಮೂಲ ವ್ಯಕ್ತಿ ಅಮಿತ್ ಶರ್ಮಾ ಇದ್ದರು.
ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ
ಮಧುಗಿರಿ : ಸರ್ಕಾರಿ ತಾಂತ್ರಿಕ ಪಾಲಿಟೆಕ್ನಿಕ್ ಮಧುಗಿರಿ ತಾಲೂಕಿನ ಗಡಿಭಾಗಕ್ಕೆ ಮಂಜೂರು ಮಾಡಿದ್ದು, ರಾಜ್ಯದ ಗ್ರಾಮೀಣ ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಸಿಗಲಿ ಹಾಗೂ ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ತಾಂತ್ರಿಕ ತರಬೇತಿಗಳು ಲಭ್ಯವಾಗಲಿದೆ ಎಂದು ಉನ್ನತ ಶಿಕ್ಷಣ, ಐಟಿಬಿಟಿ, ಉದ್ಯೋಗ ಸಬಲೀಕರಣ ಸಚಿವ ಡಾ.ಅಶ್ವತ್ಥನಾರಾಯಣ್ ಅಭಿಪ್ರಾಯಪಟ್ಟರು.
ತಾಲೂಕಿನ ಮಿಡಿಗೇಶಿಯ ಬೇಡತ್ತೂರಿನಲ್ಲಿ 8 ಕೋಟಿ ವೆಚ್ಚದ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಶಿಕ್ಷಣ ಕೇಂದ್ರದಲ್ಲಿ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ತರಬೇತಿ, ಇತರೆ ಚಟುವಟಿಕೆಗಳನ್ನು ತರಬೇತಿ ನೀಡಲಾಗುತ್ತದೆ. ಈ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರ ಈ ಕೆಲಸ ಮಾಡಿದೆ. ಇದಕ್ಕಾಗಿ ಹೆಚ್ಚಿನ ಬೇಡಿಕೆಯಿದ್ದು ಅದನ್ನು ಬಗೆಹರಿಸಲಾಗಿದೆ. ಇಲ್ಲಿ ಶಿಕ್ಷಣ ಪಡೆದವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿದ್ದು ನಿರುದ್ಯೋಗ ನಿವಾರಣೆಯಾಗಲಿದೆ. ಇದರಿಂದ ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗಲಿದೆ. ಇದರೊಂದಿಗೆ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಯಂತೆ ಗ್ರಾಮ ಸ್ವರಾಜ್ ಕಲ್ಪನೆಯಂತೆ ಎಲ್ಲಾ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಂಜಿವೀನಿ ಯೋಜನೆಗಾಗಿ 4.5 ಸಾವಿರ ಕೋಟಿ ಹಣ ಮೀಸಲಿಡಲಿಟ್ಟು 45 ಸಾವಿರ ಕೋಟಿಯನ್ನು ಬ್ಯಾಂಕ್ ಲಿಂಕ್ ಮಾಡಲಾಗಿದೆ
ವೈಜ್ಞಾನಿಕ ಬೇಸಾಯಕ್ಕಾಗಿ ಹಲವಾರು ಯೋಜನೆಯ ಮೂಲಕ ತರಬೇತಿ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನ ಸಧೃಡ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ಹಲವು ಕಾರ್ಯಕ್ರಮ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಿ. ಹೊಸದಾಗಿ ಸ್ತ್ರೀ ಸಾಮರ್ಥ್ಯ ಯೋಜನೆಗಾಗಿ 500 ಕೋಟಿ ರು. ಮೀಸಲಿಡಲಾಗಿದೆ. ರಾಜ್ಯದಿಂದ ಮೊದಲು -ಫಾಮ್‌ರ್‍ಲಾ ಆರಂಭವಾಗಿದ್ದು ಬೆಳೆಗಾರ-ಬಳಕೆದಾರನ ನಡುವೆ ದಲ್ಲಾಳಿಗಳ ಸೋಂಕಿಲ್ಲದೆ ಸರ್ಕಾರ ಕೆಲಸ ಮಾಡುತ್ತಿದ್ದು ಕೃಷಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಆಯುಕ್ತ ಪ್ರದೀಪ್, ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಕವಿತಾ ನಾಗರಾಜು, ಭೂಮಿಕಾ, ಜನಮುಖಿ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಲ್.ಸಿ.ನಾಗರಾಜು, ಮಂಡಲಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಮುಖಂಡರಾದ ಶ್ರೀಧರ್, ವಕೀಲ ಭರತ್ ಭೂಷಣ್‌ರೆಡ್ಡಿ ಹಾಗೂ ಇತರರು ಇದ್ದರು