Asianet Suvarna News Asianet Suvarna News

ಮಂಗಳೂರು: 50 ಮನೆಗಳಿಗೆ 5 ಲಕ್ಷ ರು.ಗೂ ಅಧಿಕ ಹಾನಿ

ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಕಾರ್ಕಳದ ಹಲವೆಡೆ 50ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದೆ. ನೀರೆ ಗ್ರಾಮದ ಶಕುಂತಳ ಅಕ್ಕು ಮೂಲ್ಯ ಅವರ ಮನೆಯ ಗೋಡೆಗಳು ಸಂಪೂರ್ಣ ಕುಸಿದಿದ್ದು ಅವರಿಗೆ ಸುಮಾರು 1,25,000 ರು. ನಷ್ಟಸಂಭವಿಸಿದೆ. ಮನೆಯ ಗೋಡೆ, ಛಾವಣಿ ಕುಸಿದು ಒಟ್ಟು 5 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

Around 50 houses damaged in Mangalore due to Heavy Rain
Author
Bangalore, First Published Aug 8, 2019, 11:58 AM IST

ಮಂಗಳೂರು(ಆ.08): ಕಾರ್ಕಳದ ಇಲ್ಲಿನ ನೀರೆ ಗ್ರಾಮದ ಶಕುಂತಳ ಅಕ್ಕು ಮೂಲ್ಯ ಅವರ ಮನೆಯ ಗೋಡೆಗಳು ಸಂಪೂರ್ಣ ಕುಸಿದಿದ್ದು ಅವರಿಗೆ ಸುಮಾರು 1,25,000 ರು. ನಷ್ಟಸಂಭವಿಸಿದೆ.

ಈದು ಗ್ರಾಮದ ಸಜಿ ವಿ.ಸಿ. ಎಂಬ ಮನೆಯ ಗೋಡೆಗಳ ಭಾಗಶಃ ಕುಸಿದು ಸುಮಾರು 35,000 ರು. ಹಾನಿಯಾಗಿದೆ. ಅದೇ ರೀತಿ ಪೆರ್ವಾಜೆ ಕಸಬಾ ಗ್ರಾಮದ ಆನಂದ ಕಾಮತ್‌, ಇರ್ವತ್ತೂರು ಗ್ರಾಮದ ಶಶಿಕಲಾ ಶೆಟ್ಟಿಅವರ ಮನೆಗೆ 25,000 ರು., ಕೌಡೂರು ಗ್ರಾಮದ ವಿಜಯ ಪೂಜಾರ್ತಿ, ಕುಕ್ಕೂಂದೂರು ಗ್ರಾಮದ ನವೀನ್‌ ದೇವಾಡಿಗ ಅವರ ಮನೆಗಳಿಗೆ ತಲಾ 20,000 ರು., ದುರ್ಗ ಗ್ರಾಮದ ಅಮ್ಮಜಾನ್‌ ಬಾಯಿ, ಕಸಬಾ ಗ್ರಾಮದ ರಮೇಶ, ನಿಟ್ಟೆಗ್ರಾಮದ ವಸಂತಿ ಅವರ ಮನೆಗೆ 15,000 ರು. ನಷ್ಟವಾಗಿದೆ.

ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ

ಅದೇ ರೀತಿ ಕಸಬಾ ಗ್ರಾಮದ ವಿಠಲ ಆಚಾರ್ಯ, ಮರ್ಣೆ ಗ್ರಾಮದ ನಾರಾಯಣ ನಾಯಕ್‌, ಮಾಳ ಗ್ರಾಮದ ರತಿ ಮೂಲ್ಯ, ಕುಕ್ಕುಂದೂರು ಗ್ರಾಮದ ಶೀತಲ್‌ ಜೋಸನ್‌, ಎರ್ಲಪಾಡಿ ಗ್ರಾಮದ ಶಿವರಾಮ ಆಚಾರ್ಯ, ಸೂಡ ಗ್ರಾಮದ ವಿಕ್ರ್ಟ ಡಿಸೋಜ, ಇನ್ನಾ ಗ್ರಾಮದ ವಾರಿಜ ಸಾಲಿಯಾನ್‌, ಮುಡಾರು ಗ್ರಾಮದ ಪುಷ್ಪಲತಾ, ದೇವಕಿ ಲಕ್ಷ್ಮಣ ಆಚಾರಿ, ಅಪ್ಪಿ ಶೆಡ್ತಿ, ಶೀನ ಲಕ್ಷ್ಮಣ, ಮಿಯಾರು ಗ್ರಾಮದ ಮಾಧವ ಕಾಮತ್‌, ಕಸಬಾ ಗ್ರಾಮದ ಶೇಖರ ಕುಲಾಲ್‌, ಶಾರದ ದೇಜಪ್ಪ, ದುರ್ಗ ಗ್ರಾಮದ ಅಕ್ಕು ಆಚಾರ್ಯ, ಜೀನತ್‌ ಬಾನು ಅವರ ಮನೆಗಳಿಗೆ ತಲಾ 10,000 ರು., ಕೌಡುರು ಗ್ರಾಮದ ರಘುನಾಥ ಪೂಜಾರಿ, ಮಾಳ ಗ್ರಾಮದ ಮುಟ್ಟಿಶೆಟ್ಟಿ, ಬೋಳ ಗ್ರಾಮದ ದೇವಿ, ಎರ್ಲಪಾಡಿ ಗ್ರಾಮದ ರತ್ನಕರ, ಕೊರಪಳು, ಶೇಖರ ದೇವಾಡಿಗ, ಬೂದ ಮೇರ, ರಾಜೇಶ್‌ ಶೆಟ್ಟಿ, ವಸಂತಿ ಮಡಿವಾಳ, ಪಳ್ಳಿ ಗ್ರಾಮದ ಬೋಜ ಹಾಂಡ, ಹಿರ್ಗಾನ ಗ್ರಾಮದ ಶೀರ್ಧ ಪ್ರಭು, ಮಾಳ ಗ್ರಾಮದ ಅಣಿ ನಾಯ್ಕ ಅವರ ಮನೆಗಳಿಗೆ 3ರಿಂದ 10 ಸಾವಿರ ರು.ಗಳವರೆಗೆ ಹಾನಿಯಾಗಿದೆ.

ಉಕ್ಕಿ ಹರಿಯುತ್ತಿದೆ ನೇತ್ರಾವತಿ, ಕುಮಾರಧಾರ: ಪ್ರವಾಹದ ಆತಂಕ

Follow Us:
Download App:
  • android
  • ios